ಚಾಮರಾಜನಗರ :
ಹನೂರು :ನೂತನವಾಗಿ ನಿರ್ಮಿಸುತ್ತಿರುವ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಿಂದ ದೀಪದ ಗಿರಿ ಒಡ್ಡುವಿನ ಹತ್ತಿರ 108 ಅಡಿ ಎತ್ತರದ ಮಲೆ ಮಾದೇಶ್ವರ ಸ್ವಾಮಿ ವಿಗ್ರಹ ಸ್ಥಾಪನೆ ಸ್ಥಳಕ್ಕೆ ಹೋಗುವ ರಸ್ತೆ ಮಧ್ಯ ಭಾಗದಲ್ಲಿದ್ದ ದೊಡ್ಡ ಬಂಡೆಯನ್ನು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಬಂಡೆ ಬ್ಲಾಸ್ಟ್ ಮಾಡಿದರ ಪರಿಣಾಮವಾಗಿ ರಸ್ತೆ ಬದಿಯಲ್ಲಿದ್ದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದರಿಂದ ಬಡವರ ಗೊಳು ಕೇಳುವವರಿಲ್ಲದಂತಾಗಿದೆ .
ಬೇಡಗಂಪಣ ಜನಾಂಗಕ್ಕೆ ಸೇರಿದ ಕುಟುಂಬಗಳಾದ ಸುಂದರಿ, ಪುಟ್ಟ, ಸಾಕಮ್ಮ, ಉಚ್ಚಯ ತಂಬಡಿ ಎಂಬವರಿಗೆ ಸೇರಿದ ಮನೆಗಳು ಶಿಥಿಲಗೊಂಡಿರುವ ಪರಿಣಾಮ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಈ ವಿಚಾರವಾಗಿ ರೈತ ಮುಖಂಡರಾದ ಕೊಮ್ಮುದಿಕ್ಕಿ ಮಾದೇವ ನೇತೃತ್ವದಲ್ಲಿ ಪ್ರಾಧಿಕಾರದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮಾದೇವ ಸ್ಥಳೀಯ ನಿವಾಸಿಗಳಿಗೆ ಯಾವುದೇ ಮಾಹಿತಿ ನೀಡದೆ ರಾತ್ರೋ ರಾತ್ರಿ ಬಂಡೆ ಹೊಡೆದಿದ್ದಾರೆ. ಸಾವು ನೋವು ಸಂಭವಿಸಿದ್ದರೆ ಯಾರು ಹೊಣೆ ಪ್ರಸ್ತುತ ಘಟನೆಯಿಂದ ಅನಾಹುತ ಆಗಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವವರೆಗೂ ಕಾಮಾಗಾರಿ ನಡೆಸಬಾರದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತ ಸಂಘ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪ್ರಾಧಿಕಾರದ ಉಪ ಕಾರ್ಯದರ್ಶಿ ಬಸವರಾಜು ರೈತರ ಸಮಸ್ಯೆ ಆಲಿಸಿ ಮನವಿ ಪತ್ರ ಸ್ವೀಕರಿಸಿದ ನಂತರ ಅವರು ಸಮಸ್ಯೆಗಳ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಮಲೆ ಮಹದೇಶ್ವರ ಬೆಟ್ಟ ವೃತ್ತ ನಿರೀಕ್ಷಕ ನಂಜುಂಡಸ್ವಾಮಿ ರವರ ನೇತೃತ್ವದಲ್ಲಿ ರಕ್ಷಣೆ ಒದಗಿಸಲಾಗಿತ್ತು. ಮಲೆ ಮಹದೇಶ್ವರಬೆಟ್ಟದ ಸುತ್ತಮುತ್ತಲ ಗ್ರಾಮದ ರೈತ ಸಂಘದ ಮುಖಂಡರು ಹಾಗೂ ಸಾರ್ವಜನಿಕರು ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್