ಮದುವೆ ಶುಭಾಶಯ ಗುಚ್ಛದ ಪಕಳೆಗಳು
ಕೇಸರಿ ಬಿಳಿ ಆಕರ್ಷಣೆಯ ಪುಷ್ಪಗಳು
ಪಸರಿಸಿದ್ದವು ಸಮೃದ್ಧ ಹಸಿರೆಲೆ ಗರಿಗಳು
ಜೊತೆಯಲಿ ಕೆಂಗುಲಾಬಿಯ ದಳಗಳು
ನೋಡ ನೋಡುತಲಿ ಕಣ್ಮನ ಸೆಳೆಯಿತು
ಎನ್ನ ಸೃಜನಶೀಲ ಕಲೆ ಪ್ರಚೋದಿಸಿತು
ಕೆಲ ಕ್ಷಣದಲಿ ಸುಲಲಿತ ಚಿತ್ತಾರವಾಯಿತು
ಶುಭೋದಯಕೊಂದು ಕಾವ್ಯ ಮೂಡಿತು
- ಲಲಿತಾ ಕೆ ಆಚಾರ್, ಬೆಂಗಳೂರು




















