ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಾಲಾ ಮಕ್ಕಳೊಂದಿಗೆ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

ಕೊಟ್ಟೂರು : ತಾಲೂಕು ಮಟ್ಟದ ವಿವಿಧ ಇಲಾಖೆ ಹಾಗೂ ಯುನಿಕ್ ಚಾರಿಟೇಬಲ್ ಟ್ರಸ್ಟ್ (ರಿ). ಕೊಟ್ಟೂರು ಇವರ ಸಹಯೋಗದಲ್ಲಿ
“ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮ ಪಟ್ಟಣದ ಸರ್ಕಾರಿ ಬಾಲಕರ ಫ್ರೌಡ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.

ಬಾಲಕಾರ್ಮಿಕ ವಿರೋಧಿ ದಿನಾಚರಣೆ ನಾವೆಲ್ಲರೂ ಆಚರಣೆ ಮಾಡುತ್ತೇವೆ ಆದರೆ ಬಾಲಕಾರ್ಮಿಕರು ದುಡಿಯುವುದನ್ನು ನೋಡಿದರೂ ಸಹ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡದೇ ಸಾರ್ವಜನಿಕರು ಸುಮ್ನೆ ಆಗಿಬಿಡುತ್ತಾರೆ. ನಾವು ದೇಶದ ಪ್ರಜೆಯಾಗಿ ಸಂವಿಧಾನದ ಚೌಕಟ್ಟಿನಲ್ಲಿ ಬರುವ ಕಾನೂನುಗಳನ್ನು ರಕ್ಷಿಸಿ,ಪಾಲಿಸಬೇಕು. ಸಮುದಾಯ, ಇಲಾಖೆ, ಪ್ರಜ್ಞಾವಂತ ನಾಗರಿಕರು ಕೈಜೋಡಿಸಿದಾಗ ಮಾತ್ರ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅರ್ಥಪೂರ್ಣವಾಗಲು ಸಾಧ್ಯ ಎಂದು ಗ್ರೇಡ್-2 ತಹಶೀಲ್ದಾರ್ ಪ್ರತಿಭಾ ಕಾರ್ಯಕ್ರಮ ಉದ್ಘಾಟಿಸಿ
ಹೇಳಿದರು.

ಮಕ್ಕಳ ರಕ್ಷಣೆಗೆ ಇಲಾಖೆ ಸಿಬ್ಬಂದಿ ಸಿದ್ದವಾಗಿದ್ದಾರೆ. ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದರೆ ಮಕ್ಕಳ ರಕ್ಷಣೆಗೆ ಸಹಾಯಕವಾಗುತ್ತದೆ. ಶಾಲಾ ವಿಧ್ಯಾರ್ಥಿನಿಯರೊಂದಿಗೆ ಕೆಲ ಸಮಯ ಸಿಬ್ಬಂದಿ ಸಮಾಲೋಚನೆ ನಡೆಸಿದ್ದು ಸಹ ಕಂಡುಬಂದಿತು. ಮಕ್ಕಳ ಹೊಣೆಗಾರಿಕೆ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಬಸಂತಿ ಹೇಳಿದರು.

ಪಿ. ಎಂ. ಈಶ್ವರಯ್ಯ ಅವರು ಉಪನ್ಯಾಸ ನೀಡಿ ಮಾತನಾಡಿ ಸಂವಿಧಾನದಲ್ಲಿ ಪ್ರಥಮವಾಗಿ ಬಾಲಕಾರ್ಮಿಕ ವಿರೋಧಿ ಕುರಿತು 1986 ರಲ್ಲಿ ಜಾರಿಗೆ ತರಲಾಯಿತು ಅನೇಕ ತಿದ್ದುಪಡಿ ಮೂಲಕ ಹೊಸ ವಿಷಯಗಳನ್ನು ಸೇರಿಸಲಾಯಿತು. ಸಮುದಾಯ, ಪೋಲಿಸ್ ಇಲಾಖೆ, ಮಕ್ಕಳ ಹಕ್ಕುಗಳ ರಕ್ಷಣೆ ಇಲಾಖೆ ಕೈಜೋಡಿಸಿ ಹೊಂದಾಗಿ ಕೆಲಸ ಮಾಡಿದಾಗ ಮಾತ್ರ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಆಚರಣೆ ಮಾಡಿದ್ದಕ್ಕೂ ಸಾರ್ಥಕವೆಂದರು. ಬಾಲಕಾರ್ಮಿಕ ವಿರೋಧಿ ದಿನಾಚರಣೆ ಉದ್ದೇಶ ಹಾಗೂ ಆಚರಣೆ ಮಹತ್ವ ಕುರಿತು ವಿವರಿಸಿ “ಮಕ್ಕಳಿಗೆ ಶಿಕ್ಷಣ, ಬಾಲಕಾರ್ಮಿಕತೆಗೆ ನಿರಾಕರಣೆ”
“ಮಕ್ಕಳ ಕನಸುಗಳಿಗೆ ರೆಕ್ಕೆ ನೀಡಿ, ದುಡಿಮೆಯ ಸಂಕೋಲೆಯಿಂದ ಮುಕ್ತಗೊಳಿಸಿ.” ಘೋಷಣೆ ಯೊಂದಿಗೆ ಉಪನ್ಯಾಸಕ್ಕೆ ಸಮಾಪನೆಗೊಳಿದರು.

ಸಿಡಿಪಿಒ ಸಿಬ್ಬಂದಿ ಪ್ರಜ್ವಲ್ , ಬಿ.ಆರ್ ಪಿ ಬಸವರಾಜ .ಎನ್.ಎಂ. ಶಾಲಾ ಮುಖ್ಯೋಪಾಧ್ಯಾಯರಾದ ಕೊಟ್ರಮ್ಮ, ಯುನಿಕ್ ಚಾರಿಟಬಲ್ ಟ್ರಸ್ಟ್ ಸದಸ್ಯರಾದ ಜಡತಲಿ ಸಿದ್ದೇಶ್ , ಮೃತ್ಯುಂಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಮಿಕ ನಿರೀಕ್ಷರಾದ ಶಿವಶಂಕರ್ ಬಿ ತಳವಾರ ಸ್ವಾಗತ ಕೋರಿದರು. ಪ್ರಾರ್ಥನೆ ವಿಧ್ಯಾರ್ಥಿನಿ ಹಾಡಿದಳು, ಹಿ.ಮ. ಬಸವರಾಜ ತಾಲೂಕು ಕಛೇರಿ ಸಿಬ್ಬಂದಿ ನಿರೂಪಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!