ನಿಸರ್ಗದ ಪಚ್ಚೆ ಗರಿಗಳು ಕವಲಿನಲಿ
ಪುಟ್ಟ ಕೆಂಬಣ್ಣದ ನಕ್ಷತ್ರ ನಡುವಿನಲಿ
ಪಾರಿಜಾತದ ಬೊಟ್ಟುಗಳು ಸುತ್ತಲಲಿ
ಶೋಭಿಸಿವೆ ದಳಗಳು ಅಲಂಕಾರದಲಿ
ಚಿತ್ತಾರವಾಗಿ ಅರಳಿದೆ ಕ್ರಿಯಾಶೀಲತೆಯಲಿ
ಕಾವ್ಯವೊಂದು ಮೂಡಿದೆ ಸುಪ್ರಭಾತದಲಿ
ಆಸ್ವಾದನೆಗಾಗಿ ಬರುತಿದೆ ಸುಮನಗಳಲಿ
ಆರಂಭಿಸಲು ನಿತ್ಯ ಕಾಯವ ಖುಷಿಯಲಿ
-ಲಲಿತಾ ಕೆ ಆಚಾರ್, ಬೆಂಗಳೂರು.




















