ಜೋಳದಲಿನ ಬಂಗಾರದ ಎಳೆಗಳು
ಜೊತೆಯಲಿ ಹೀರೆಕಾಯಿ ನಾರುಗಳು
ಕತ್ತರಿಸಿದ ಕೇಸರಿಯ ಕಿತ್ತಳೆ ಸಿಪ್ಪೆಗಳು
ಅಲ್ಲಲ್ಲಿ ಬೇಲಿಯ ಹೂಗಳ ಬೊಟ್ಟುಗಳು
ಅಲಂಕಾರದಲಿ ಗುಲಾಬಿ ಎಸಳುಗಳು
ಪಳೆಯುಳಿಕೆಯ ಮಿಶ್ರಣದ ಹೂರಣವು
ಸೇರಿ ಮೂಡಿರುವ ಸುಲಲಿತ ಚಿತ್ತಾರವು
ನಿತ್ಯ ಓದುಗರಿಗೊಂದು ಕಾವ್ಯೋದಯವು
ನೋಡುವ ಮನಗಳಿಗೆ ನವ ಚೈತನ್ಯವು
ಆಸ್ವಾದಿಸುವ ಸುಮನಗಳಿಗೆ ಶುಭೋದಯವು
- ಲಲಿತಾ ಕೆ ಆಚಾರ್, ಬೆಂಗಳೂರು.




















