ಗಸಗಸೆ ಹಣ್ಣಿನ ಸರಳ ವೃತ್ತದ ನಡುವಿನಲ್ಲಿ
ದೊಡ್ಡಪತ್ರೆ ಎಲೆಗುಚ್ಛವು ನಗುತಿರುವುದಿಲ್ಲಿ
ಪುಟ್ಟ ಗರಿಯ ತುಂಬೆ ಪುಷ್ಪಗಳು ಸಂದಿಯಲ್ಲಿ
ಗರಿಗೆದರಿವೆ ಸಂಜೆಮಲ್ಲಿಗೆ ಮೊಗ್ಗುಗಳು ನೆತ್ತಿಯಲ್ಲಿ
ಒಟ್ಟಾಗಿಸಿ ಜೋಡಿಸಲು ಮೂಡಿದೆ ಚಿತ್ತಾರವಿಲ್ಲಿ
ಬಣ್ಣನೆಯು ಹೊಮ್ಮಿದೆ ಸುಲಲಿತ ಕಾವ್ಯದಲ್ಲಿ
ಕಣ್ಮನಗಳ ತನ್ನತ್ತ ಸೆಳೆಯುತಿದೆ ನೋಡಿರಿಲ್ಲಿ
ಆಸ್ವಾದಿಸೋಣ ನಾವೆಲ್ಲ ಶುಭ ಹೊನಲಿನಲ್ಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















