ವಿಜಯಪುರ/ಇಂಡಿ: ಒಂದಾನೊಂದು ಕಾಲದಲ್ಲಿ ಹಿರೇ ಇಂಡಿ ಮಾತ್ರ ಅಸ್ತಿತ್ವದಲ್ಲಿತ್ತು,ಈಗಿನ ಕಿರಿ ಇಂಡಿ ಕಾಡು ಬನ ಪ್ರದೇಶವಾಗಿತ್ತು.ಈಗಿರುವ ಶಾಂತೇಶ್ವರ ದೇವಸ್ಥಾನದ ಪ್ರದೇಶ ಸ್ವಯಂ ಭೂಲಿಂಗವಿದ್ದತ್ತು.ಈ ಕಾಡು ಬನ ಪ್ರದೇಶಕ್ಕೆ ಲೋಕೋದ್ದಾರಕ್ಕೆ ಬಂದ ಶ್ರೀ ಶಾಂತೇಶನೆಂಬ ಶಿವನ ಅಂಶದ ಮಹಾ ತಪಸ್ವಿ ಈ ಪ್ರದೇಶದಲ್ಲಿ ನೆಲೆ ನಿಂತು ತಪ್ಪಸನ್ನು ಆಚರಿಸುತ್ತಾನೆ.ತಪ್ಪಸ್ಸಿಗೆ ಕುಳಿತ ಪವಾಡ ಪುರುಷನ ಸುತ್ತ ದಿನಗಳೆಂದಂತೆ ಹುತ್ತ ಬೆಳೆದು ನಿಲ್ಲುತ್ತಾನೆ.ಹುತ್ತದಲ್ಲಿ ಬಂಧಿಯಾಗಿದ್ದ ಶಾಂತೇಶ್ವರನಿಗೆ ಕಿರಿಯಿಂಡಿ ಆಕಳು ಮೇಯುತ್ತಾ ಬಂದು ದಿನಾಲೂ ಹುತ್ತಿಗೆ ಹಾಲು ಹಿಂಡಿ ಹೋಗುತ್ತಿರುತ್ತದೆ.ಇದನ್ನು ದನಗಾಯಿಯೊಬ್ಬ ಒಮ್ಮೆ ಕಾದು ನೋಡಿ ಊರಿನ ಪ್ರಮುಖರಿಗೆ ವಿಷಯ ತಿಳಿಸುತ್ತಾನೆ.
ಆಗ ಎಲ್ಲರೂ ಬಂದು ನೋಡಲು ಹುತ್ತಿನಿಂದ ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ ಕೇಳುತ್ತಿರುತ್ತದೆ…ಕುತೂಹಲ ತಡೆಯದೆ ಜನ ಹುತ್ತನ್ನು ಕೆಡವಿ ನೋಡಿದಾಗ ಅದರಲ್ಲಿನ ಮಹಾ ತಪಸ್ವಿ ಅವತಾರವಾಗಿ ಹೊರ ಹೊಮ್ಮುತ್ತಾನೆ…ಮಹಾಮಹಿಮನ ಕಾಲಿಗೆ ಬಿದ್ದ ಜನ ಆತನ ಭಕ್ತರಾಗುತ್ತಾರೆ.ಶ್ರೀಶಾಂತೇಶ್ವರ ಕೂಡಾ ಈಗಿನ ಶಾಂತೇಶ್ವರ ದೇವಾಲಯದಲ್ಲಿನ ಪ್ರಾಚೀನ ಲಿಂಗದ ಶಿವನ ಸೇವೆಗೆ ನಿಲ್ಲುತ್ತಾನೆ
ಈ ಭಾಗದಲ್ಲಿ ನೆಲೆನಿಂತು ರೋಗಿಗಳಿಗೆ ಗಾಳಿಯಾದವರಿಗೆ ಬೆತ್ತ ಪವಾಡದಿಂದ ಕಾಯಿಲೆಗಳನ್ನು ವಾಸಿ ಮಾಡುತ್ತಾನೆ ಒಮ್ಮೆ ಶಾಂತೇಶ್ವರ ದಿಬ್ಬದ ಮೇಲೆ ಕಾರ್ಯ ನಿರತನಾಗಿರುವಾಗ ಸತ್ತ ಕಂದನ ಹೊತ್ತು ತಂದ ಒಬ್ಬ ತಾಯಿಯ ಮಗುವನ್ನು ಪುನಃ ಜೀವಂತ ಗೊಳಿಸುತ್ತಾನೆ. ವಾಡಿಕೆಯಂತೆ ಕೂಸೂ ಹಾರಿಸುವ ಪದ್ದತಿ ಶುರುವಾಗುತ್ತದೆ
ಅನೇಕ ಭಕ್ತರನ್ನು ಉದ್ದರಿಸಿ ಕೊನೆಗೊಮ್ಮೆ ಕಾಲನ ಕರೆಗೆ ಓಗೊಡುತ್ತಾನೆ.ಒಮ್ಮೆ ಲಿಂಗದ ಸೇವೆಯಲ್ಲಿದ್ದಾಗ ಆತನ ಹೆಗಲ ಮೇಲಿನ ಸಿತಾಳ (ನೀರಿನ) ಬಿಂದಿಗೆ ಕೈ ಜಾರಿ ಬೀಳುತ್ತದೆ ಕೈಯಲ್ಲಿದ್ದ ಬೆತ್ತ ಕಳಚುತ್ತದೆ ಕಾಲಜ್ಞಾನಿ ಶಾಂತೇಶ್ವರನಿಗೆ ಎಲ್ಲವೂ ಅರ್ಥವಾಗುತ್ತದೆ ಇನ್ನೂ ಬಂದ ಕೆಲಸ ಮುಗಿಯಿತು ನಾನಿನ್ನು ಹೊರಬೇಕು ಎಂದು ಸಂಕಲ್ಪಿತನಾಗುತ್ತಾನೆ ಆಗ ಪರಮಾತ್ಮ ಧರೆಗಿಳಿದ ಪಾಶ ಕೈಯಲ್ಲಿ ಹಿಡಿದು ಬಂದು ಆತನಿಗೆ ಒಯ್ಯಲು ಬರುತ್ತಾನೆ.ಆಗ ಶ್ರೀ ಶಾಂತೇಶ್ವರನ ಕಂಡು ಆತನ ಭಕ್ತಿಗೆ ಮೆಚ್ಚಿ ಬಾವ ಪರವಶನಾಗಿ ಕೈಯಲ್ಲಿನ ಪಾಶ/ ಹಗ್ಗ ಕೈ ಚೆಲ್ಲುತ್ತಾನೆ ಆತನನ್ನು ಭಾವಪರವಶನಾಗಿ ಅಪ್ಪಿಕೊಂಡು ಈಗೀರುವ ಲಿಂಗದಲ್ಲಿ ಲೀನ ಗೊಳಸಿಕೊಳ್ಳುತ್ತಾನೆ.
ಆಗ ಊರ ಜನ ಶ್ರೀ ಶಾಂತೇಶ್ವರ ಪವಾಡದ ಕುರುಹುಗಳನ್ನು ನೆನಪಿಸಿಕೊಂಡು ಜಾತ್ರೆ ಮಾಡುತ್ತಾರೆ
ಹಗಲು ದೀವಟಿಗೆ,ಪತಾಕೆ,ಪುರವಂತರು,
ನಂದಿಕೋಲು,ಚತ್ರಿ,ಚಾಮರ,ಚೌರ,
ಈಗೀನ ಜಂಗಿ ನಿಕಾಲಿ ಗದಾ ಕುಸ್ತಿ ಕೂಸು ಹಾರಿಸುವದು ಉಗ್ಗಾಳಿಸುವದು (ಉಘೇ ಉಘೇ)
ಶಾಂತೇಶ್ವರರ ಉತ್ಸವ ಮೂರುತಿಯೊಂದಿಗೆ ಪಲ್ಲಕಿ ಮೆರವಣಿಗೆ ಭಾಜಾ ಭಜಂತ್ರಿ ಸಕಲ ವಾಧ್ಯ ವೈಭವಗಳೊಂದಿಗೆ ಜಾತ್ರೆ ನೆರವೇರುತ್ತದೆ ಈ ಜಾತ್ರೆ ಎಲ್ಲ ವೈಭವಗಳನ್ನು ಶಾಂತೇಶ್ವರ ಜೀವನ ಚರಿತ್ರೆಯನ್ನು ಹೊಸ ಹಾಡಿನ ಸಮೇತ ವೇದಿಕೆಯ ಮೇಲೆ ಸೃಷ್ಠಿ ಮಾಡುವ ಚಿಕ್ಕ ಪ್ರಯತ್ನ ಮಾಡಿರುವೆ.
-ನಿಮ್ಮ ಸೇವಾಕಾಂಕ್ಷಿ
ಶ್ರೀದಶರಥ ಕೋರಿ ಶಿಕ್ಷಕರು
ಕೆ ಜಿ ಎಸ್ ಶಾಲೆ ಇಂಡಿ ಗಾಂಧಿ ಚೌಕ ಇಂಡಿ
ವರದಿ:ಅರವಿಂದ್ ಕಾಂಬಳೆ