ನಡುವಲಿ ಕೊಡಗಿನ ರಾಣಿ ಕಿತ್ತಳೆ ಹಣ್ಣಿನ ಹೋಳು
ಒಳಗೆ ತುಂಬಿದೆ ಅಧಿಕ ಸಿಟ್ರಿಕ್ ಅಂಶದ ಸಣ್ಣ ಕಾಳು
ಜೊತೆಗೆ ಕತ್ತರಿಸಿದ ಸಿಪ್ಪೆಯ ಸಣ್ಣಸಣ್ಣ ತುಂಡುಗಳು
ನಾರಿನಾಂಶದ ಪಪ್ಪಾಯ ಹಣ್ಣಿನ ಬೀಜ ಮತ್ತು ಸಿಪ್ಪೆಗಳು
ತಿಲಕಾಕಾರದ ಆಕರ್ಷಕ ಕುಂಬಳಕಾಯಿ ಬೀಜಗಳು
ಮಧುಮೇಹ ಮಿತ್ರ ಹಾಗಲಕಾಯಿಯ ಬೀಜಗಳು
ಬಾಳೆಹಣ್ಣಿನ ಪ್ಯಾಕಿನಲ್ಲಿನ ಕಾಗದದ ಬೊಟ್ಟುಗಳು
ಮಿಶ್ರ ಫಲದ ಪಳೆಯುಳಿಕೆಯ ನವ್ಯ ಚಿತ್ತಾರ ಸಾರಿದೆ ಶುಭೋದಯ
- ಲಲಿತಾ ಕೆ ಆಚಾರ್, ಬೆಂಗಳೂರು




















