ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಸರ್ಕಾರಿ ನೌಕರರು ಪಡೆಯುವ ಸಂಬಳ ಕಡಿತವಾಗಿ, ಈಗಿನಂತೆ ಜೀವನ ನಡೆಸಲಾಗದೆ ಪರಿತಪಿಸುವ ಕಾಲ ಬರುವುದು ಬಹಳ ದೂರ ಉಳಿದಿಲ್ಲ

ಪ್ರಕೃತಿಯ ವಿನಾಶದ ಮುನ್ಸೂಚನೆ ರೈತರ ವಿವಿಧ ಸಮಸ್ಯೆಗಳ ರೂಪದಲ್ಲಿ ಮೊದಲು ವ್ಯಕ್ತವಾಗುವುದು. ಇಂದು ಎಲ್ಲ ವೃತ್ತಿಗಳನ್ನು ಗಣನೆಗೆ ತೆಗೆದುಕೊಂಡರೆ, ಕೃಷಿ ವೃತ್ತಿ ಅತ್ಯಂತ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ.

ಇಂದು ಅನೇಕ ರೈತರು ತಾವು ಉಳುಮೆಗಾಗಿ ಖರ್ಚು ಮಾಡಿದ ಹಣವನ್ನೂ ಕೂಡ ಮರಳಿ ಪಡೆಯಲಾಗದ ಸಂದರ್ಭಗಳು ಸೃಷ್ಟಿಯಾಗುತ್ತಿವೆ. ವರ್ಷದಿಂದ ವರ್ಷಕ್ಕೆ ಕೃಷಿ ಉತ್ಪಾದನಾ ಖರ್ಚು ಹೆಚ್ಚಾಗುತ್ತಾ, ಆದಾಯ ಕಡಿಮೆಯಾಗುತ್ತಿದೆ. ಈಗಾಗಲೇ 50 ಪ್ರತಿಶತಕ್ಕಿಂತ ಹೆಚ್ಚು ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಈ ಎಲ್ಲ ಕಾರಣಗಳಿಂದ ಪ್ರಕೃತಿ ವಿನಾಶದ ಕೆಟ್ಟ ಪರಿಣಾಮವನ್ನು ಉಳಿದ ಎಲ್ಲ ವೃತ್ತಿಯ ಜನರೂ ಅನುಭವಿಸಬೇಕಾಗುವ ದಿನಗಳು ಬಹಳ ದೂರ ಉಳಿದಿಲ್ಲ.

ರೈತರ ನಂತರ ಪ್ರಕೃತಿ ವಿನಾಶದ ಕೆಟ್ಟ ಪರಿಣಾಮವನ್ನು ಎದುರಿಸುವವರೇ ಸರ್ಕಾರಿ ನೌಕರರಾಗಿದ್ದಾರೆ. ಇತ್ತೀಚೆಗೆ ಅತೀ ವೃಷ್ಟಿಯಿಂದ ರೈತರು ಸಂಕಷ್ಟದಲ್ಲಿ ಸಿಲಿಕಿದ ಸಂದರ್ಭದಲ್ಲಿ, ಸರ್ಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ರೈತರ ಒಳತಿಗಾಗಿ ದಾನ ರೂಪದಲ್ಲಿ ನೀಡಿದ ಉದಾಹರಣೆಯಿದೆ. ಇದು ಖಂಡಿತ ಒಳ್ಳೆಯ ನಿರ್ಧಾರ. ಆದರೆ, ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಿ ಆಹಾರದ ಕೊರತೆ ತೀವ್ರವಾದಾಗ, ಆಗಿನ ಸರ್ಕಾರವು ಖಡ್ಡಾಯವಾಗಿ ನೌಕರರ ಸಂಬಳವನ್ನು ಕಡಿತಗೊಳಿಸಬಹುದು ಅಥವಾ ನೌಕರರ ಸಂಖ್ಯೆಯನ್ನು ಕಡಿತಗೊಳಿಸಬಹುದು. ಈ ರೀತಿಯ ನಿರ್ಧಾರಗಳು ಆಗಿನ ಸಂದರ್ಭದಲ್ಲಿ ಆಳುವ ಸರ್ಕಾರಕ್ಕೆ ಅನಿವಾರ್ಯವಾಗುವುದು.

ಮುಂದಿನ ದಿನಗಳಲ್ಲಿ, ಈ ಮೇಲಿನ ಅನಿವಾರ್ಯತೆಯ ಸಂದರ್ಭವನ್ನು ಸರ್ಕಾರಿ ನೌಕರರು ಏಕೆ ಎದುರಿಸಬೇಕಾಗುವುದು ಎಂಬುದನ್ನು ನೌಕರರು ಈಗಲೇ ತಿಳಿದುಕೊಳ್ಳುವುದು ಅವರ ಭವಿಷ್ಯದ ದೃಷ್ಟಿಕೋನದಿಂದ ಬಹಳ ಒಳ್ಳೆಯದು.

ಇಂದು ಅನೇಕ ಸರ್ಕಾರಿ ನೌಕರರು ತಮ್ಮ ನಿವೃತ್ತಿ ವೇತನದ ಬಗ್ಗೆ ಚಿಂತಿಸುತ್ತಿದ್ದಾರೆ. ಅದರೆ, ಇನ್ನು ಕೆಲವೇ ವರ್ಷಗಳಲ್ಲಿ ತಮಗೆ ಬರಬೇಕಾದ ಸಂಬಳವೂ ಕೂಡ ಬರದಿರುವ ವಾತಾವರಣ ನಿರ್ಮಾಣವಾಗುವುದು ಎಂಬುದರ ಅರಿವು ಅವರಿಗಿಲ್ಲ.

ಇಂದು ಸರ್ಕಾರಿ ನೌಕರರು ತಮ್ಮ ಮತ್ತು ತಮ್ಮ ಮಕ್ಕಳ ಭವಿಷ್ದದ ದೃಷ್ಟಿಕೋನದಿಂದ ಯಾವ ರೀತಿಯ ಮುಂದಿನ ಹೆಜ್ಜೆ ಇಡಬೇಕು ಎಂಬುದನ್ನು ತಿಳಿದುಕೊಳ್ಳಲೇಬೇಕಾದ ಸಂದರ್ಭ ಇದಾಗಿದೆ.

ಪ್ರಕೃತಿಯ ವಿನಾಶದಿಂದ ಮಾನವ ಕುಲ ಸಂಕಷ್ಟಕ್ಕೆ ಈಡಾಗುವುದಕ್ಕೆ ಮುಖ್ಯ ಕಾರಣ ದೂರದೃಷ್ಟಿಕೋನ ರಹಿತ ಸರ್ಕಾರಿ ಜನಪ್ರೀಯ ಯೋಜನೆಗಳು. ಇದರ ಕುರಿತು ಎಲ್ಲರೂ ಆಳವಾಗಿ ಚಿಂತನೆ ಮಾಡಬೇಕಾದ ಸಂದರ್ಭವೇ ಚುನಾವಣೆಯ ಸಮಯ.


ಬಸವರಾಜ (ಅಭೀಃ)
ನಮ್ಮ ಮಕ್ಕಳನ್ನು ಉಳಿಸಿ ಅಭಿಯಾನದ ಸ್ವಯಂ ಸೇವಕ, ವಿಜಯಪುರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ