ಬೀದರ:-ಜ.24. ನಗರದ ಮಹಾಲಕ್ಷ್ಮೀನಾರಾಯಣ ಸಭಾಂಗಣದಲ್ಲಿ ೨೩-೧-೨೦೨೩ ರಂದು ಮಧ್ಯಾಹ್ನ ೧೨-೩೦ ರಿಂದ ಸಂಜೆ ೪-೩೦ ಗಂಟೆವರೆಗೆ ಬೀದರ ಜಿಲ್ಲಾ ಜಾನಪದ ಸಾಹಿತ್ಯ ಸಂಭ್ರಮವನ್ನು ಜರುಗಿತು. ನಾಡಿನ ಖ್ಯಾತ ಜಾನಪದ ಗಾಯಕರಾದ ಶ್ರೀ ಶಂಭುಲಿಂಗ ವಾಲದೊಡ್ಡಿರವರು ಕುಟ್ಟುವ ಬೀಸುವ ಪದ ಹಳ್ಳಿ ಜಾನಪದ ಹಾಡನನ್ನು ಹಾಡುತ್ತಾ ಉದ್ಘಾಟನೆಯನ್ನು ಮಾಡಿದರು ರಾಜಮಾತಾ ಜೀಜಾಬಾಯಿ ಸ್ವಾಮಿ ವಿವೇಕಾನಂದರವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ಹಳ್ಳಿಯ ಹೊಲದಾಗ ಬೆಳ್ಳಿಯ ಬೆಳಚಂದ ಎನ್ನುವ ಹಾಡನ್ನು ಹಾಡುವುದರ ಮೂಲಕ ಉದ್ಘಾಟನೆ ಮಾಡಿ ನಮ್ಮ ನೆಲದ ಸಾಹಿತ್ಯ ಸಂಸ್ಕೃತಿಯ ಇತಿಹಾಸ ತಿಳಿಸಿಕೊಡುವ ವರ್ತಮಾನದ ದಿನಚರಿ ಭವಿಷ್ಯದಲ್ಲಿ ಜಾನಪದ ಸಾಹಿತ್ಯ ಜೀವಂತವಾಗಿಡುವ ಕೆಲಸವನ್ನು ಮಾಡಬೇಕ್ಕಾಗಿದೆ ನಮ್ಮ ಗ್ರಾಮೀಣ ಭಾಗದಲ್ಲಿ ನಮ್ಮ ದೇಶದ ಸಂಸ್ಕೃತಿ ದಿನಲು ನೋಡಬಹುದು.ಅದೆ ನಮ್ಮ ದೇಶದ ಸಂಸ್ಕೃತಿ ವಿವಿಧತೆಯಲ್ಲಿ ಏಕತೆ ಭಾವೈಕ್ಯತೆ ಭಕ್ತಿಯಾಗಿದೆ. ನಾವು ನಮ್ಮವರು ಎನ್ನುವ ಭಾವನೆ ಒಂದಾತ್ಮದ ಬದುಕು ತಿಳಿಸಿಕೊಡುತ್ತದೆ. ಅಧ್ಯಕ್ಷತೆ ವಹಿಸಿದ ನಗರ ಸಭೆ ಸದಸ್ಯ ದಿಗಂಬರ ಮಡಿವಾಳ ಮಾತನಾಡಿ, ಇಂದು ಅತಿವೇಗದಲ್ಲಿ ಹಣವನ್ನು ಸಂಪತನ್ನು ಘಳಿಸುತ್ತಿದ್ದೇವೆ ಆದರೆ ನೆಮ್ಮದಿ ಜೀವನ ನಡೆಸುತ್ತಿಲ್ಲ. ಜಾನಪದ ಸೊಗಡು ಅಳವಡಿಸಿಕೊಂಡಿರುವ ನಮ್ಮ ಗ್ರಾಮೀಣ ಜನರು ಆಯಸ್ಸು ಆರೋಗ್ಯದಿಂದ ಜೀವನ ನಡೆಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನದ ಕಾಲದಲ್ಲಿ ಮೊಬೆಲಿನ ಮಾನವರಾಗಿ ಪ್ರತಿಕ್ಷಣ ಅದು ಹೇಳಿದಂತೆ ನಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದೇವೆ.ಇದರಿಂದ ದೇಶ ಸಾಹಿತ್ಯ ಸಂಸ್ಕೃತಿ ನಮ್ಮಗೆ ಗೊತ್ತಲ್ಲದೆ ಮರೆಯುತ್ತಿದ್ದೇವೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಮೂಲಕ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ. ಮುಖ್ಯ ಅತಿಥಿಗಳಾಗಿ ನಿಲಾಂಬಿಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಸುನೀತಾ ಪಂಕಜಕುಮಾರ, ಹೆತ್ತ ತಂದೆತಾಯಿಯವರ ಸಂಸ್ಕೃತಿಯೆ ನಮ್ಮ ಜಾನಪದ ಸಾಹಿತ್ಯವಾಗಿದೆ. ತಂದೆ ತಾಯಿ ಬಂಧುಬಳಗ ಮರೆತವರು ನಮ್ಮ ಜಾನಪದ ಸಾಹಿತ್ಯ ಸಂಸ್ಕೃತಿ ಮರೆತಂತೆ, ಅದನ್ನು ಅದನ್ನು ಉಳಿಸಿದರೆ ಜಾನಪದ ಸಂಬಂಧಗಳನ್ನು ಉಳಿಯುತವೆ ಕಾಂಗ್ರೆಸ್ ಮುಖಂಡರಾದ ಶಶಿಕುಮಾರ ಪೊಲೀಸ್ ಪಾಟೀಲ್ ಮಾತನಾಡಿ, ನಮ್ಮ ದೇಶದ ಸಾಹಿತ್ಯ ಮತ್ತು ಸಂಪತ್ತು ಗ್ರಾಮೀಣಭಾಗದಲ್ಲಿ ಕಾಣುತ್ತೇವೆ ನಡೆ ನುಡಿ ನಡಾವಳ ಒಂದಾತ್ಮದಿಂದ ಕಾಣುವುದು ಹಳ್ಳಿಗರ ಸಂಸ್ಕೃತಿ ೧೨ ಶತಮಾನದಲ್ಲಿ ಕನ್ನಡಾಕ್ಷರದ ಮೂಲಕ ಬರೆದಿರುವ ವಚನಗಳು ಜಾನಪದ ಸಾಹಿತ್ಯದ ಮೂಲಬೇರಾಗಿವೆ. ಜಾನಪದ ಗಾಯಕರಾದ ಲಕ್ಷö್ಮಣರಾವ ಕಾಂಚೆ ಜಾನಪದ ಸಂಬಂಧಗಳ ಹಾಡುಗಳನ್ನು ಹಾಡಿದರು. ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪ್ರಫುಲಕುಮಾರ ವಿ ಸೋನಿ, ವೇದಿಕೆ ಮೇಲೆ ಉಪಸ್ಥಿತರಿದ್ದರು. ಸ್ವಾಗತ ಪ್ರಾಸ್ತಾವಿಕ ನುಡಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಮಾಡಿದರು ನರೇಶ ರವರು ಕನ್ನಡ ಗೀತೆಗಳನ್ನು ಹಾಡಿದರು. ಕ್ರಾಂತಿ ಗೀತೆಗಳು ಬಕ್ಕಪ್ಪ ದಂಡಿನ ಹಾಗೂ ಸಂಗಡಿಗರು ಹಾಡಿದರು. ಜೋಗಳ ಪದ ಶ್ರೀಮತಿ ಸುನೀತಾ ಎಸ್ ಬಂಗ್ಲೆ ಸಂಗಡಿಗರು, ಸೋಭಾನ ಪದ ಶ್ರೀಮತಿ ಕಮಳಮ್ಮಾ ಸಂಗಡಿಗರು, ಕುಟ್ಟುವ ಬೀಸುವ ಪದ ಶಂಕ್ರಮ್ಮಾ ಸಂಗಡಿಗರು, ಭಜನೆಃ ಭುವನೇಶ್ವರಿ ಮಹಿಳಾ ಸಂಘ ಚಿದ್ರಿ, ಡಾ|| ಬಿ ಆರ್ ಅಂಬೇಡ್ಕರ ಸೇವಾ ಸಮಿತಿ ಮೈಲೂರು ಬೀದರ ರವರು ಹಾಡಿದರು. ವಿವಿಧ ರೀತಿ ಜಾನಪದ ವಾದ್ಯವನ್ನು ದೇವದಾಸ ಚಿಮಕೊಡ ಸಂಗಡಿಗರು. ಜಾನಪದ ನೃತ್ಯ ಚಿನ್ನಮ್ಮಾ ದೊಡ್ಡಮನಿ ಲಾಧ, ಶಾಂತಮ್ಮ ಪ್ರಕಾಶ ವಾಡೆ ಯಲ್ಲಾಲಿಂಗ, ಮಾಡಿದರು ಕುಡಿತದ ಚಟದಿಂದ, ಇಸಪೇಟ್ ಚಟದಿಂದ, ಇಡಿ ಕುಟುಂಬವೇ ಹಾಳಾಗುವ ಹಾಡು ನೃತ್ಯವನ್ನು ಭಾಲ್ಕಿ ತಂಡದಿಂದ ಪ್ರಸಾರ ಮಾಡಲಾಯಿತು. ವೀರ ಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ಮುಕೇಶ ಶಾಹಗಂಜ್ ಉಪಾಧ್ಯಕ್ಷ ಅಶೋಕ ವಗ್ಗೆ, ಪ್ರಧಾನ ಕಾರ್ಯದರ್ಶಿ ಬಸವರಾಜ ಜಡಗೆ, ತಾಲ್ಲೂಕ ಅಧ್ಯಕ್ಷ ಸಂದೀಪ ಚಾಂಬೊಳ, ವಿಶ್ವ ಕನ್ನಡಿಗರ ಸಂಸ್ಥೆ ಉಪಾಧ್ಯಕ್ಷ ಪ್ರಕಾಶ, ಕಾರ್ಯದರ್ಶಿ ಪ್ರಿಯಾಂಕ, ಖಜಾಂಚಿ ಶಾರದ, ಸದಸ್ಯರಾದ ಸಂಗೀತ ರವಿಕುಮಾರ ತೇಜಮ್ಮಾ ಕಸ್ತೂರಿಬಾಯಿ ಉಜ್ವಲಾ ಮುಂತಾದವರಿಗೆ ಸನ್ಮಾನ ಮಾಡಲಾಯಿತು.
ವರದಿ:ಬಿ.ಎಸ್.ಬಾಗೇವಾಡಿಮಠ.