ಸಿಂಧನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರಕ್ಕೆ ಎರಡು ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ ದಿನಾಂಕ ಒಂದರಿಂದ ನೌಕರರ ಬೇಡಿಕೆ ಈಡರಿಸದಿದ್ದರೆ ಕರ್ತವ್ಯವನ್ನು ಕಡಿತಗೊಳಿಸಿ ಹೋರಾಟ ಮಾಡುವುದಾಗಿ ಹೇಳಿದ್ದು ಆದುದರಿಂದ ನಾವು ಸಿಂಧನೂರು ತಾಲೂಕಿನ ಆರೋಗ್ಯ ಇಲಾಖೆಯು ಈ ಹೋರಾಟಕ್ಕೆ ಬೆಂಬಲವನ್ನು ನೀಡುತ್ತೇವೆ. ಈ ಸಂದರ್ಭದಲ್ಲಿ ತಾಲೂಕಿನ ವೈದ್ಯರಾದ ನಾಗರಾಜ್ ಕಾಟ್ವ ಮಾತನಾಡಿ ನಮ್ಮ ಬೆಂಬಲ ಹೋರಾಟಕ್ಕಾಗಿದೆ ಆದರೆ ನಮ್ಮ ಕೆಲಸ ಕಾರ್ಯಗಳು ಸ್ವಲ್ಪ ಬದಲಾವಣೆಯನ್ನು ಕಂಡುಕೊಂಡಿದ್ದೇವೆ.ನಮ್ಮ ಆರೋಗ್ಯ ಇಲಾಖೆ ಸಾಂಕೇತಿಕವಾಗಿ ಪಟ್ಟಿಯನ್ನು ಧರಿಸಿ ಈ ಒಂದು ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಹಾಗೂ ರಾಜ್ಯ ಸರ್ಕಾರ ಏಳನೇ ವೇತನ ಆಯೋಗ ಶಿಫಾರಸ್ಸು ಮಾಡಿ. NPS ರದ್ದುಪಡಿಸಿ OPSನಾಗಿ ಬದಲಾವಣೆ ಮಾಡಬೇಕು. ಮತ್ತು ಇವತ್ತು ನಾವು ಒಳ ರೋಗಿಗಳ ತಪಾಸಣೆಯನ್ನು ಬಂದು ಮಾಡಿದ್ದೇವೆ ಆದರೆ ಹೆರಿಗೆ ಕೋಣೆ ಅಥವಾ ಕ್ಯಾಜುವಲ್ಟಿ ಮತ್ತು ಒಳ ರೋಗಿಗಳ ವಿಭಾಗಗಳನ್ನು ಯಾವುದೇ ಮುಚ್ಚದೆ ಹಾಗೂ ಯಾವುದೇ ತುರ್ತು ಚಿಕಿತ್ಸೆ ಬಂದಂತಹ ರೋಗಿಗಳಿಗೆ ತಪಾಸಣೆ ನೀಡಿ ಸಾಂಕೇತಿಕವಾಗಿ ನಾವು ಈ ಹೋರಾಟಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ನೌಕರರು ಮತ್ತು ವೈದ್ಯರು ಉಪಸ್ಥಿತಿಯಲ್ಲಿದ್ದರು.
ವರದಿ:- ವೆಂಕಟೇಶ.ಹೆಚ್. ಬೂತಲದಿನ್ನಿ
