ಹಾನಗಲ್.:ಪ್ರಪ್ರಥಮ ಬಾರಿಗೆ ಹಾನಗಲ ನಗರಕ್ಕೆ ಆಗಮಿಸುತ್ತಿರುವ ಸನ್ಮಾನ್ಯ ಶ್ರೀ ಗಾಲಿ ಜನಾರ್ದನ್ ರೆಡ್ಡಿ ಅವರಿಗೆ ಹಾನಗಲ ಮತಕ್ಷೇತ್ರದ ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿದ್ದರಾಗಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕರ್ನಾಟಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಜಾರಿಗೊಳಿಸಿ ಪಕ್ಷದ ಮೇಟಿಯಾಗಿ ನಿಂತಿರುವ ಮತ್ತು ಪಕ್ಷವನ್ನು ಕಟ್ಟಿರುವ ಸನ್ಮಾನ್ಯ ಶ್ರೀ ಗಾಲಿ ಜನಾರ್ದನ್ ರೆಡ್ಡಿ ಅವರು ಹಾನಗಲ್ ನಗರಕ್ಕೆ ಆಗಮಿಸುತ್ತಿರುವುದರಿಂದ ಹಾನಗಲ್ ಮತಕ್ಷೇತ್ರದ ಕಾರ್ಯಕರ್ತರು ಮತ್ತು ಹಾನಗಲ್ ತಾಲೂಕಿನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿರುವ ಶ್ರೀ ಎಸ್ ಕೆ ಪಂಪಾಪತಿ ಅವರು, ನಗರದ ಹೊರವಲಯದಲ್ಲಿರುವ, ಮಲ್ಲಿಗಾರದಿಂದ ಹೂವಿನ ಹಾರ ಹಾಕುವ ಮೂಲಕ ಸ್ವಾಗತ ಕೋರಿ ನಗರದ ಮುಖ್ಯರಸ್ತೆಯಿಂದ ಬೃಹತ್ ಬೈಕ್ ರಾಲಿ ಮೂಲಕ, ವಿವಿಧ ಕಲಾ ಮೇಳ, ಜಾಂಜ್ ಮೇಳ, ಡೊಳ್ಳು ಮೇಳದಿಂದ ಮತ್ತು ಡಿಜೆ ಹಚ್ಚುವ ಮೂಲಕ ನಗರದ ಶ್ರೀ ಗಣೇಶ್ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಶ್ರೀ ಕನಕದಾಸರ ಪುತ್ತಳಿಗೆ ಮಾದಾರ್ಪಣೆ ಮಾಡುವರು ಮತ್ತು ತಾಲೂಕಿನ ಹಿರಿಯ ರೈತ ದಂಪತಿಗಳಿಗೆ ಪಾದ ಪೂಜೆ ಮಾಡಿ, ಹಾನಗಲ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ ನಗರದ ಕಾಶ್ಮೀರಿ ದರ್ಗಾ ಕೆ ಭೇಟಿ ನೀಡುವರು. ನಂತರ ಅಲ್ಲಿಂದ ನೇರವಾಗಿ ಶ್ರೀ ಕುಮಾರೇಶ್ವರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವರು, ನಂತರ ಪಕ್ಕದಲ್ಲಿರುವ ಕುಮಾರೇಶ್ವರ ಮಂಗಲ ಸಭಾಭವನಕ್ಕೆ ಆಗಮಿಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವರು. ಮತ್ತು ರಾಜ್ಯದ ಜನರಿಗೆ ಪಕ್ಷದ ಪ್ರಣಾಳಿಕೆಗಳನ್ನು ಘೋಷಿಸಲಿದ್ದಾರೆ.
ವರದಿಗಾರರು. ರವಿ ಓಲೆಕಾರ ಹಾನಗಲ