ಸಿರುಗುಪ್ಪ – ನಮ್ಮ ಮಕ್ಕಳಿಗೆ ಗುಸುಲ್ ವಜೂ ನಮಾಜ್ ದೀನಿ ತಾಲೀಮ್ ಸ್ನಾನ ಕೈ ಕಾಲು ಮುಖ ತೊಳೆಯುವುದು ಶಿಸ್ತು ಸ್ವಚ್ಛತೆ ಪರಿಸರ ಸನ್ಮಾರ್ಗಕ್ಕೆ ನಮಾಜ್ ಮಾಡುವುದು ಖುರಾನ್ ಓದುವುದು ಉಜ್ವಲ ಭವಿಷ್ಯಕ್ಕೆ ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಯಲು ತಂದೆ ತಾಯಿ ಪೋಷಕರು ಪಾಲಕರು ಕಲಿಸುವವರು ಕಲಿಯುವವರು ಸಾಂಪ್ರದಾಯಿಕರಾಗಿರಬೇಕು ಎಂದು ಬಳ್ಳಾರಿ ಮಹಾನಗರದ ಖತೀಬೊ ಇಮಾಮ್ ಯಾಸ್ಮಿನ್ ಮಸ್ಜಿದ್ ಮೊಹಮ್ಮದ್ ಫೈಜ್ ರೆಹಮಾನ್ ಧಾರ್ಮಿಕ ಪಂಡಿತರು ಮುಖ್ಯ ಪ್ರವರ್ಚಕರಾಗಿ ಹೇಳಿದರು. ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪಟ್ಟಣದ ಜುಮ್ಮಾ ಮಸೀದಿ ಬಳಿ ಹಜರತ್ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಎಜುಕೇಶನಲ್ ಅಂಡ್ ಚಾರಿಟೇಬಲ್ ನ ಸೈಯದ್ ರಾಬಿಯಾಬಿ ಇಸ್ಲಾಮಿಕ್ ಸಮ್ಮರ್ ಕ್ಯಾಂಪ್ ಯುವತಿಯರು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ ಬೇಸಿಗೆ ಶಿಬಿರ ಆರಂಭಿಸಲಾಯಿತು. ತೆಕ್ಕಲಕೋಟೆ ಸಾಹುಕಾರ್ ಜಮೀನ್ದಾರ್ ಸೈಯದ್ ಶಾ ಅಹಮದ್ ಖಾದ್ರಿ ಅವರು ದಿವ್ಯ ಸಾನಿಧ್ಯ ವಹಿಸಿದರು. ಖ್ಯಾತ ಉದ್ಯಮಿ ಹಾಜಿ ಸಾಹಬ್ ನವಾಜ್ ಅಹಮದ್ ಜುಮ್ಮಾ ಮಸೀದಿಯ ಮುತುವಲ್ಲಿ ಖಾದರ್ ವಲಿ ಸಮಾಜದ ಮುಖಂಡರಾದ ಬಾವಿ ಮನೆ ಮೊಹಮ್ಮದ್ ಸಾಬ್ ಮುಲ್ಲಾಗನಿ ಮಹಬೂಬ್ ಸಾಬ್ ಇಮಾಮ್ ಅತಾರಿ ಮುಲ್ಲಾ ಮಸೀದಿಯ ಇಮಾಮ್ ಬಾಬರ್ ಮಿಯಾ ರಜಿಬಿ ನೌ ಜವಾನ್ ಕಮಿಟಿಯ ಗೌಸ್ ಮಕಾಂದಾರ್ ಇಂಜಿನಿಯರ್ ಎಲಿಗಾರ್ ಅಬ್ಬಾಸ್ ಅಲಿ ಬಾವಿ ಮನೆ ಎಜಾಜ್ ಬಾವಿ ಮನೆ ಅಫ್ಜಲ್ ಆಸಿಫ್ ಮುಜಾವರ್ ಅಲ್ತಾಫ್ ಮಕಾಂದಾರ್ ತೌಫಿಕ್ ಮಸ್ತಾನ್ ಮೌಜನ್ ದಾದಾ ಖಲಂದರ್ ಬಿಬಿ ಆಶೀಯಾ ಹುಸ್ ನಾ ಅಲೀಮಾ ಫೈಜಿ ಅಲೀಮ್ ಗುಲಾಂ ನಬಿ ಸೈಯದ ರಾಬಿಯಾಬಿ ಮಹಿಳಾ ಸಹಕಾರ ಸಂಘದ ಪದಾಧಿಕಾರಿಗಳು ರೈಸ ಅಂಜುಮ್ ಸನಾ ತಬಾಸುಮ್ ರೆಹಮತ್ ಮುಜಾವರ್ ಶಾಹಿದ ಮುಜಾವರ್ ಸೈಯದ್ ಶಾ ಮುಸ್ತಫಾ ಖಾದ್ರಿ ಇಂಜಿನಿಯರ್ ಸೈಯದ್ ಶಾ ಶಂಶುದ್ದೀನ್ ಖಾದ್ರಿ ಸೈಯದ್ ಶಾ ಮೋಹಿಯದ್ದೀನ್ ಖಾದ್ರಿ ಸಮಾಜ ಸುಧಾರಕ ಸಾಕ್ಷರತಾ ಲೋಕ ಶಿಕ್ಷಣ ಸದಸ್ಯರು ಅಬ್ದುಲ್ ನಬಿ ದೇಶನೂರು ಹಾಜಿ ಅಬ್ದುಲ್ ಗಫೂರ್ ಸಾಬ್ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಮತ್ತಿತರರು ಇದ್ದರು ಆರಂಭದಲ್ಲಿ ಹಸಿರು ಸಸಿಗೆ ನೀರು ಹಾಕುವ ಮೂಲಕ ಇಸ್ಲಾಮಿಕ್ ಸಮರ್ ಕ್ಯಾಂಪ್ ಉದ್ಘಾಟನೆ ಖುರಾನ್ ಫಾತೇಹ ಹಂದೋಸನಾ ಸಲಾತೋ ಸಲಾಂನೊಂದಿಗೆ ಸರ್ವರಿಗೂ ಪ್ರಸಾದ ವಿತರಿಸಲಾಯಿತು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















