
ಶ್ರೀ ಕ್ಷೇತ್ರ ತಪೋಭೂಮಿ ಸಸ್ಯ ಸಂಜೀವಿನಿ ನಾಡಿನ ಸಿದ್ದ ಪುರುಷ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ 20ನೇ ವರ್ಷದ ವಾರ್ಷಿಕೋತ್ಸವ ಹಾಗೂ ಜನ ಜಾಗೃತಿ ಸಮಾರಂಭ ಅತ್ಯಂತ ವೈಭವದಿಂದ ಜರುಗಿತು.
ಶ್ರೀ ಕ್ಷೇತ್ರ ಸಿದ್ದರಬೆಟ್ಟದಲ್ಲಿ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಬಹಳ ವಿಜೃಂಭಣೆಯಿಂದ ಶ್ರೀ ಮಠದ ದೇವಸ್ಥಾನ ಆವರಣದಲ್ಲಿ ದೀಕ್ಷೆ, ಧರ್ಮ ಜಾಗೃತಿ, ಸಾಮೂಹಿಕ ವಿವಾಹ ಶಾಸ್ತ್ರ ಹಾಗೂ ದಾರೆ ಕಾರ್ಯಕ್ರಮಗಳು ನೆರವೇರಿದವು.
17 ನವ ವಧುವರರು ಸಾಮೂಹಿಕ ವಿವಾಹವಾಗಿ ಹೊಸ ಜೀವನ ಪ್ರಾರಂಭಿಸಿದರು.
ಶ್ರೀ ಕ್ಷೇತ್ರನಾಥ ಶ್ರೀ ಸಿದ್ದೇಶ್ವರ ಸ್ವಾಮಿ, ಶ್ರೀ ಮಹಾಗಣಪತಿ. ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ವೀರಭದ್ರ ಸ್ವಾಮಿಗೆ ರುದ್ರಾಭಿಷೇಕ ಹಾಗೂ ಪರಿವರ್ತನೆ ಪೂಜೆ ಕಾರ್ಯಕ್ರಮಗಳು ಜರುಗಿದವು.
ಶ್ರೀ ಷ ||ಬ್ರ || ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಜನ ಜಾಗೃತಿ ಧರ್ಮ ಸಮಾರಂಭ. ಹಾಗೂ ಪುಸ್ತಕ ದಾಸೋಹ. ರುದ್ರಾಭಿಷೇಕ ಮತ್ತು ಬಿಲ್ವಾರ್ಚನೆ ಗಂಗಾ ಪೂಜೆಗಳು ನೆರವೇರಿಸಿದರು.
ಭಾನುವಾರ ಬೆಳಿಗ್ಗೆ ಜಗದ್ಗುರು ರೇಣುಕಾಚಾರ್ಯರ ಕ್ಷೇತ್ರನಾಥ ಶ್ರೀ ಸಿದ್ದೇಶ್ವರ ಸ್ವಾಮಿಯ ಹಾಗೂ ಬಸವೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ , ದನಗಳ ಮೆರವಣಿಗೆ, ವೀರಗಾಸೆ ನೆರವೇರಿತು.
ಪುಸ್ತಕ ದಾಸೋಹದಲ್ಲಿ ಪಾಲ್ಗೊಳ್ಳುವವರು ಒಂದು ಪುಸ್ತಕ ತಂದು ಎರಡು ಪುಸ್ತಕ ತೆಗೆದುಕೊಳ್ಳಬಹುದಾಗಿತ್ತು. ಒಟ್ಟು ವಿವಿಧ 10,000 ಪುಸ್ತಕಗಳು ಈ ಒಂದು ದಾಸೋಹದಲ್ಲಿ ಲಭ್ಯವಿದ್ದವು. ಸಂಜೀವಿನಿ ಕ್ಷೇತ್ರದಲ್ಲಿ 108 ಅಡಿಗಳ ಶಿವಲಿಂಗ ಪ್ರತಿಷ್ಠಾಪನೆಗೆ ಚಿಂತನೆ ಮತ್ತು 150 ಜನರಿಗೆ ಸಾಮೂಹಿಕ ದೀಕ್ಷೆ ಸಮಾರಂಭವು ಶ್ರೀಗಳ ಅಪಾರ ಭಕ್ತ ವೃಂದ ಸಾಕ್ಷಿ ಆಯಿತು.
ದಿವ್ಯ ಸಾನಿಧ್ಯ ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ|| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಇವರ ಸಮ್ಮುಖದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ 20ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ , ಜನಜಾಗೃತಿ ಧರ್ಮ ಹಾಗೂ ಸಾಮೂಹಿಕ ವಿವಾಹಗಳು ಪರಮ ಪೂಜ್ಯರು ಆಶೀರ್ವಚನಗಳೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾದವು.
ವಿವಾಹಕ್ಕೆ ಮಾಂಗಲ್ಯ ಧಾರಣೆ ಮುಹೂರ್ತ 12:30ಕ್ಕೆ ಅಭಿಜಿತ್ ಲಗ್ನದಲ್ಲಿ 17 ನವ ವಧು-ವರರನ್ನು ಆಶೀರ್ವದಿಸಿ ಅಭಿನಂದನೆ ಸಲ್ಲಿಸಿ. ನವಜೋಡಿಗಳಲ್ಲಿ ಒಂದು ಜೋಡಿ ಇಬ್ಬರು ಮಾತನಾಡಲು ಬರದಿದ್ದು ವಿಶೇಷವಾಗಿತ್ತು.ಈ ಬಂದ ನವ ವಧುಗಳಿಗೆ ಮಾಂಗಲ್ಯಗಳನ್ನು ನೀಡಿದ ಪುಟ್ಟಸ್ವಾಮಿಗೌಡರು ಶಾಸಕರು ಗೌರಿಬಿದನೂರು ಕ್ಷೇತ್ರ.
ವಸ್ತ್ರ ವಿತರಣೆಯನ್ನು ಜಿಎಸ್ ಪಾಟೀಲ್ ರವರು ಶಾಸಕರು ರೋಣ, ಅಧ್ಯಕ್ಷರು ರಾಜ್ಯ ಖನಿಜ ಅಭಿವೃದ್ಧಿ ನಿಗಮ ಬೆಂಗಳೂರು ಇವರು ಹಾಗೂ
ಮೂಗುತಿ ವಿತರಣೆ ಟಿಬಿ ಜಯಚಂದ್ರ ರವರು ವಿಶೇಷ ಪ್ರತಿನಿಧಿಗಳು ಶಾಸಕರು ಶಿರಾ,
ರೈತರಿಗೆ ಸಸಿ ವಿತರಣೆಯನ್ನು ಜಿಬಿ ಜ್ಯೋತಿ ಗಣೇಶ್ ರವರು ಶಾಸಕರು ತುಮಕೂರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ನರಸಿಂಹಗಿರಿ ಎಲೆರಾಂಪುರ ಮಠದ ಶ್ರೀಗಳು ಸಿದ್ದರಬೆಟ್ಟದ ಸ್ವಾಮೀಜಿಯವರ ಮಾರ್ಗದರ್ಶನ ನಮ್ಮ ಕ್ಷೇತ್ರಕ್ಕೆ ಅವರ ದೂರದೃಷ್ಟಿ, ದಾಸೋಹ,ಶಿಕ್ಷಣ, ಪರಿಸರದ ಕಾಳಜಿಯು ನಮ್ಮೆಲ್ಲರಿಗೂ ಆಸರೆಯಾಗಿ ಗ್ರಾಮೀಣ ಭಾಗದ ರೈತರ ಕಷ್ಟಗಳನ್ನು ಕಂಡು ಅವರ ರೈತಪರ ಚಿಂತಕರಾಗಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಶ್ರದ್ಧಾಕೇಂದ್ರವಾಗಿ ಇಂದು ಬೃಹದಾಕಾರವಾಗಿ ಬೆಳೆದು ಸಿದ್ದರಬೆಟ್ಟವು ನಾಡಿಗೆ ಹೆಸರುವಾಸಿಯಾಗಿದೆ. ಶ್ರೀಗಳು ಬಡ ರೈತರಿಗೆ ಗೋವುಗಳ ವಿತರಣೆ, ಕೆರೆಕಟ್ಟೆಗಳ ಹೂಳೆತ್ತುವ ಕಾರ್ಯಕ್ರಮ, ಬಯಲು ಬೆಟ್ಟದ ಸಾಲುಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಮತ್ತು ಬೆಳದಿಂಗಳ ಕೂಟ ಇನ್ನು ಅನೇಕ ಸಾಮಾಜಿಕ ಕಾರ್ಯಕ್ರಮಗಳಿಂದ ನಮ್ಮ ಭಾಗದ ಜನರಿಗೆ ಮಠವು ಆಸರೆಯಾಗಿ ಇಂದು ಶ್ರೀಗಳ 20ನೇ ವರ್ಷದ ವಾರ್ಷಿಕೋತ್ಸವ ಸಿದ್ದೇಶ್ವರ ಸ್ವಾಮಿಯ ಕೃಪೆಯು ಭಕ್ತರ ಸಂತಸವು ಮಠಕ್ಕೆ ಪ್ರಸಿದ್ಧಿಯನ್ನು ತಂದಿದೆ.
ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪಿಎನ್ ಕೃಷ್ಣಮೂರ್ತಿಯವರು ಮಾತನಾಡಿ ಸಿದ್ದರಬೆಟ್ಟವು ಪವಿತ್ರ ಕ್ಷೇತ್ರ ಸಿದ್ಧಪುರುಷರ ಸಂಜೀವಿನಿ ಪರ್ವತದಂತೆ ಪ್ರಸಿದ್ಧಿ ಪಡೆದ ಪುಣ್ಯಕ್ಷೇತ್ರ. ಶ್ರೀ ಶ್ರೀ ಶ್ರೀ ಪರಮ ಪೂಜ್ಯರುಗಳಿಗೆ ನಮಸ್ಕರಿಸುತ್ತ ನಮ್ಮ ಕ್ಷೇತ್ರದ ಮಠಗಳು ನಮಗೆ ಮಾರ್ಗದರ್ಶನ ಮತ್ತು ಧಾರ್ಮಿಕತೆಯ ಬಗ್ಗೆ ಜ್ಞಾನವನ್ನು ನೀಡಿಲು ಕ್ಷೇತ್ರಕ್ಕೆ ಹೆಸರಾಗಿದೆ. ಸುಮಾರು 20 ವರ್ಷಗಳಿಂದ ಕ್ಷೇತ್ರದ ಒಡನಾಡಿಯಾಗಿರುವ ನಾವು ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಬಡವ ಶ್ರೀಮಂತ ಜಾತಿ ಭೇದಗಳನ್ನು ಮರೆತು ಬಡವರ ಪರ ಕೆಲಸಗಳನ್ನು ಮಾಡಿದರೆ ನಮ್ಮ ಜೀವನ ಸಾರ್ಥಕ.
ಶ್ರೀಗಳು ಅನ್ನ, ಅಕ್ಷರ, ಮತ್ತು ಆಸರೆಯನ್ನು ನೀಡಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶಕರಾಗಿದ್ದಾರೆ. ಇದರಿಂದ ಶ್ರೀಗಳು ಕ್ಷೇತ್ರದಲ್ಲಿ ಲಕ್ಷಾಂತರ ಭಕ್ತರೊಂದನ್ನು ಹೊಂದಿದ್ದಾರೆ. ಮುಂದೆ ಮಠದ ಜಾಗದಲ್ಲಿ ಒಂದು ಸಮುದಾಯ ಭವನವನ್ನು ಕಟ್ಟಿಸಿ ಸಿದ್ದರಬೆಟ್ಟದ ಭಕ್ತರಿಗೆ ಉಚಿತವಾಗಿ ಸೇವೆ ಮಾಡುವ ಅವಕಾಶ ಕೇಳಿ ಶ್ರೀ ಗಳಿಗೆ ಒಂದು ವರ್ಷಗಳ ಕಾಲಾವಕಾಶವನ್ನು ಕೇಳಿದರು. ಸರ್ವಧರ್ಮ ಸಮಾನತೆಯು ಮಠಗಳಲ್ಲಿ ಇರುವುದರಿಂದ ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಲೆ ರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ, ಮ. ನಿ. ಪ್ರ ವೀರಬಸವ ಸ್ವಾಮೀಜಿಗಳು ಕಾರದ ಮಠ ಬೆಳ್ಳಾವಿ,
ಕೋಳಾಲ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಪಿಎನ್ ಕೃಷ್ಣಮೂರ್ತಿ ರವರು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕ್ರಣ್ಣನವರು, ದಯಾಶಂಕರ್ ರವರು ನಿವೃತ್ತ ಐಎಎಸ್ ಅಧಿಕಾರಿ ಬೆಂಗಳೂರು, ಇನ್ನೂ ಹಲವರು ಮುಖಂಡರುಗಳು , ಸಮಾಜ ಸೇವಕರು, ಹಾಗೂ ಅಪಾರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವರದಿ.ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















