ಹುಬ್ಬಳ್ಳಿ : ಹಲವು ಶಸ್ತ್ರಚಿಕಿತ್ಸೆಗಳು ವಿಫಲಗೊಂಡು
ಆಫ್ರಿಕಾ ಮೂಲದ 35 ವರ್ಷದ ಮಹಿಳೆಗೆ ಇಲ್ಲಿನ ಗ್ರೆನೀಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ‘3ಡಿ ಪ್ರಿಂಟೆಡ್ ಟೈಟಾನಿಯಂ ಹಿಪ್ ಇಂಪ್ಲಾಂಟ್’ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಮರುಜೀವ ನೀಡಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ.ಬಸವರಾಜ್ . ಎಂ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಡೆಯುವ ಸಾಮರ್ಥವನ್ನೇ ಕಳೆದುಕೊಂಡಿದ್ದ ಸಂಕೀರ್ಣ ಹಿಪ್ ಗಾಯದಿಂದಾಗಿ ಮಹಿಳೆಯ ಹಿಪ್ ಸಾಕೆಟ್ನಲ್ಲಿ ಭಾರಿ ಪ್ರಮಾಣದ ಮೂಳೆ ನಷ್ಟ ಉಂಟಾಗಿತ್ತು. ಅಲ್ಲದೆ ಒಂದು ಕಾಲು ಸುಮಾರು 4 ಇಂಚುಗಳಷ್ಟು (10 ಸೆಂ.ಮೀ.) ಚಿಕ್ಕದಾಗಿ ತೀವ್ರ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ಅಸ್ಥಿ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಸಲಹೆಗಾರ ಡಾ. ಬಸವರಾಜ್ ಸಿ. ಎಂ. ಅವರ ನೇತೃತ್ವದ ತಜ್ಞರ ತಂಡವು ಸಾಮಾನ್ಯ
ಹಿಪ್ ರಿಪ್ಲೇಸ್ಮೆಂಟ್ ಈಕೆಗೆ ಸೂಕ್ತವಲ್ಲ ಎಂದು ನಿರ್ಧರಿಸಿ, ಈ ಅತ್ಯಾಧುನಿಕ ತಂತ್ರಜ್ಞಾನ ಬಳಸಲು ಮುಂದಾಯಿತು ಎಂದು ಮಾಹಿತಿ ನೀಡಿದರು.
5 ಈ ತಂತ್ರಜ್ಞಾನದಲ್ಲಿ ರೋಗಿಯ ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ 3ಡಿ ಯೋಜನೆಯ ಆಧಾರದ ಮೇಲೆ ಅವರಿಗಾಗಿಯೇ ವಿಶೇಷವಾಗಿ ಇಂಪ್ಲಾಂಟ್ ವಿನ್ಯಾಸಗೊಳಿಸಲಾಗುತ್ತದೆ. ಗಿಯ ದೇಹರಚನೆಗೆ ನಿಖರವಾಗಿ ಹೊಂದುವಂತೆ ಇದರಿಂದ ರೋ-ಇಂಪ್ಲಾಂಟ್ ಅಳವಡಿಸಿ, ಕಾಲಿನ ಉದ್ದವನ್ನು ಸಮನಾಗಿಸಲು ಸಾಧ್ಯವಾಗಿದೆ ಎಂದರು.
ನಂತರ ರೋಗಿ ಈಗ ಸಂಪೂರ್ಣ ಶಸ್ತ್ರಚಿಕಿತ್ಸೆಯ ಗುಣಮುಖರಾಗಿದ್ದು, ನೋವಿನಿಂದ ಮುಕ್ತಿ ಪಡೆದು ಸ್ವತಂತ್ರವಾಗಿ ದೈನಂದಿನ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಭಾರತದಲ್ಲೇ ತಯಾರಿಸಲಾದ ಈ 3ಡಿ ಪ್ರಿಂಟಿಂಗ್ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರದೀಪ ಬುಲಬುಲೆ, ಮುತ್ತಣ್ಣ ಹಂಚಿನಾಳ ಇದ್ದರು.




















