ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದರ್ಶನ ಮಾಡಿದ್ದು ನನ್ನ ಸೌಭಾಗ್ಯ ಹಾಗೂ ಅಭಿವೃದ್ಧಿಯೆ ನಮ್ಮಬಿಜೆಪಿ ಪಕ್ಷದ ಮೂಲ ಮಂತ್ರವಾಗಿದೆ :ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ

ಹನೂರು:ದೇಶದಲ್ಲಿ ಅಭಿವೃದ್ಧಿಗೆ ಮತ್ತೊಂದು ಹೆಸರೇ ಬಿ ಜೆ ಪಿ ಪಕ್ಷವಾಗಿದೆ
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಮಾತನಾಡಿ ಮಿತ್ರರೆ ಮಹದೇಶ್ವರ ಕ್ಷೇತ್ರದಲ್ಲಿ ಆರ್ಶಿವಾದ ಪಡೆದು ವಿಜಯ ಸಂಕಲ್ಪ ಯಾತ್ರೆ ಪ್ರಾರರಂಭಿಸಿದ್ದೇವೆ ಈ ರಥವು 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ ,ಹಾಗೂ 8000 ಕೀ ಮಿ ಸಂಚರಿಸಿ ಬಿಜೆಪಿಯ ಬಗ್ಗೆ ಜನರಿಗೆ ಅರಿವು ಮೂಡಿಸುವುದೇ ನಮ್ಮ ಗುರಿ , ಮೋದಿಯವರು ಅಭಿವೃದ್ಧಿ ಕೆಲಸ ಕಾರ್ಯಗಳೆ ನಮಗೆ ಶ್ರೀ ರಕ್ಷೆಯಾಗಿದೆ ಈಗಾಗಲೇ ಕರ್ನಾಟಕವು ತಂತ್ರಜ್ಞಾನದಲ್ಲಿ ಮುಂದುವರಿದಿದೆ ಯಡಿಯೂರಪ್ಪ ಹಾಗೂ ಬೋಮ್ಮಾಯಿಯವರ ಆಡಳಿತ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ ,ದಶಪಥ ರಸ್ತೆಗಳಂತ ಕಾಮಗಾರಿಗೆ ಚಾಲನೆ ದೊರೆತಿದೆ, ಆಧುನಿಕ ಭಾರತದ ನಿರ್ಮಾಣ ಕಾರ್ಯದಲ್ಲಿ ಕರ್ನಾಟಕ ರಾಜ್ಯವಿದೆ ಪ್ರತಿದಿನ ಉತ್ತಮ ರಸ್ತೆಯ ಕಾಮಗಾರಿ, ಮಾಡಲಾಗುತ್ತದೆ ,ಮೊದಲು ರೈಲ್ವೆಯಲ್ಲಿದ್ದ ನಷ್ಟ ತಪ್ಪಿದೆ ದೇಶವು ಡಿಟಿಟಲ್ ಇಂಡಿಯಾವಾಗಿದೆ ,ಆಟೋಮೊಬೈಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದೆ , ಪ್ರಪಂಚದಲ್ಲಿ ಭಾರತವು ಪ್ರಕಾಶಮಾನವಾಗಿದೆ ,ಈಗಾಗಲೇ ಶಿವಮೂಗ್ಗದಂತ ಹಲವಾರು ಕಡೆ ವಿಮಾನ ನಿಲ್ದಾಣ ನಿರ್ಮಿಸಿದೆ ,ನವಿಕರಿಸಿದ ಬೆಳಗಾವಿ ರೈಲ್ವೆ ನಿಲ್ದಾಣವಿದೆ ,ಭಾರತ ಸರ್ಕಾರದ ಅಯಾವ್ಯಯದಲ್ಲಿ ಹೆಚ್ವು ಹಣವನ್ನು ಅಭಿವೃದ್ಧಿಗೆ‌ ಮಿಸಲಿರಿಸಿದೆ ಎಲ್ಲಾ ಮಕ್ಕಳಿಗೂ ಸ್ಕಾಲರ್ ಶಿಪ್ ,ಹಿಂದುಳಿದ ಜನಾಂಗದ ಅಭಿವೃದ್ಧಿಗೆ ನಮ್ಮ ಆದ್ಯತೆ ಹಲವಾರು ಯೋಜನೆಗಳನ್ನು ಜನರಿಗೆ ನೀಡಿದೆ ಎಂಬತ್ತು ಕೋಟಿ ಜನರಿಗೆ ಐದು ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ ,ಎರಡು ಕೋಟಿ ಐವತ್ತು ಲಕ್ಷ ಜನರಿಗೆ ಅನಿಲ ಸಂಪರ್ಕ ಕಲ್ಪಿಸುತ್ತದೆ ,ಕಿಸಾನ್ ಸಮ್ಮಾನ್ ಸೇರಿದಂತೆ ಹಲವಾರು ಯೋಜನೆಯನ್ನು ಜಾರಿಗೆ ತಂದಿದೆ ಎಂದರು .
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ ಎಸ್ ವೈ ರವರು ಹನೂರು ಕ್ಷೇತ್ರದ ಅಭ್ಯರ್ಥಿಯಾದವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಕಾಂಗ್ರೆಸ್ ನವರ ಜಾತಿಬಲ ಹಣ ಬಲಕ್ಕೆ ಮಾರುಹೋಗದೆ ನಮಗೆ ಮತ ನೀಡಿ ಸರ್ಕಾರದ ಯೋಜನೆಯನ್ನು ಕಾರ್ಯಕರ್ತರು ಪ್ರತಿಯೊಂದು ಮನೆಗೂ ಹೋಗಿ ಪ್ರಚಾರ ಮಾಡಿ ಮುಂದಿನ ದಿನಗಳಲ್ಲಿ ನಾನು ವಿಜೇಯೆಂದ್ರ ,ಬೊಮ್ಮಾಯಿ ಸೇರಿದಂತೆ ಎಲ್ಲಾರು ಕ್ಷೇತ್ರಕ್ಕೆ ಬರುತ್ತೆವೆ. ಎಲ್ಲಾ ರೈತರಿಗೂ ಹತ್ತುಸಾವಿರ ಹಣ ನೀಡಿದ್ದೆವಿ, ಹೆಣ್ಣು ಮಕ್ಕಳಿಗೆ ಭಾಗ್ಯಲಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದೆವಿ , ನಿಮ್ಮಗಳ ಪರವಾಗಿ ನಾವಿದ್ದೆವಿ ನಮ್ಮ ಪಕ್ಷದಲ್ಲಿ ಮೋದಿ ,ಅಮಿತ್ ಷಾ ಸೇರಿದಂತೆ ಅನೇಕ ನಾಯಕರಿದ್ದಾರೆ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡಮಟ್ಟದ ನಾಯಕರಿಲ್ಲ,ನಮ್ಮ ಪಕ್ಷದ ಗೆಲುವಿಗೆ ಹನೂರಿನ ಕಾರ್ಯಕರ್ತರೆ ಸಾಕ್ಷಿ ನಮ್ಮ ಸರ್ಕಾರ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ಸತ್ಯ ನಾನು ಮತ್ತೊಮೆ ನಿಮ್ಮೂರಿಗೆ ಬರ್ತಿನಿ ,ನಿಮ್ಮ ಪ್ರೀತಿಗೆ ನಾನು ಅಬಾರಿ ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿ ಎಮ್ ಬಸವರಾಜ ಬೋಮ್ಮಾಯಿ ಯವರು ಮಾತನಾಡಿ ರೈತರಿಗೆ ಹೆಚ್ಚು ಕೊಡುಗೆ ಕೊಟ್ಟವರೆ ನಮ್ಮ ಬಿ ಎಸ್ ವೈ ಪ್ರವಾಹ ಬಂದಂತಹ ಸಮಯದಲ್ಲಿ ತತ್ ಕ್ಷಣವೇ ಸ್ಪಂದಿಸಿದರು ಭಾಗ್ಯಲಕ್ಷ್ಮಿ ,ಸಂದ್ಯಾ ಸುರಕ್ಷ ಯೋಜನೆ ,ಕಿಸಾನ್ ಸಮ್ಮಾನ್ ಯೋಜನೆ ,ಪ್ರಧಾನ ಮಂತ್ರಿ ಅವಾಸ್ ಯೋಜನೆ ,ಮುದ್ರ ಯೋಜನೆ ಹಲವಾರು ಯೋಜನೆ ನಮ್ಮ ಪಕ್ಷ ಮಾಡಿದ್ದೇವೆ ,ಗ್ರಾಮ ಪಂಚಾಯತಿಯಲ್ಲಿ ಎರಡು ಸಂಘಗಳಿಗೆ ತಲಾ ಐದು ಲಕ್ಷ ಮಾಡಿದ್ದೇವೆ ನಮ್ಮ‌ ದೀನ ದಲಿತರಿಗೆ ಏಳುರಷ್ಟು ಹೆಚ್ಚಿಸಿದ್ದೆವಿ , ಚಾಮರಾಜನಗರ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ‌ ,ಮಕ್ಕಳ ಹಾಸಿಗೆಯಲ್ಲಿ ಭ್ರಷ್ಟಚಾರ ಮಾಡುತ್ತಿದ್ದಾರೆ ಚಾಮರಾಜನಗರ ಜಿಲ್ಲೆಗೆ ವಿಶೇಷ ಯೋಜನೆ ನೀಡುತ್ತೇವೆ ,ನವ ಭಾರತವನ್ನು ಕಟ್ಟಲು ಪಣ ತೋಡೊಣ ಎಂದು ತಿಳಿಸಿದರು . ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ,ಸಚಿವರುಗಳಾದ ಕುಮಾರಿ ಶೋಭಾ ಕರಂದ್ಲಾಜೆ ,ಶ್ರೀನಿವಾಸ್ ಪೂಜಾರಿ ,ಅರಗ ಜ್ಞಾನೇಂದ್ರ ,ಪಕ್ಷದ ಅಭ್ಯರ್ಥಿಗಳಾದ ಪರಿಮಳ ನಾಗಪ್ಪ, ಡಾಕ್ಟರ್ ಪ್ರೀತನ್ ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾಕ್ಟರ್ ದತ್ತೇಶ್ ಕುಮಾರ್ , ಜನಧ್ವನಿ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ವೆಂಕಟೇಶ್ ,ಯುವ ಬಿಜೆಪಿ ಮುಖಂಡ ನಿಶಾಂತ್ , ಮಂಡಲದ ಅಧ್ಯಕ್ಷರಾದ ಸಿದ್ದಪ್ಪ,ಮಾಧ್ಯಮ ಸಂಚಾಲಕ ಕೆ.ಬೀ.ಮಧು ಸೇರಿದಂತೆ ಹಲವರು ಹಾಜರಿದ್ದರು.

ವರದಿ :ಉಸ್ಮಾನ್ ಖಾನ್ .

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ