ಇಂಡಿ : ಪಟ್ಟಣದಲ್ಲಿ ಬಿಜೆಪಿ ಎಸ್.ಟಿ ಮೋರ್ಚಾ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು,ಮುಖ್ಯ ಅತಿಥಿಯಾಗಿ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಥಮ ಬಾರಿಗೆ ಆಗಮಿಸುತ್ತಿದ್ದಾರೆ. ಅದ್ದೂರಿಯಾಗಿ ಈ ಸಮಾವೇಶ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ತಳವಾರ ಸಮಾಜ ಜನರು ಪಾಲ್ಗೊಳ್ಳಲು ತಳವಾರ ಸಮಾಜದ ಹಾಗೂ ಬಿಜೆಪಿ ಮುಖಂಡ ಅನೀಲ ಜಮಾದಾರ ಮನವಿ ಮಾಡಿಕೊಂಡರು.
ಪಟ್ಟಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತಾನಾಡಿದ ಅವರು, ಮಾರ್ಚ್ 4 ಸಾಯಂಕಾಲ 5 ಘಂಟೆಗೆ ಸಿಂದಗಿ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಅವರ ಮನೆಯ ಹತ್ತೀರ ಬಿಜೆಪಿ ಬೃಹತ್ ಎಸ್ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಈ ಭಾಗದಲ್ಲಿ ಎಸ್ಟಿ ಸಮುದಾಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತಳವಾರ ಸಮುದಾಯವಿದೆ. ಭಾರತೀಯ ಜನತಾ ಪಾರ್ಟಿಗೆ ಈ ಕಾರ್ಯಕ್ರಮ ಎಷ್ಟು ಮುಖ್ಯವೋ..! ಅಷ್ಟೇ ತಳವಾರ ಸಮುದಾಯಕ್ಕೂ ಮುಖ್ಯ ವಾಗಿದೆ. ಸಂಸತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ಸಮುದಾಯಕ್ಕೆ ನ್ಯಾಯ ಕೊಡಿಸಲು ಸ್ವವಿವರವಾಗಿ ಮಾತಾಡಿದ್ದು,ಹೋರಾಟ ಮಾಡಿದ್ದು, ಸಂಸದ ಪ್ರತಾಪ್ ಸಿಂಹ.ಇನ್ನೂ ಬಿಜೆಪಿಯಲ್ಲಿ ಅನೇಕ ಹಿರಿಯರು ಮುಖಂಡರು ಹೋರಾಟ ಮಾಡಿದ್ದಾರೆ.ಅದರಲ್ಲಿ ಮೈಸೂರು ಸಂಸದರು ಪ್ರಮುಖರು. ಎಸ್ಟಿ ಬೃಹತ್ ಸಮಾವೇಶಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ತಳವಾರ ಸಮುದಾಯಕ್ಕೆ ಹೆಮ್ಮೆಯ ಸಂಗತಿ. ಉತ್ತರ ಕರ್ನಾಟಕದಲ್ಲಿಯೇ ತಳವಾರ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅದರಲ್ಲಿಯೇ ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು ತಳವಾರ ಸಮುದಾಯದ ಸಂಖ್ಯೆ ಹೊಂದಿದ್ದೆವೆ. ತಳವಾರ ಸಮುದಾಯದ ಬಹುದಿನಗಳ ಬೇಡಿಕೆ ಜೊತೆಗೆ ಇಡೀ ಸಮುದಾಯ ಕುಟುಂಬಗಳು ಜೀವನ ಪರ್ಯಂತ ನೆನೆಸುವಂತಹ, ಸುಖವಾಗಿರುವಂತಹ ಕಾರ್ಯ ಈ ಸಮುದಾಯಕ್ಕೆ ಮಾಡಿದ್ದು ಭಾರತೀಯ ಜನತಾ ಪಾರ್ಟಿ ಎಂದು ಹೇಳಿದರು. ಸಮಾವೇಶದಲ್ಲಿ ಬಹುಪಾಲು ಸಂಖ್ಯೆಯಲ್ಲಿ ತಳವಾರ ಸಮುದಾಯ ಜನರು ಪಾಲ್ಗೊಳ್ಳವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಕಾರಣಿಕತೃರಾಗಬೇಕು. ಇದು ಸಮುದಾಯದ ಶಕ್ತಿ ಪ್ರದರ್ಶನ ಕಾರ್ಯಕ್ರಮ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡ ಕೃಷ್ಣ ಸುಣಗಾರ, ರವಿ ವಗ್ಗೆ, ಬಾಬು ಚಿಕ್ಕಮಣ್ಣೂರ, ತಮ್ಮಣ್ಣ ವಾಲಿಕಾರ, ಸಿದ್ದಣ್ಣ ತಳವಾರ, ಕೋಟೆಪ್ಪ ನಾಲ್ವರ, ಹಣಮಂತ ಬಿಲ್ಕರ,ಸೋಮನಾಥ ಜಮಾದಾರ, ರೆವಣಸಿದ್ದ ಹತ್ತಳ್ಳಿ, ಸಂಕು ಜಮಾದಾರ ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ. ಅರವಿಂದ್ ಕಾಂಬಳೆ