ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಗಣೇಶ ಸುಭ್ರಮಣ್ಯ ಮತ್ತು ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಟಾಪನೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಅಯ್ಯಪ್ಪ ದೇವಸ್ಥಾನ ಸಮಿತಿ ಟ್ರಸ್ಟವತಿಯಿಂದ ಸೋಮವಾರ ಬ್ರಾಹ್ಮಿ ಮೂಹೂರ್ತದಲ್ಲಿ ಶ್ರೀಗಣೇಶ ಸುಬ್ರಮಣ್ಯ ಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಟಾಪನೆ ಜರುಗಿತು.
ಮೂರ್ತಿ ಪ್ರತಿಷ್ಟಾಪನೆಯಲ್ಲಿ ಬುಕ್ಕಸಾಗರ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಚಾರ್ಯ ಮಹಾಸ್ವಾಮಿ ದಿವ್ಯ ಸಾನಿದ್ಯ ವಹಿಸಿದ್ದರು. ನಂತರ ಮಾತನಾಡಿ ಪ್ರತಿಯೊಬ್ಬರು ದೇವರನ್ನು ಶ್ರದ್ದೆ ಭಕ್ತಿಯಿಂದ ಪೂಜಿಸುವುದರ ಜೊತೆಗೆ ಆರೋಗ್ಯ ನೆಮ್ಮದಿ ಸಕಲ ಕಾರ್ಯಗಳು ಸಿದ್ದಿಯಾಗುತ್ತವೆ ಎಂದರು ಇದೇ ಸಮಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕಂಪ್ಲಿ ಪ್ರಭುಸ್ವಾಮಿ ಕಲ್ಮಠದ ಅಧ್ಯಕ್ಷ ರಾಮಸಾಗರ ಹೆಚ್. ಶಿವಶಂಕರ ಗೌಡ್ರು, ಗ್ರಾ.ಪಂ ಅಧ್ಯಕ್ಷೆ ಆಶಾ, ಗ್ರಾ.ಪಂ ಪಿಡಿಓ ಮಲ್ಲಿಕಾರ್ಜುನ, ತಾ.ಪಂ ಮಾಜಿ ಸದಸ್ಯ ಜಗದೀಶ ಗೌಡ್ರು, ರಾಮಸಾಗರ ಅಯ್ಯಪ್ಪ ದೇವಸ್ಥಾನ ಸಮಿತಿ ಟ್ರಸ್ಟ ಅಧ್ಯಕ್ಷ ಬೋವೇರ್ ನಾರಾಯಣ ಸ್ವಾಮಿ, ಗೌರವ ಅಧ್ಯಕ್ಷರಾದ ಬಾರಕೀರ ಶಿವಪ್ಪ, ಪೋಸ್ಟ ಶಿವಪ್ಪ ಗುರುಸ್ವಾಮಿ, ಉಪಾಧ್ಯಕ್ಷ ಜಗನ್ನಾಥ ಗೌಡ್ರು, ಕಾರ್ಯದರ್ಶಿ ಬೋವೇರ್ ಮಂಜುನಾಥ, ಗುರುಸ್ವಾಮಿಗಳಾದ ಹೆಚ್. ಅಮರೇಶ, ಬಿ. ಪ್ರಕಾಶ, ಅಯ್ಯಣ್ಣ, ಕಂಪ್ಲಿ ಯರ‍್ರೀಸ್ವಾಮಿ, ಪಿ. ಬಸವರಾಜ, ವಿಜಯ ಭಾಸ್ಕರ, ಪಲ್ಲೆದ ಮಂಜುನಾಥ, ಡ್ರೈವರ್ ಮಲ್ಲಿ, ಕಿರಣ ಶೆಟ್ಟಿ ಸೇರಿದಂತೆ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಮತ್ತು ಸಕಲ ಭಕ್ತಾಧಿಗಳಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!