ನಿಸರ್ಗ ಕೊಡುಗೆಯ ಹರಳೆಕಾಯಿ ಬಲು ಆಕರ್ಷಕ
ಬೀಜದ ತೈಲಾಂಶ ಬಹೂಪಯೋಗದಿ ರೋಮಾಂಚಕ
ಮನುಜನ ಉದರ ಚರ್ಮ ಕೂದಲುಗಳ ಪೋಷಕ
ನಮ್ಮಮ್ಮನ ಕಿವಿಮಾತಿನಲಿದು ಎಂದೆಂದಿಗೂ ಪ್ರೇರಕ
ಕ್ರಿಯಾಶೀಲ ಕಲೆಗಾರರಿಗಿದು ಉಚಿತ ಕಾರ್ಣಿಕ
ಜೋಡಣೆಯಲಿ ಮೂಡಿರುವ ಚಿತ್ತಾರ ತಾಂತ್ರಿಕ
ಓದುಗ ಮನಗಳಿಗೊಂದು ಲಘುಕಾವ್ಯ ಪೂರಕ
ಸುಪ್ರಭಾತದಲಿದು ಸುಮನಗಳಿಗೆ ಸಮರ್ಪಕ
- ಲಲಿತಾ ಕೆ ಆಚಾರ್, ಬೆಂಗಳೂರು




















