ಕರ್ನಾಟಕ ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಗದೊಮ್ಮೆ ಭಾರತೀಯ ಜನತಾ ಪಕ್ಷದ ಪ್ರಚಂಡ ವಿಜಯದ ಜೈತ್ರಯಾತ್ರೆಗೆ ವಿಜಯಸಂಕಲ್ಪ ರಥಯಾತ್ರೆ ಆರಂಭವಾಗಿದೆ ಇದಕ್ಕೆ ಸಾಥ್ ನೀಡಲು ಬಹುದೊಡ್ಡ ಯೋಜನೆ ಒಂದು ಬೆಂಗಳೂರು ಕ್ಷೇತ್ರಗಳಲ್ಲಿ ಪಾರುಪತ್ಯ ಸಾಧಿಸುವುದು ಎರಡನೇಯದಾಗಿ ಬೆಳಗಾವಿ ಜಿಲ್ಲೆಯ ಹದಿನೆಂಟು ಕ್ಷೇತ್ರಗಳ ಪೈಕಿ ಕನಿಷ್ಠಪಕ್ಷ ಹದಿನೈದು ಅಭ್ಯರ್ಥಿಗಳನ್ನು ಗೆದ್ದುಕೊಂಡರೆ ಅಳಿದುಳಿದ ಕರ್ನಾಟಕದಲ್ಲಿ ಮತ್ತೆ ಗತವೈಭವವನ್ನು ಮರುಕಳಿಸುವ ಸಂಕಲ್ಪದೊಂದಿಗೆ ರಾಷ್ಟ್ರೀಯ ನಾಯಕರು ದೃಡ ಸಂಕಲ್ಪದ ಯೋಜನೆ ಉದ್ದೇಶ.
ಚಾಕಚಕ್ಯತೆ,ಮುತ್ಸದ್ದಿತನ,ಮುಂದಾಲೋಚನೆ, ದೂರದೃಷ್ಟಿಯ ಆಲೋಚನೆಗಳು ರಾಜ್ಯ ರಾಜಕೀಯ ಚಟುವಟಿಕೆಗಳು ಚುನಾವಣಾ ರಣರಂಗದಲ್ಲಿ
ಗೆಲುವು ಸುಲಭ ಮಾಡಿಕೊಳ್ಳಲು ಈಗಿನಿಂದಲೇ ಭರ್ಜರಿ ತಳಪಾಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಿಗೆ ವರದಾನವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ ಕಾರಣ ಅಭ್ಯರ್ಥಿಗಳ ವರ್ಚಸ್ಸಿಗಿಂತ ಪಕ್ಷದ ಸಿದ್ಧಾಂತ.ನಿಯಮ ಜಯದ ಸರಮಾಲೆಯನ್ನು ಮುಂದುವರೆಸುವ ಲೆಕ್ಕಾಚಾರ ಸಹಜವಾಗಿ ಉತ್ತುಂಗಕ್ಕೆರುವ ಎಲ್ಲಾ ಲೆಕ್ಕಾಚಾರ ಮುನ್ನೆಲೆಗೆ ಬರುತ್ತಿವೆ ಕಾರಣ ಕಾಂಗ್ರೆಸ್ಸಿನ ಕಾರ್ಯಕರ್ತರ ಉತ್ಸಾಹ ಕಡಿಮೆಯಾಗಿಲ್ಲ ಎಂದೆನಿಸಿದರೂ ರಾಷ್ಟ್ರೀಯ ನಾಯಕರ ಮಾರ್ಗದರ್ಶನದ ಕೊರತೆ ಯೋಜನೆಯಿಲ್ಲದ ಲೆಕ್ಕಾಚಾರ ಜನರ ಸಹಕಾರ ಇದ್ದರೂ ಆಕಾರ ಕೊಡಲು ಇರಬೇಕಾದ ಗತ್ತು ಇಂದಿನ ರಾಜ್ಯ ಮತ್ತು ರಾಷ್ಟ್ರ ಕಾಂಗ್ರೆಸ್ಸಿನಲ್ಲಿ ಇಲ್ಲ ಎಂಬ ಸಂದೇಶ ಮತದಾರನಿಗೆ ಖಚಿತವಾದ ಮಾಹಿತಿ ರವಾನೆಯಾಗುತ್ತಿದೆ ಜೊತೆಗೆ ಪ್ರವಾಹದಂತೆ ಭಾರತೀಯ ಜನತಾ ಪಕ್ಷದ ರಾಷ್ಟ್ರ ನಾಯಕರ ರೋಡ್ ಶೋ ರಥಯಾತ್ರೆಗಳು.
ರಾಜನಾಥ ಸಿಂಗ್.ಅಮಿತ್ ಷಾ.ಮೋದಿ.ಜೆ.ಪಿ.ನಡ್ಡಾ.
ಒಬ್ಬರಾದ ಮೇಲೆ ಒಬ್ಬರು ದಕ್ಷಿಣ ಭಾರತದ ಬಿಜೆಪಿ ಬಾಗಿಲನ್ನು ಯಾವುದೇ ಕಾರಣಕ್ಕೂ ಮುರಿದುಕೊಳ್ಳಲು. ಇದ್ದಂತಹ ತೆರೆದು ಬಾಗಿಲನ್ನು ಮುಚ್ಚಲು ಯಾವುದೇ ಕಾರಣಕ್ಕೂ ಇಷ್ಟವಿಲ್ಲ ಹೀಗಾಗಿ ಶತಾಯಗತಾಯ ಕಲ್ಪನೆಗೂ ಮೀರಿ ಪ್ರಯತ್ನ ನಡೆಸಿದ್ದಾರೆ ಇದಕ್ಕೆ ಪುಷ್ಟಿ ನೀಡುವಂತೆ ಇಂದು ಆರಂಭವಾದ ವಿಜಯ ಸಂಕಲ್ಪ ಯಾತ್ರೆ ಅಮಿತ್ ಷಾ ನಂತರ ಮೋದಿಯ ಭರ್ಜರಿ ರೋಡ್ ಶೋ ಜೆ.ಪಿ.ನಡ್ಡಾರ ಸಂಘಟನೆ.
ರಾಜನಾಥಸಿಂಗ್ ರ ನಂದಗಡದ ರಾಯಣ್ಣನ ಸಮಾಧಿಯಿಂದ ಆರಂಭವಾಗಿರುವ ಇಂದಿನ ಸಮಾವೇಶಗಳು ರಾಜ್ಯ ರಾಜಕೀಯ ಬೆಳವಣಿಗೆಗೆ ದಿಕ್ಸೂಚಿಯಾಗಿದೆ ಎಂಬ ವಿಶ್ವಾಸದ ಅಲೆಗಳು ಭಾರತೀಯ ಜನತಾ ಪಕ್ಷದ ಪಾಳೆಯದಲ್ಲಿ ಭುಗಿಲೆದ್ದಿದೆ ಆದರೂ ರಾಜ್ಯ ರಾಜಕೀಯ ನಾಯಕರು ಎಷ್ಟರಮಟ್ಟಿಗೆ ಸಮತೋಲನವನ್ನು ಕಾಪಾಡಿಕೊಂಡು ಗುರಿ ಮುಟ್ಟುತ್ತಾರೆ ಎಂಬುವುದು ಮುಂಬರುವ ದಿನಗಳು ನಿರ್ಧರಿಸಲಿವೆ.
ವರದಿಗಾರ:ದಿನೇಶಕುಮಾರ ಅಜಮೇರಾ