ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
ನಮ್ಮ ತಂದೆಯವರು ಸಾವಳಗಿಯಲ್ಲಿ ( ತಾಲೂಕ ಜಮಖಂಡಿ- ಜಿಲ್ಲಾ ಬಾಗಲಕೋಟೆ)(1962-66) 4 ವರ್ಷಗಳವರೆಗೆ ಕೆಲಸ ಮಾಡಿದರು. ಸಾವಳಗಿ ಹಿಂದಿನ ರಾಷ್ಟ್ರಪತಿಗಳಾದ ಶ್ರೀ ಬಿಡಿ ಜತ್ತಿ ಅವರ ತವರೂರು. ಅಂಚೆ ಇಲಾಖೆಯ ಸೂಪರಿಂಟೆಂಡೆಂಟ್ ಹಾಗೂ ಇನ್ಸ್ಪೆಕ್ಟರ್ ರವರು ಸಾವಳಗಿ ಪೋಸ್ಟ್ ಆಫೀಸ್ ಅನ್ನು ಸಂದರ್ಶಿಸಿದರು. ಶ್ರೀ ಎಸ್.ಎಸ್. ಪಾಟೀಲ, ಇನ್ಸ್ಪೆಕ್ಟರ್ ರವರು ತಮ್ಮ ಇನ್ಸ್ಪೆಕ್ಷನ್ ರಿಪೋರ್ಟದ ಕೊನೆಯ ಪ್ಯಾರಾದಲ್ಲಿ ಹೀಗೆ ಹೇಳುತ್ತಾರೆ” ಶ್ರೀ ಕುಲಕರ್ಣಿ, ಸಬ್ ಪೋಸ್ಟ್ ಮಾಸ್ಟರ್ ರವರು ಪೋಸ್ಟ್ ಆಫೀಸಿನ ದಾಖಲೆಗಳನ್ನು ನಿಯಮಕ್ಕೆ ತಕ್ಕಂತೆ ,ಅತ್ಯಂತ ಸಮರ್ಪಕವಾಗಿ ಇಟ್ಟಿರುತ್ತಾರೆ. ಪೋಸ್ಟ್ ಆಫೀಸ್ ನ್ನು ಸ್ವಚ್ಚವಾಗಿ, ಚೊಕ್ಕಟವಾಗಿ ಇಟ್ಟಿರುತ್ತಾರೆ. ಸಬ್ ಪೋಸ್ಟ್ ಮಾಸ್ಟರ್ ಶ್ರೀ ಕುಲಕರ್ಣಿಯವರ ಕೆಲಸ ಶ್ಲಾಘನೀಯ ವಾಗಿದೆ ಎಂದು ದಾಖಲಿಸಲು ಇಷ್ಟ ಪಡುತ್ತೇನೆ.” ಹೀಗಾಗಿ ಅವರಿಗೆ “WIN” ಪ್ರಶಸ್ತಿಯು ಸಂದಾಯವಾಯಿತು. ಅದು ಒಬ್ಬ ಸಬ್ ಪೋಸ್ಟ ಮಾಸ್ಟರ್ ರಿಗೆ ಕೊಡಲ್ಪಡುವ ಅತ್ಯಂತ ಹಿರಿದಾದ ಗೌರವದ ಪ್ರಶಸ್ತಿ ಯಾಗಿತ್ತು. ಈ ಗೌರವದ ಪ್ರಶಸ್ತಿ ಪಡೆದವರಿಗೆ ರೂಪಾಯಿ 20/- ಮೌಲ್ಯದ ಉಡುಗೊರೆ ಕೊಡಲ್ಪಡುತ್ತಿತ್ತು. ಈಗ 60 ವರ್ಷಗಳ ನಂತರವೂ ಉಡುಗೊರಯು ( ಫೋಟೋ ಲಗತ್ತಿಸಲಾಗಿದೆ) ಅದೇ ಹೊಳಪಿನಿಂದ ಹೊಸದರಂತೆ ಕಂಗೊಳಿಸುತ್ತಿದೆ. ಈ ಉಡುಗೊರೆಯನ್ನು ಅವರ ಸಾಧನೆಯ ಪ್ರತೀಕವಾದ ನೆನಪಿನ ಆಸ್ತಿ ಎಂದು ನಾವು ಕಾಪಿಟ್ಟು ಕೊಂಡಿದ್ದೇವೆ.
Asset 21
ಸರ್…ತಮ್ಮ ಮನೆಯಲ್ಲಿ ಹಳೆಯದಾದ ವಸ್ತುಗಳ ಸ೦ಗ್ರಹವೇ ಇರಬೇಕು..
- Mr. Nagraj Nadagouda
Asset 21 : 1963 ರಲ್ಲೇ 20 ರೂ! ದೊಡ್ಡ ಮೊತ್ತವೇ.
- shri H V SriPrakash, Kodichikkanhalli, Bangalore
asset 21 ಎಲ್ಲವನ್ನೂ ನೆನಪಿಟ್ಟು ದಾಖಲಿಸುವ ತಮಗೆ ಅಭಿನಂದನೆಗಳು.
- Bavalatti,AIR Raichur
asset 21
ಸರ್,ತಾವು ಹಿರಿಯರು, ತಮ್ಮ ಅನುಭವಗಳು ಸಾಗರದಂತೆ, ತಮ್ಮ ಬರೆಹ ಖುಷಿ ನೀಡುತ್ತದೆ, ಬರೆಯುತ್ತಲಿರಿ.
- A L Nagur, Vijayapura.
- ಪ್ರಮೋದ್ ಕುಲಕರ್ಣಿ




















