ಮಸ್ಕಿ ತಾಲೂಕಿನ ಇರಕಲ್ ಮಠದ ಪೂಜ್ಯ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಇರಕಲ್ ಮಠದ ಜಾತ್ರೆಯ ಅಂಗವಾಗಿ ವನಸಿರಿ ಫೌಂಡೇಶನ್ ಗೆ ಬೆನ್ನೆಲುಬಾಗಿರುವ ಸಹಕಾರ ನೀಡುತ್ತಿರುವ ಪ್ರಾದೇಶಿಕ ಅರಣ್ಯ ವಲಯ ಸಹಕಾರದೊಂದಿಗೆ ವನಸಿರಿ ಫೌಂಡೇಶನ್ ವತಿಯಿಂದ ಇರಕಲ್ ಮಠಕ್ಕೆ1008 ಸಸಿಗಳು ವಿತರಣೆ ಮಾಡಲು ಸಸಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪರಮ ಪೂಜ್ಯ ಬಸವ ಪ್ರಸಾದ ಮಹಾಸ್ವಾಮಿಗಳು ಮಾತನಾಡಿ ಜಗತ್ತಿನಲ್ಲಿ ಮನುಷ್ಯರಿಗೆ ಮುಖ್ಯವಾದದ್ದು ಪರಿಸರ,ಈ ಪರಿಸರದಿಂದ ಮನುಷ್ಯ ಗಾಳಿ,ನೀರು,ಆಹಾರ ಸೇವನೆ ಮಾಡಿ ಜೀವಿಸುತ್ತಿದ್ದಾನೆ ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯರೇ ಪರಿಸರವನ್ನು ಹಾಳುಮಾಡುತ್ತಿರುವುದು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು.ಇಂತಹ ಸಂದರ್ಭದಲ್ಲಿ ಕೂಡ ಸಿಂಧನೂರಿನಲ್ಲಿ ಅಮರೇಗೌಡ ಮಲ್ಲಾಪೂರ ಅವರಂತಹ ಪರಿಸರ ಪ್ರೇಮಿಗಳು ಮನುಷ್ಯರೂ ಇದ್ದಾರೆ ಎಂದು ಹೇಳಲು ಹೆಮ್ಮ ಅನಿಸುತ್ತಿದೆ.ಇದೇ ದಿನಾಂಕ 28 ರ ಮಂಗಳವಾರ ನಡೆಯುವ ಶ್ರೀಮಠದ ಜಾತ್ರಾ ಅಂಗವಾಗಿ ಆಗಮಿಸುವ ಭಕ್ತರಿಗೆ ನಾವುಕೂಡ ಸಸ ವಿತರಣೆ ಪರಿಸರ ಜಾಗೃತಿ ಮೂಡಿಸಬೇಕೆಂದು ವನಸಿರಿ ಅಮರೇಗೌಡ ಮಲ್ಲಾಪೂರ ಅವರಿಗೆ ತಿಳಿಸಿದಾಗ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಸುಮಾರು1008 ಸಸಿಗಳನ್ನು ಮಠಕ್ಕೆ ನೀಡಿದ್ದಾರೆ ಅವರ ಜೊತೆಗೆ ಅವರ ತಂಡದ ಸದಸ್ಯರು ಕೂಡ ಅತ್ಯಂತ ಉತ್ಸಾಹಕರಾಗಿ ಕಾರ್ಯನಿರ್ವಹಿಸುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ ವನಸಿರಿ ಫೌಂಡೇಶನ್ ತಂಡದವರಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು,ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಅದ್ಯಕ್ಷ ರಾಜು ಪತ್ತಾರ ಬಳಗಾನೂರ,ವೀರನಗೌಡ ಬಳಗಾನೂರು ಹಾಗೂ ಶ್ರೀಮಠದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.