ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಹಣಿ ತಿದ್ದುಪಡಿ ಹೆಸರಲ್ಲಿ ₹1.10 ಲಕ್ಷ ಲಂಚ ಸ್ವೀಕಾರ: ತಹಶೀಲ್ದಾರ ಕಚೇರಿಯ ಎಫ್‌ ಡಿ ಎ ಅಧಿಕಾರಿ ಹಾಗೂ ಪುತ್ರ ಲೋಕಾಯುಕ್ತ ಬಲೆಗೆ

ಸಿರುಗುಪ್ಪ : ಜಮೀನಿನ ಪಹಣಿಯಲ್ಲಿ ‘ಇನಾಮ್’ ನಮೂದನ್ನು ರದ್ದುಪಡಿಸಿ ‘ಪಟ್ಟಾ’ ಎಂದು ದಾಖಲಿಸುವ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಸಿರುಗುಪ್ಪ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕಿ (ಎಫ್‌ಡಿಎ) ಸುವರ್ಣ ಹಾಗೂ ಅವರ ಪುತ್ರ ದೀಪಕ್ ಅವರನ್ನು ಲೋಕಾಯುಕ್ತ ಪೊಲೀಸರು ದಿ.16-06-2026 ರ ಮಂಗಳವಾರ ಸಂಜೆ
ನೋಟುಗಳೊಂದಿಗೆ ಬಂಧಿಸಿದ್ದಾರೆ.
ಬೈರಾಪುರ ಗ್ರಾಮದ ಗೋವಿಂದ ಕೆ. ಅವರು ನೀಡಿದ ದೂರಿನ ಮೇರೆಗೆ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ವೆ ನಂ.57/1ಡಿ, 7 ಎಕರೆ 68 ಸೆಂಟ್ಸ್ ಜಮೀನಿನ ಪಹಣಿಯಲ್ಲಿ ನಮೂದಾಗಿದ್ದ ‘ಇನಾಮ್’ ದಾಖಲೆಯನ್ನು ತೆಗೆದು ‘ಪಟ್ಟಾ’ ಎಂದು ನಮೂದಿಸಲು ಸುವರ್ಣ ಅವರು ₹1.60ಸಾವಿರ , ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದರು. ಮಂಗಳವಾರ ಸಂಜೆ 4.15ರ ಸುಮಾರಿಗೆ ನಗರದ ನೇತಾಜಿ ಕಾಂಪ್ಲೆಕ್ಸ್ ಎದುರು, ಲಂಚದ ಹಣ ₹1.10 ಲಕ್ಷವನ್ನು ತಮ್ಮ ಪುತ್ರ ದೀಪಕ್‌ಗೆ ನೀಡುವಂತೆ ಸುವರ್ಣ ಸೂಚಿಸಿದ್ದರೆಂದು ಹೇಳಲಾಗಿದೆ. ಅದರಂತೆ ದೀಪಕ್ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದರು. ಬಳಿಕ ಸುವರ್ಣ ಅವರನ್ನೂ ಬಂಧಿಸಿ ಲಂಚದ ಹಣವನ್ನು ವಶಪಡಿಸಿಕೊಂಡು
ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಡಿವೈಎಸ್ಪಿ ಸಿದ್ದಪ್ಪ ಎಸ್. ಬೀಳಗಿ ಹಾಗೂ ಪೊಲೀಸ್ ನಿರೀಕ್ಷಕರಾದ ಗುರಣ್ಣ ಎಸ್. ಹೆಬ್ಬಾಳ್ ಮತ್ತು ಸುರೇಶ್ ಎಂ. ಭಾವಿಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆಯಲ್ಲಿ ಚಂದ್ರಶೇಖರ್, ಮಮತಾ ಕೆ., ವಸಂತಕುಮಾರ, ಅರವಿಂದ, ಅಂಜಿನಪ್ಪ, ಹನುಮಂತಪ್ಪ, ಪ್ರಕಾಶ್ ಎಂ., ನಜೀಮ್ ಶೇಖ್, ಗೊಲ್ಲರ ದಾಸಪ್ಪ, ಹೊನ್ನೂರಪ್ಪ ಕೆ.ಟಿ. ಹಾಗೂ ಹರೀಶ್ ವಿ. ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.

ವರದಿ ಎಮ್ .ಡಿ. ಖಾಜಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!