ಭಾವನೆಗಳ ಹೊಯ್ದಾಟ
ವಿಚಾರಗಳ ತಾಕಲಾಟ,
ಹೇಳಬೇಕೆಂದು ಚಡಪಡಿಸಿದರೂ ಬರುತ್ತಿಲ್ಲ,
ಒಂದೂ ಮಾತು,
ಇದಕೇನು ಮಾಡಲಿ ನಾನು?
ಬತ್ತಿ ಹೋಗಿವೆ ಭಾವನೆಗಳು,
ಮನದ ಮೂಲೆಯಲ್ಲೆಲ್ಲೋ,
ಕುಳಿತಿವೆ ಅವಿತು,
ಸಿಲುಕಿರುವೆ ನಾ
ಪ್ರೇಮದ ಸೆಳೆತಕೆ,
ಬಳುಕುವ ಬಾಲೆ,
ಅಳುಕುವೆ ಏಕೆ,
ಬಾರದಾಯಿತೇ ಮಾತು!
- ಶಿವಪ್ರಸಾದ್ ಹಾದಿಮನಿ. ✍️
ಕೊಪ್ಪಳ, ಮೊಬೈಲ್. 7996790189.




















