ಅಚ್ಚಹಸಿರ ದಿಂಡಿನಾ ಗರಿಗಳೆರಡರ ಜೋಡಿಯು
ಕಣ್ಣುಗಳೆರಡು ಸಾಲದಾಗಿದೆ ನೋಡಲಿದರ ಪರಿಯು
ಕೇಸರಿ ತೊಟ್ಟಿಗೆ ಮೊಬ್ಬು ಬಿಳಿದಳಗಳ ವೈಖರಿಯು
ಅದುವೇ ನಿಸರ್ಗ ಪಾರಿಜಾತ ಪುಷ್ಪಗಳ ಐಸಿರಿಯು
ಕ್ರಿಯಾಶೀಲ ಕಲೆಯ ಬಲೆಯಲಿ ಮೂಡಿತು ಚಿತ್ತಾರವು
ಪದಪುಂಜಗಳ ಜೋಡಿಸಲು ಸುಲಲಿತ ಕಾವ್ಯವು
ಓದುಗ ನಲ್ಮನಗಳಿಗಿಂದಿದು ಸಮರ್ಪಿತವು
ಕಾತುರದಿ ಕಾಯುವ ಅಭಿಮಾನಿಗಳಿಗೆ ಶುಭೋದಯವು
- ಲಲಿತಾ ಕೆ ಆಚಾರ್, ಬೆಂಗಳೂರು




















