ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

‘ಯೋಧ’ ನಿಂದ ‘ಯೋಗ’ ದ ಯೋಗ :ಹೊನ್ನಗುಂದದ ಸೌಭಾಗ್ಯ

ಭಾರತಾಂಬೆಯ ಹೆಮ್ಮೆಯ ಸುಪುತ್ರನಾಗಿ ಸೈನ್ಯದಲ್ಲಿ ಕಮಾಂಡೋ ಆಗಿ ಸೇವೆ ಸಲ್ಲಿಸುತ್ತಿರುವ ಹುನಗುಂದ ತಾಲೂಕಿನ ಬಿಂಜವಾಡಗಿ ಗ್ರಾಮದ ಹೆಮ್ಮೆಯ ಸುಪುತ್ರ, ಭಾರತೀಯ ಸೈನ್ಯದಲ್ಲಿರುವ ಯೋಧ ಮಹಾಂತೇಶ ಗೌಡರ ರವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ಸುಮಾರು 12 ವರ್ಷಗಳಿಂದ ದೇಶ ವಿದೇಶಗಳನ್ನು ಸುತ್ತಿ ಭಾರತದ ಪ್ರಾಚೀನ ಕಲೆಯಾದ ಯೋಗದ ಮಹತ್ವವನ್ನು ಸಾರುತ್ತಲಿದ್ದಾರೆ. ನಿತ್ಯ ಯೋಗವನ್ನು ಮಾಡುವ ಪ್ರತಿಯೊಬ್ಬರು ನಿರೋಗಿಗಳಾಗಿ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಮರ್ಥರಾಗಿ ಯಾವುದೇ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರೂ ಸಮರ್ಥವಾಗಿ ನೀಗಿಸುತ್ತಾರೆ. ಯಾವುದಕ್ಕೂ ಎದೆಗುಂದದೆ ಜೀವನವನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದುತ್ತಾರೆಂದು ಸಿದ್ಧಪಡಿಸಿ ತೋರಿಸಿದವರು ಯೋಧ ಮಹಾಂತೇಶ ಗೌಡರರವರು
2007 ಜುಲೈ 7 ರಂದು ‘ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್’ ಹುದ್ದೆಗೆ ನೇಮಕಗೊಂಡು ಬಹಳಷ್ಟು ಸೂಕ್ಷ್ಮ ಪ್ರದೇಶಗಳಲ್ಲಿ ತರಬೇತಿ ಹೊಂದಿ, ಜಮ್ಮು ಕಾಶ್ಮೀರದ ಲೇಹ್, ಲಡಾಕ್, ಛತ್ತೀಸಘಡ, ಆಂಧ್ರಪ್ರದೇಶ ಮುಂತಾದ ಕಡೆ ಸೇವೆ ಸಲ್ಲಿಸುತ್ತ ಆಲ್ ಇಂಡಿಯಾ ಐ.ಟಿ. ಬಿ.ಪಿ ಯಲ್ಲಿ 2014 ರಲ್ಲಿ ಕಮಾಂಡೋಗಳ ಸ್ಪರ್ಧೆಯಲ್ಲಿ ಸಿಲ್ವರ್ ಮೆಡಲ್ಲನ್ನು ಪಡೆದುಕೊಂಡಿದ್ದಾರೆ. 2015 ರಿಂದ 2018 ರವರೆಗೆ ಅಫ್ಘಾನಿಸ್ತಾನದಲ್ಲಿದ್ದು ಯೋಗ ತರಬೇತಿಯನ್ನು ಹೊಂದಿ, ಯೋಗವನ್ನು ಜೀವನದ ಉಸಿರನ್ನಾಗಿ ಮಾಡಿಕೊಂಡು ಉತ್ತಮ ತರಬೇತಿ ಹೊಂದಿ ಕಮಾಂಡೋ ಆಗಿ ಸೇವೆಯಲ್ಲಿ ಇದ್ದುಕೊಂಡು ದೇಶ ವಿದೇಶಗಳಲ್ಲಿ ಸುತ್ತಿ ಯೋಗದ ಮಹತ್ವವನ್ನು ಸಾರುತ್ತಾ ಬಂದಿರುವರು. 2018-2019 ರಲ್ಲಿ ವಿದ್ಯಾನಗರ ಹುನಗುಂದದ ಸರ್ಕಾರಿ ಪಿಯು ಕಾಲೇಜಿನ ಎನ್. ಎಸ್.ಎಸ್. ಘಟಕದ ಸಹಯೋಗದಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ್ದಾರೆ. 2021 ರಲ್ಲಿ ಉತ್ತರ ಪ್ರದೇಶದ ನೋಯಿಡಾದಲ್ಲಿ ಯೋಗ ತರಬೇತಿಯನ್ನು ಮಾಡಿದ್ದಾರೆ. 2022 ರಲ್ಲಿ ನೂರು ದಿನಗಳ ಯೋಗ ಮಹೋತ್ಸವವನ್ನು ರೆಡ್ ಪೋರ್ಟ್ ನಲ್ಲಿ ಯಶಸ್ವಿಯಾಗಿ ನಡೆಸಿದ್ದಾರೆ. ಹೀಗೆ ಸತತವಾಗಿ ಹುನಗುಂದದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದಲ್ಲಿ, ಘಟ್ಟಿಗನೂರಿನ ಸುಖಮುನೇಶ್ವರ ಪ್ರೌಢಶಾಲೆಯಲ್ಲಿ, ಹುನಗುಂದ ತಾಲೂಕಿನ ಬಹುತೇಕ ಪ್ರಾಥಮಿಕ ಶಾಲೆಯಿಂದ ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸತತವಾಗಿ ಅಂತರಾಷ್ಟ್ರೀಯ ಯೋಗ ದಿನದಂದು ಮನಸಾರೆ “ಬೆಳಕು” ಸ್ವಯಂ ಸಂಸ್ಥೆಯ ಜೊತೆಗೆ ಯೋಗವನ್ನು ಬಿತ್ತರಿಸುತ್ತಾ ಬಂದಿರುವರು.
ತನ್ನ ಹುಟ್ಟೂರಾದ ಮತ್ತು ಪ್ರಾಥಮಿಕ ಶಿಕ್ಷಣ ಪಡೆದ ಹುನಗುಂದ ತಾಲೂಕಿನ ಘಟ್ಟಿಗನೂರ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ತಾಲೂಕಿನ ಅನೇಕ ಶಾಲೆ, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ತಾಲೂಕಿಗೆ ಆಗಮಿಸಿ ಚಾಚೂ ತಪ್ಪದೆ ಕಳೆದ 12 ವರ್ಷಗಳಿಂದ ಯೋಗದ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತಾ ಮಕ್ಕಳನ್ನು ಬೌದ್ಧಿಕವಾಗಿ ಮತ್ತು ಮಾನಸಿಕವಾಗಿ ಸಿದ್ದಗೊಳ್ಳುವಂತೆ ಮಾಡುವ ಇವರ ಯೋಗ ಶಿಕ್ಷಣ ಮತ್ತು ತರಬೇತಿ ಖಂಡಿತವಾಗಿಯೂ ಜನಮನದಲ್ಲಿ ಉಳಿದುಕೊಂಡು ಬಂದಿದೆ. 2026 ಜೂನ್ 21ರಂದು 12ನೇ ವಿಶ್ವ ಯೋಗ ದಿನದಂದು ಮತ್ತೆ ಹುನಗುಂದದಲ್ಲಿ ತಾಲ್ಲೂಕು ಆಡಳಿತ ಹಾಗೂ ಪಟ್ಟಣದ ಎಲ್ಲಾ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಮಕ್ಕಳಿಗೆ ಯೋಗದ ಗೀಳನ್ನು ಬೆಳೆಸುತ್ತಿದ್ದಾರೆ.
ಭಾರತದಲ್ಲಿ ಯೋಗ ಅಭ್ಯಾಸವನ್ನು ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಮಾತ್ರ ಇದನ್ನು ಅನುಸರಿಸುತ್ತಿದ್ದರು. ಆದರೆ ಇಂದು ದೇಶದ ಎಲ್ಲೆಡೆ ಯೋಗವನ್ನು ಪ್ರತಿಯೊಬ್ಬರೂ ರೂಢಿಸಿಕೊಂಡಿದ್ದಾರೆ. ಇಂದು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ರೂಢಿ ಮಾಡಿಕೊಂಡ ಪರಿಣಾಮ ಭಾರತದ “ಯೋಗ” ವಿಶ್ವದ ಯೋಗ ವಾಗಿ ಹೊರಹೊಮ್ಮಿದೆ. ಇದಕ್ಕೆ ಭಾರತದ ಪ್ರಧಾನಿಯವರು, ರಾಜ್ಯದ ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು, ಜನಪ್ರತಿನಿಧಿಗಳು ಮತ್ತು ರಾಜ್ಯದ ದೇಶದ ಎಲ್ಲಾ ಅಧಿಕಾರಿಗಳು ಕೈಗೂಡಿ ಸುತ್ತಿದ್ದಾರೆ ಹಾಗೆ ಯೋಗದ ಪೋಷಣೆಯನ್ನು ಮಾಡುವವರಲ್ಲಿ ಮುಂಚೂಣಿಯಲ್ಲಿರುವವರು ಯೋಧ ಮಹಾಂತೇಶ ಗೌಡರ ಅವರು ಎಂದರೆ ತಪ್ಪಾಗಲಿಕ್ಕಿಲ್ಲ. ತಮ್ಮ ಕೆಲಸಕ್ಕೆ ರಜೆ ಪಡೆದು ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ವಿಶ್ವ ಯೋಗ ದಿನದಂದು ಒಂದು ವಾರಗಳ ಕಾಲ ಯೋಗದ ಮಹತ್ವವನ್ನು ಗ್ರಾಮೀಣ ಭಾಗದಿಂದ ಹಿಡಿದು ಪಟ್ಟಣ ಪ್ರದೇಶಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಗಿನ ವೇಳೆಯಲ್ಲಿ ತರಬೇತಿಯನ್ನು ಹೇಳಿಕೊಡುತ್ತಿರುವುದು ನಿಜವಾಗಲೂ ಎಲ್ಲರೂ ಹೆಮ್ಮೆಪಡುವ ವಿಷಯ. ಇದಕ್ಕೆ ವಿಶೇಷವಾಗಿ ಹಲವಾರು ವರ್ಷಗಳಿಂದ ಸಹಕಾರ ಕೊಡುತ್ತಾ ಜೊತೆಗೆ ಸ್ವತಃ ತಾವೂ ಭಾಗವಹಿಸುತ್ತಾ ಬಂದಿರುವ ಹುನಗುಂದ ಮತಕ್ಷೇತ್ರದ ಸನ್ಮಾನ್ಯ ಶಾಸಕರು ಹಾಗೂ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ. ವಿಜಯಾನಂದ ಕಾಶಪ್ಪನವರು ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಪ್ರೋತ್ಸಾಹ ನೀಡಿರುವರೆಂದು ಸ್ವತಃ ಯೋಧ ಮಹಾಂತೇಶ ಗೌಡರವರು ನೆನಪಿಸಿಕೊಳ್ಳುತ್ತಿದ್ದಾರೆ, ಮತ್ತೆ ಅವರ ನೆರವಿನಿಂದ 12 ನೇ ವಿಶ್ವ ಯೋಗ ದಿನಾಚರಣೆಯನ್ನು ಹುನಗುಂದ ತಾಲೂಕಿನ ಆಡಳಿತದೊಂದಿಗೆ ಕೈಗೂಡಿಸಿ ವಿಶ್ವ ಯೋಗ ದಿನವನ್ನು ಆಚರಿಸೋಣ ಎಂದು ಕರೆ ಕೊಟ್ಟಿದ್ದಾರೆ. ಆ ಪ್ರಯುಕ್ತವಾಗಿ ಹುನಗುಂದ ತಾಲೂಕಿನ ಆಡಳಿತ ಮತ್ತು ಹುನಗುಂದ ತಾಲೂಕಿನ ಹುನುಗುಂದ ನಗರದ ಪ್ರಾಥಮಿಕ ವಿಭಾಗದಿಂದ ಪ್ರೌಢ, ಪದವಿ ಪೂರ್ವ, ಪದವಿ ಕಾಲೇಜುಗಳ ಮುಖ್ಯಸ್ಥರುಗಳು, ಶಿಕ್ಷಕ ಬಳಗ, ಅಧಿಕಾರಿಗಳ ವೃಂದ , ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯವರು ಮತ್ತೆ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ಮೂರು ದಿನಗಳ ಮುಂಚಿತವಾಗಿ ತರಬೇತಿ ಹೊಂದಿ ಮತ್ತೆ ಯೋಗವನ್ನು ಆಕಾಶದೆತ್ತರಕ್ಕೆ ಬೆಳೆಸುವಲ್ಲಿ ಅಣಿಯಾಗುತ್ತಿದ್ದಾರೆ .ಯೋಗ ತರಬೇತಿಯನ್ನು ನೀಡುವ ಮಹಾಂತೇಶ ಗೌಡರ ರವರು ಈ ಕಾರ್ಯದಿಂದ ಹುನಗುಂದ ತಾಲೂಕಿನ ರಾಜ್ಯೋತ್ಸವ ಪ್ರಶಸ್ತಿಯನ್ನೂ, ಬಾಗಲಕೋಟ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಜಿಲ್ಲೆ ಮತ್ತು ರಾಜ್ಯದಲ್ಲಿ ವಿಶೇಷವಾದ ಸಾಧನೆ ಮಾಡಿದ ಸಾಧಕರಾಗಿ ಹೊರ ಹೊಮ್ಮುತ್ತಿದ್ದಾರೆ. ಹಾಗಾಗಿ ಕಳೆದ 12 ವರ್ಷಗಳಿಂದ ಹುನಗುಂದದಲ್ಲಿ ಹಮ್ಮಿ ಕೊಳ್ಳುತ್ತಿರುವ ಯೋಗ ದಿನಾಚರಣೆಗೆ ‘ಯೋಧನಿಂದ ಯೋಗ ಮಾಡಿದ್ದೇವೆ ನಾವೆಲ್ಲಾ ಗಟ್ಟಿಯಾಗಿದ್ದೇವೆ’ ಎಂದೇ ಹೇಳಬೇಕು. ಹಾಗಾಗಿ ಅವರಿಗೆ ಮತ್ತು ಯೋಗದಲ್ಲಿ ಭಾಗಿಯಾಗುವ ಪ್ರತಿಯೊಬ್ಬರಿಗೆ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.

  • ಶರಣಪ್ಪ ಕೆ. ಹೂಲಗೇರಿ, ಪ್ರಭಾರಿ ಪ್ರಾಚಾರ್ಯರು
    ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾನಗರ ಹುನಗುಂದ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!