ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿರುವ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯದ ಆವರಣದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಶನಿವಾರ ಜರುಗಿದವು.
ಕಲಾವಿದ ಬಿ.ಸಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಂಗಭೂಮಿ ನಿರಂತರವಾಗಿ ಕಾರ್ಯಗತಗೊಳಿಸಲು ಮತ್ತು ಗ್ರಾಮೀಣ ಭಾಗದಲ್ಲಿ ಸಾಂಸ್ಕೃತಿಕ ಕಲೆಗಳನ್ನು ಬೆಳೆಸುವಲ್ಲಿ ಹೇಮೇಶ್ವರರವರ ಪಾತ್ರ ಅತಿ ಮುಖ್ಯವಾಗಿದೆ. ಯಾವಾಗಲೂ ಗ್ರಾಮೀಣ ಭಾಗದ ಜನಪದ, ತತ್ವಪದಗಳು, ಭಾವಗೀತೆಗಳು, ಲಾವಣಿ ಪದಗಳು, ಬಯಲಾಟ, ನಾಟಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಯೋಗದಿಂದ ರೋಗ ಮುಕ್ತಿ ಎಲ್ಲರೂ ಪ್ರತಿದಿನ ಯೋಗ, ಧ್ಯಾನ ಕೈಗೊಳ್ಳಬೇಕು. ಅಂದಾಗ ಮಾತ್ರ ಸಮೃದ್ಧ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಕಲಾವಿದ ಜಿ.ಪಾಂಡುರಂಗ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳು ಕಲೆಗಳು ಪರಿಚಯ ಇಲ್ಲದೆ ಇರುವುದು ವಿಪರ್ಯಾಸವಾಗಿದೆ. ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ಇಂತಹ ಕಲೆಗಳನ್ನು ಬೆಳಿಸುವ ಕೆಲಸಕ್ಕೆ ಪ್ರತಿಯೊಬ್ಬರ ಸರಕಾರ ಅಗತ್ಯವಾಗಿದೆ ಎಂದರು.
ಸಾಂಸ್ಕೃತಿಕ ಸದಾಶಿವ ಗೌಡ.ಬಿ ಮತ್ತು ತಂಡದವರು ಸಾಂಸ್ಕೃತಿಕ ಕಾರ್ಯಕ್ರಮಗಳು, ಕಗ್ಗಲ್ ಲೋಕಣ್ಣ ಮತ್ತು ತಂಡದವರು ಯೋಗ ನೃತ್ಯ, ಹೆಚ್.ಲೋಕರಾಜ್ ಮತ್ತು ತಂಡದವರು ಸಮೂಹ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ಬಸವರಾಜ, ಡಾ.ಪ್ರಹ್ಲಾದ್ ಆರ್.ಐಲಿ, ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಕಿರಿಯ ಮೇಲ್ವಿಚಾರಕ ಮಾರೇಶ, ಸಮಾಜ ಸೇವಕ ಹೆಚ್.ಪೀರಾವಲಿ, ಕಲಾವಿದರಾದ ಡಿ.ಜಡೀಯಪ್ಪ, ಶರಣ, ಸ್ವಾಮಯ್ಯ, ಬೆಳಗೋಡು ತಿಪ್ಪೇಶ, ಶಂಕರಪ್ಪ, ಚಾನಾಳ ಈರಣ್ಣ, ಬಸವ, ಹಳೆಮನೆ ವಿರೇಶ, ಪಕ್ಕೀರಪ್ಪ, ಜಡೇಶ, ಸಾಧಕಲಿ, ಹೊನ್ನುರಸಾಬ್, ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಶ್ರೀ ಗುರುಮಹಾಂತೇಶ, ಕಾರ್ಯದರ್ಶಿ ಕುರುಬರ ಹೇಮೇಶ್ವರ, ಖಜಾಂಚಿ ಕೆ.ಹಿಮಂತರಾಜ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















