
ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನ ಧೀಮಂತ ನಾಯಕ ಡಾಕ್ಟರ್ ಜಿ. ಪರಮೇಶ್ವರ ಅವರಿಗೆ ಕ್ಷೇತ್ರದ ಜನರಿಂದ ಜರುಗಿದ ಅಭಿನಂದನಾ ಕಾರ್ಯಕ್ರಮ.
ತುಮಕೂರು/ಕೊರಟಗೆರೆ : ನಮ್ಮ ಕ್ಷೇತ್ರದ ಹೆಮ್ಮೆಯ ಶಾಸಕರಾದ ಡಾ. ಜಿ ಪರಮೇಶ್ವರ್ ರವರು ಎರಡನೇ ಬಾರಿ ಉಪಮುಖ್ಯಮಂತ್ರಿಯಾಗಿ ಕೊರಟಗೆರೆ ಕ್ಷೇತ್ರಕ್ಕೆ ಆಗಮಿಸುತ್ತಿರುವುದರಿಂದ ಕೊರಟಗೆರೆಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬೃಹತ್ ಅಭಿನಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು. ಉಪಮುಖ್ಯಮಂತ್ರಿಯವರನ್ನು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಹೂವಿನ ರಥದಲ್ಲಿ ವಿವಿಧ ಜಾನಪದ ತಂಡಗಳು,ಕುಂಭ ಕಲಶಗಳು, ದೊಡ್ಡ ಹೂವಿನ ಹಾರಗಳು, ಕುಂಭ ಕಳಸಗಳು, ಸಿಡಿಮದ್ದುಗಳಿಂದ ಕೂಡಿದ್ದು. ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಾಸಕರ ಅಭಿಮಾನಿಗಳು ಮತಬಾಂಧವರು ಮತ್ತು ಮತದಾರರು ಅದ್ದೂರಿಯಾಗಿ ಮೆರವಣಿಗೆ ಮೂಲಕ ಕಾಲೇಜು ಮೈದಾನದವರೆಗೂ ಸಾಗರೋಪದಿಯಲ್ಲಿ ಜನ ಜನನಾಯಕರ ಮೆರವಣಿಗೆ ಹಬ್ಬದ ವಾತಾವರಣದಲ್ಲಿ ಕಂಗೊಳಿಸಿತು.
ಅದ್ದೂರಿ ಸ್ವಾಗತದೊಂದಿಗೆ ಜನನಾಯಕ, ಅಭಿವೃದ್ಧಿಯ ಹರಿಕಾರ, ಧೀಮಂತ ನಾಯಕ ಕಾಂಗ್ರೆಸ್ಸಿನ ಕಟ್ಟಾಳು ಜನರ ಪ್ರೀತಿಯ ಶಾಸಕರಾದ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮತ ಬಾಂಧವರ ಆಶೀರ್ವಾದವೂ ಕ್ಷೇತ್ರದ ಜನತೆಯಗೆ ಎರಡನೇ ಬಾರಿ ಉಪಮುಖ್ಯಮಂತ್ರಿಯಾಗಿ, ಗೃಹಮಂತ್ರಿಯಾಗಿ, ಶಾಸಕರಾಗಿ ನಮ್ಮ ಕ್ಷೇತ್ರಕ್ಕೆ ಸೇವೆ ಮಾಡುವ ಅವಕಾಶಕ್ಕೆ ವರವಾಗಿದೆ.
ಈ ಸಂದರ್ಭದಲ್ಲಿ ಸಮಸ್ತ ಮತಬಾಂಧವರಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೂ ಬಂದಿದ್ದ ಎಲ್ಲಾ ನಾಗರಿಕರಿಗೂ ಅಭಿನಂದನೆಗಳನ್ನು ಶಾಸಕರು, ಉಪ ಮುಖ್ಯಮಂತ್ರಿಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಾವಗಡ ಶಾಸಕರು ವೆಂಕಟೇಶ್, ನಿಖಿತ್ ರಾಜ್ ಮೌರ್ಯ, ಮುದ್ದಹನುಮೇಗೌಡರು, ಇಕ್ಬಾಲ್ ಅಹಮದ್, ಇನ್ನೂ ಅನೇಕ ಕಾಂಗ್ರೆಸ್ ಮುಖಂಡರು, ಕೊರಟಗೆರೆ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.
ವರದಿ ಪ್ರಸನ್ನ ಕುಮಾರ್ .ಎಸ್.




















