ಸಿರುಗುಪ್ಪ- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿ ಬಿ ಎಸ್ ಇ 10ನೇ ತರಗತಿಯ ಮೊದಲ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ ಬಳ್ಳಾರಿ ನಗರ ಗಾಂಧಿನಗರದ ನಾರಾಯಣ ಕೋ ಶಾಲೆಯ ವಿದ್ಯಾರ್ಥಿನಿ ಸಿರುಗುಪ್ಪದ ಎ. ಸನಾ ತಬಸ್ಸುಮ್ ಶೇ.94.4 ರಷ್ಟು 562/600 ಉತ್ತಮ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಸಿರುಗುಪ್ಪ ನಗರದ ಸೌದಾಗರ್ ಮೊಹಲ್ಲಾ ಇಬ್ರಾಹಿಂ ಮಂಜೀಲ್ ಸಾಮಾಜಿಕ ಕಾರ್ಯಕರ್ತ ಅಲ್ಹಾಜ್ ಎ.ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರ ಮೊಮ್ಮಗಳು ಎ.ಮೊಹಮ್ಮದ್ ರಫಿ, ಅವರ ಮಗಳು ಹಾಜಿ ಎ. ಮೊಹಮ್ಮದ್ ಇಬ್ರಾಹಿಂ, ಎ. ಮೊಹಮ್ಮದ್ ನೌಷಾದ್ ಅಲಿ ಇವರ ಸಹೋದರನ ಮಗಳು ಎ.ಸನಾ ತಬಸ್ಸುಮ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ಶೈಕ್ಷಣಿಕ ವರ್ಷ ಆರಂಭದಿಂದಲೇ ಆಸಕ್ತಿಯಿಂದ ಓದಿರುವುದಕ್ಕೆ ಪರೀಕ್ಷೆ ಬರೆದಿರುವುದಕ್ಕೆ ಯಶಸ್ವಿಗೆ ದೊರೆತಿರುವ ಗೌರವಕ್ಕೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ.
ಹಾಗೂ ಶಾಲೆಯ ಆಡಳಿತ ವರ್ಗ ಪ್ರಾಂಶುಪಾಲರು ಮತ್ತು ಶಾಲೆಯ ಶಿಕ್ಷಕರ ಬಳಗ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿರುತ್ತಾರೆ.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















