ಅಥಣಿ: ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದದು.
ಜನವರಿ 25,1950 ರಂದು ಚುನಾವಣಾ ಆಯೋಗವನ್ನು ಸ್ಥಾಪಿಸಲಾಯಿತು ಮತ್ತು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಮತದಾನ ಮಾಡುವ ಮೂಲಭೂತ ಹಕ್ಕನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ನೀಡಲಾಯಿತು ಅಂದಿನಿಂದ ಈ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ ಮತ್ತು ನಾಗರಿಕರು ತಮ್ಮ ಹಕ್ಕುಗಳನ್ನು ಚಲಾಯಿಸುವ ಮತ್ತು ದೇಶಕ್ಕೆ ನಾಯಕನನ್ನು ಆಯ್ಕೆ ಮಾಡಲು ಮತ ಚಲಾಯಿಸುವ ಬಗ್ಗೆ ತಿಳಿಯುತ್ತಾರೆ. ರಾಷ್ಟ್ರೀಯ ಮತದಾರರ ದಿನವನ್ನು ಮೊದಲ ಬಾರಿಗೆ 2011ರಲ್ಲಿ ಆಚರಿಸಲಾಯಿತು.ಈ ದಿನವನ್ನು ಆಚರಿಸುವ ಉದ್ದೇಶವು 18 ವರ್ಷ ವಯಸ್ಸಿನ ಯುವ ಮತದಾರರನ್ನು ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು ಮತ್ತು ಚುನಾವಣಾ ಕಾರ್ಯವಿಧಾನಗಳ ಬಗ್ಗೆ ಜ್ಞಾನವನ್ನು ಪಡೆಯುವುದು ಎಂದು ಶ್ರೀ ಶ್ರೀಶೈಲ ದೇಗೌಡ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಶ್ರೀ ರಮೇಶ ಸರ್ ,ಶ್ರೀ ಎಸ್ ಎಮ್ ತಳವಾರ ಸರ್ ಹಾಗೂ ನಾನಾಸಾಬ ಹಿಪ್ಪರಗಿ ಸರ್ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.
ವರದಿ: ಎಸ್ ವಿಶ್ವನಾಥ