
ಕೊಟ್ಟೂರು ಏ. 20 : ಪಟ್ಟಣದ ಡೋಣೂರು ಚಾನುಕೋಟಿ ಮಠದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಜಂಗಮ ವಟುಗಳಿಗೆ ಶಿವದೀಕ್ಷೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಠದ ಪೀಠಾದ್ಯಕ್ಷರಾದ ಷ||ಬ್ರ||ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹಮ್ಮಿಕೊಂಡಿದ್ದರು.
ಶ್ರೀಮದ್ ಉಜ್ಜಿಯನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಅಭಿನವ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ಜಂಗಮ ವಟುಗಳಿಗೆ ಶಿವದೀಕ್ಷೆ ಕಾರ್ಯಕ್ರಮವನ್ನು ಗಂಗೆಪೂಜೆ, ಅರಿಶಿನ ಶಾಸ್ತ್ರ, ಮುಡಿತೆಗೆದು ಮಂತ್ರದೀಕ್ಷೆ ಬೋಧಿಸಿ, ಜೋಳಿಗೆ ಬೆತ್ತ ನೀಡಿ. ಜಂಗಮರ ಆಶೋತ್ತರಗಳನ್ನು ಮಕ್ಕಳಿಗೆ ಉಚ್ಚರಿಸಲಾಯಿತು. ನಂತರ ನಾಡಿನ ವಿವಿಧ ಭಾಗಗಳಿಂದ ಬಂದಿರುವ ಸುಮಾರು 11 ಜೋಡಿಗಳ ವಧು ವರರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು. ದುಬಾರಿ ದುನಿಯಾ ಕಾಲದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಶಿವದೀಕ್ಷೆ ಕಾರ್ಯಕ್ರಮಗಳಿಂದಾಗಿ ಬಡವರಿಗೆ ಖರ್ಚಿನ ಹೊರೆ ತಗ್ಗಲಿದೆ. ಚಾನುಕೋಟಿ ಶ್ರೀಗಳು ಸಾಮಾಜಿಕ ಕಳೆಕಳಿವುಳ್ಳವರು ಸಾರ್ವಜನಿಕ ಆರೋಗ್ಯ ಹಿತಾಸಕ್ತಿಯಿಂದ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರದಂತಹ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ಶ್ರೀಗಳು ಶಿಕ್ಷಣ, ಆರೋಗ್ಯ, ವಸತಿ ವ್ಯವಸ್ಥೆಗಳಲ್ಲಿ ಜನರಿಗೆ ಸೇವೆ ನೀಡಿದವರು ಎಂದರು.
ಈ ಸಂದರ್ಭದಲ್ಲಿ ಚಾಪಿ ಚಂದ್ರಪ್ಪ ಅಧ್ಯಕ್ಷರು ಪಂಚಮಿಶಾಲಿ, ಅಡಿಕೆ ಮಂಜುನಾಥ್ ಬ್ಲಾಕ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಜಂಗಮ ಸಮಾಜದ ಅಧ್ಯಕ್ಷರು, ಬದ್ದಿ ಮರಿಸ್ವಾಮಿ ಡಿಎಸ್ಎಸ್ ಜಿಲ್ಲಾ ಸಂಚಾಲಕರು, ವೀಣಾ ವಿವೇಕಾನಂದ ಗೌಡ ಮಾಜಿ ಪಟ್ಟಣ ಪಂಚಾಯತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ವರದಿ: R H ಕೊಟ್ರೇಶ




















