ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದಕ್ಷ ನೀವೃತ್ತ ಅಧಿಕಾರಿ ಎಸ್ ಎಸ್ ಹುಲ್ಲೂರ ಜನಸೇವೆಗೆ ಕಾಣದ ಕೈಗಳ ಅಡ್ಡಿ ?

  ಜೇವರ್ಗಿ: ತಾಲೂಕಿನಲ್ಲಿ ಪೋಲಿಸ್ ಇಲಾಖೆಯಲ್ಲಿ ಸುದೀರ್ಘ ದಿನಗಳ ಕಾಲ ಪೋಲಿಸ್ ಸಬ್ ಇನ್ಸ್ಪೆಕ್ಟರ್  ಮತ್ತು ಸರ್ಕಲ್ ಪೋಲಿಸ್ ಇನ್ಸ್ಪೆಕ್ಟರ್ ಹಾಗೂ ಕಲಬುರಗಿ ಗ್ರಾಮೀಣ, ಲಿಂಗಸೂರು ಡಿವೈಎಸ್ಪಿಯಾಗಿ ದಕ್ಷ, ದಿಟ್ಟ, ಪ್ರಾಮಾಣಿಕ ಜನಪ್ರಿಯ ಪೋಲಿಸ ಅಧಿಕಾರಿಗಳಾಗಿ ಇಲಾಖೆಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಗೌರವ ತಂದು ಕೊಟ್ಟ ಕರ್ತವ್ಯ ನಿಷ್ಠೆ,ಬದ್ಧತೆ, ಪ್ರಾಮಾಣಿಕತೆ ಮೂಲಕ  ಇಲಾಖೆಯಲ್ಲಿ ಉತ್ತಮ ಜನಪ್ರಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದವರು. ಇವರ ಸೇವಾ ಅವಧಿಯಲ್ಲಿ  ಜೂಜು, ಮಟ್ಕಾ, ಕೊಲೆ, ಸುಲಿಗೆ,ದರೋಡೆ ಪ್ರಕರಣಗಳನ್ನು ಹತೋಟಿಗೆ ತಂದು ತಾಲೂಕಿನಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡಿ  ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿದರು ಮತ್ತು ಆರೋಪಿಗಳನ್ನು ಅತ್ಯಂತ ಸರಳವಾಗಿ ಹಿಡಿದು ಬಂದಿಸುತ್ತಿರುವುದು ಅವರ ಕಲೆ ಕೂಡ ಆಗಿತ್ತು. ಕೆಲವು ಸಂದರ್ಭಗಳಲ್ಲಿ ಇವರ ಕಾರ್ಯ ವ್ಯಾಪ್ತಿ ಮೀರಿ ಇವರಿಗೆ ಹಲವಾರು ಆರೋಪಿಗಳನ್ನು ಬಂಧಿಸಲು ಹಿಡಿಯಲು ಇವರನ್ನು ನಿಯೋಜಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ ಹಾಗೂ ಮಾನ್ಯ ಮುಖ್ಯಮಂತ್ರಿ ಪದಕಕ್ಕೂ ಭಾಜನರಾದರು. ಆತ್ಮೀಯತೆ, ಕ್ರಿಯಾಶೀಲತೆ, ಸರಳತೆ, ಮಾನವೀಯತೆ ಕೊಡುಗೈ ದಾನಿ ಹೀಗೆ ಹತ್ತಾರು ವಿಶಿಷ್ಟವಾದ ಗುಣಗಳನ್ನು ಹೊಂದಿರುವವರು ಹಾಗೂ ಇತರರಿಗೂ ಮಾದರಿ ಮತ್ತು ಸ್ಪೂರ್ತಿ ತುಂಬಿದವರು.ಇಲಾಖೆಯ ಅಧಿಕಾರಿಗಳೊಂದಿಗೆ ಮತ್ತು ಸಾರ್ವಜನಿಕರೊಂದಿಗೆ   ಅವಿನಾಭಾವ ಸಂಬಂಧ ಹೊಂದಿದ್ದರು ಇವರನ್ನು ಕಂಡರೆ ಜೇವರ್ಗಿ ತಾಲೂಕಿನ ಚಿಕ್ಕ ಮಕ್ಕಳಿಂದ ಎಲ್ಲರಿಗೂ ಅಚ್ಚು ಮೆಚ್ಚು ಅವರೇ ನಮ್ಮ ಎಸ್ ಎಸ್ ಹುಲ್ಲೂರ್. ಹೀಗೆ ತಮ್ಮ ಕೆಲಸ ಕಾರ್ಯಗಳ ಮೂಲಕ ಹೆಸರು ವಾಸಿಯಾಗಿರುವ ಶ್ರೀಯುತರು ಇತ್ತೀಚೆಗೆ ಲಿಂಗಸುಗೂರು ಡಿ ವೈ ಎಸ್ ಪಿ  ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ್ದರು ಅವರಿಗೆ ಜೇವರ್ಗಿ ಅಂದ್ರೆ ಎಲ್ಲಿಲ್ಲದ ಪ್ರೀತಿ ಜನತೆಗೆ ಅವರೆಂದರೆ ನಮ್ಮ ಮನೆಯ ಅಚ್ಚು ಮೆಚ್ಚಿನ ಹುಲ್ಲೂರು ಸಾಹೇಬರು ಎನ್ನುವಷ್ಟುರ ಮಟ್ಟಿಗೆ ಪ್ರೀತಿ

ವಿಶ್ವಾಸ ಜೇವರ್ಗಿಯ ಜನ ಇಂದಿಗೂ ಅವರನ್ನು ನಮ್ಮ ಹೆಮ್ಮೆಯ ಪೋಲಿಸ್ ಇಲಾಖೆಯ ಅಧಿಕಾರಿಯಾಗಿಯೆ ಅತಿ ಪ್ರೀತಿಯಿಂದ ಕಾಣುತ್ತಾರೆ ಇವರು ದುಷ್ಟರಿಗೆ ಸಿಂಹ ಸ್ವಪ್ನವಾಗಿ, ಶಿಷ್ಟರಿಗೆ ಸರಳ ಸ್ನೇಹ ಜೀವಿಯಾಗಿ ದಕ್ಷ ಪ್ರಾಮಾಣಿಕ ಅಪರೂಪದ ತಾಲೂಕಿನ ಮನೆ ಮಾತಾಗಿ ಪ್ರತಿ ಹಳ್ಳಿ ಪ್ರತಿ ಮನೆ ಚಿಕ್ಕ ಮಕ್ಕಳು ಕೂಡಾ ಮನೆಯಲ್ಲಿ ಓಣಿಯಲ್ಲಿ ಯಾರಾದರೂ ಬೈದ್ರೆ ಜಗಳವಾಡಿದರೆ ಹುಲ್ಲೂರ ಸಾಹೇಬರಿಗೆ ಹೇಳ್ತಿನಿ ಅನ್ನುವಷ್ಟರ ಮಟ್ಟಿಗೆ ತಾಲೂಕಿನಾದ್ಯಂತ ತಮ್ಮದೇ ಹೆಸರು ಛಾಪು ಮಾಡಿಸಿರುವ ಹುಲ್ಲೂರು ಅಂದರೆ ಜೇವರ್ಗಿ ಮತ್ತು ಜೇವರ್ಗಿ ಅಂದ್ರೆ ಹುಲ್ಲೂರು ಅನ್ನುವಷ್ಟರ ಮಟ್ಟಿಗೆ ತಾಲೂಕಿನಾದ್ಯಂತ ಪ್ರಖ್ಯಾತಿ ಹೊಂದಿರುವ ಡಿವೈಎಸ್ಪಿ ಸೇವೆಯಿಂದ ನಿವೃತ್ತಿ ನಂತರ ರಾಜಕೀಯ ಕ್ಷೇತ್ರದಲ್ಲಿ ಜನ ಸೇವೆ ಮಾಡಲು ಜೇವರ್ಗಿ ತಾಲೂಕಿನ ಅವರ ಅಪಾರ ಅಭಿಮಾನಿ ವೃಂದ ಅವರ ಮೇಲೆ ಒತ್ತಡ ಹಾಕಿ ಸರ್ ನೀವು ಬನ್ನಿ ದಕ್ಷ ಅಧಿಕಾರಿಗಳು ರಾಜಕೀಯ ಕ್ಷೇತ್ರಕ್ಕೆ ಬಂದು ಅನೇಕರು ಯಶಸ್ಸು ಕಂಡಿದ್ದಾರೆ ಮತ್ತು ಅಗಾಧ ಅಭಿವೃದ್ಧಿ ಕೂಡ ಮಾಡಿದ್ದಾರೆ ಎಂದು ದುಂಬಾಲು ಬಿದ್ದಾಗ ಇವರು ಅಭಿಮಾನಿಗಳ ಒತ್ತಡಕ್ಕೆ ಮಣಿದ ಹೂಲ್ಲುರ್ ರವರು ಜನ ಸೇವೆ ಮಾಡಲು ಚುನಾವಣೆಗೆ ಸ್ಪರ್ಧಿಸಲು ಸಿದ್ದರಾದರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ತಾಲೂಕಿನ ಜನ ಇನ್ನೇನು ದಕ್ಷ ಪ್ರಾಮಾಣಿಕ ಅಪರೂಪದ ಅಧಿಕಾರಿ ಬಂದರು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಅಭಿವೃದ್ಧಿಯಲ್ಲಿ ಕಡೆಯ ಸ್ಥಾನದಲ್ಲಿ ಇರುವ ನಮ್ಮ ತಾಲೂಕು ಅಭಿವೃದ್ಧಿ ಆಗ್ತದೆ ಅವರು ಈಗಲೂ ಯಾವುದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ ತಾಲೂಕಿನ ಜನ ದೊಡ್ಡ ಮಟ್ಟದಲ್ಲಿ ಬೆಂಬಲಿಸಲು ಸಿದ್ಧರಿದ್ದಾರೆ ಅವರು ಗೆದ್ದರೆ ತಾಲೂಕು ಅಭಿವೃದ್ಧಿ ನಿಶ್ಚಿತ ಅಂತ ಜನ ಅವರು ಬರುವ ನಿರೀಕ್ಷೆಯಲ್ಲಿ ಇದ್ದಾರೆ ಇವರ ಜನ ಸೇವೆಗೆ ಅವರಿಂದ ಎಲ್ಲಾ ರೀತಿಯ ಸಹಾಯ- ಸಹಕಾರ ಪಡೆದ ಕಾಣದ ಕೈಗಳು ಇವರನ್ನು ಜನ ಸೇವೆಗೆ ಬಾರದಂತೆ ಇನ್ನಿಲ್ಲದ ಮಾನಸಿಕ ಹಿಂಸೆ ಇವರ ದಿಟ್ಟ ದಕ್ಷ ಪ್ರಾಮಾಣಿಕತೆಗೆ ಜನಪ್ರಿಯತೆಗೆ ಮಸಿ ಬಳಿಯಲು ಇನ್ನಿಲ್ಲದ ಕಸರತ್ತು ನಡೆಸಿದ್ದು ಗುಟ್ಟಾಗೇನು ಉಳಿದಿಲ್ಲ‌ ಇದೆಲ್ಲವನ್ನು ಗಮನಿಸಿದರೆ ಕಾಲವಲ್ಲ ಇದು ಉಪಕಾರ ಮಾಡುವ ಕಾಲವಲ್ಲ ಎನ್ನುವಂತಿದೆ ಎಂದು ಜೇವರ್ಗಿ ಸಾಮಾಜಿಕ ಹೋರಾಟಗಾರ
ವಿಶ್ವನಾಥ್ ಪಾಟೀಲ್ ಗವನಳ್ಳಿ ಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದರು.
ವರದಿ: ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ