ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಮಾಡಿದ ಶಾಸಕ.ಆರ್.ನರೇಂದ್ರ

ಚಾಮರಾಜ ನಗರ ಜಿಲ್ಲೆಯ ಹನೂರು ವಿಧಾನ ಸಭಾ ಕ್ಷೇತ್ರದ ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಮಾಡಿದ ಶಾಸಕ ಆರ್.ನರೇಂದ್ರ

ಅವರು ಯಾವುದೇ ಒಬ್ಬ ವ್ಯಕ್ತಿ ಶಾಸನ ಸಭೆಗೆ ಆಯ್ಕೆಯಾಗಬೇಕಾದರೆ ಮೊದಲು ಜನರ ಸೇವೆ ಮತ್ತು ನಾಡಿ ಮಿಡಿತವನ್ನು ಅರಿಯಬೇಕು ,ಶಾಸಕನಾದವರು ತನ್ನ ಜವಾಬ್ದಾರಿಯನ್ನು ಅರಿಯಬೇಕು ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ.ಆರ್.ನರೇಂದ್ರ ತಿಳಿಸಿದರು ನಂತರ ಮಾತನಾಡಿದ ಅವರು ಮಾರ್ಟಳ್ಳಿ
ಗ್ರಾಮದ ಹೃದಯಭಾಗದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡವಿದೆ ನಾನು ಸುಮಾರು 4 ಕೋಟಿಯ 80 ಲಕ್ಷ ರೂಗಳ ಅಂದಾಜು ವೆಚ್ಚದಲ್ಲಿ ವಡಕೆಹಳ್ಳ ಮತ್ತು ಮಾರ್ಟಳ್ಳಿಗೆ ಸಂದಿಸುವ ರಸ್ತೆ ಅಭಿವೃದ್ಧಿಗೆ ಗುದ್ದಲಿಪೂಜೆ ಮಾಡಿದ್ದೇವೆ ಈಗಾಗಲೇ ನಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಸುವಲ್ಲಿ ಬಿ ಜೆ ಪಿ ಸರ್ಕಾರವು ತಾರತಮ್ಯ ನೀತಿ ಅನುಸರಿಸುತ್ತಿದೆ ನಾನು ಇದೇ ಪಂಚಾಯತಿಯಲ್ಲಿ ಎಲ್ಲಾ ಪಕ್ಷದ ಸದಸ್ಯರು ಇದ್ದರು ಸಹ ಇನ್ನೂರ ಎಂಬತ್ತು ಕೋಟಿಗೂ ಹೆಚ್ಚು ಅನುದಾನ ತಂದು ಕಾಮಗಾರಿಗಳಾಗಿವೆ, ‌ಕಳೆದವಾರ ತೊಂಬತೈದು ಲಕ್ಷ ವೆಚ್ಚದಲ್ಲಿ ‌ರಸ್ತೆಗಳ ಗುದ್ದಲಿ ಪೂಜೆ ಮಾಡಿದ್ದೆವಿ ಇಡಿ ಕ್ಷೇತ್ರಕ್ಕೆ ಎಲ್ಲಾ ಕಡೆ ನೀರಿನ ಅಭಾವ ನೀಗಿಸಿದ್ದೆನಿ,ಮಸೀದಿಗಳಿಗೆ 45 ಕೋಟಿ ಹಾಗೂ ಚರ್ಚ್ ಗಳಿಗೆ ಎಂಬತ್ತು ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದೆನೇ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಸುಳ್ವಾಡಿ ಪ್ರಕರಣದಲ್ಲಿ ಇಪ್ಪತ್ತು ದಿನಗಳಿಗೂ ಹೆಚ್ಚು ಕಾಲ ವಾರಸುದಾರರಿಗೂ ಸೇರಿದಂತೆ ಎಲ್ಲಾರಿಗೂ ಊಟವು ಸೇರಿಸಿ ಎಲ್ಲಾ ವ್ಯವಸ್ಥೆ ಮಾಡಿದ್ದೇನೆ
ಕ್ಷೇತ್ರದ ಜನರ ಸೇವಕನಾದರೆ ಮಾತ್ರ ಶಾಸಕನಾಗಬಹುದು ಕೇವಲ ಹಿಂಬಾಲಕರಾಗಿರುವವರೆ ಶಾಸಕರಾಗಿರುವ ರೀತಿಯಲ್ಲಿ ವರ್ತಿಸುತ್ತಾರೆ, ನಮ್ಮ ಮನೆತನ ಸುಮಾರು ಮೂರು ತಲೆಮಾರಿನಿಂದ ಸೇವೆ ಮಾಡತ್ತಿದ್ದೇವೆ ಮಾರ್ಟಳ್ಳಿಯಲ್ಲಿ ‌ನಮ್ಮ ಮನೆತನದ ಕೊಡುಗೆಯು ಅಪಾರವಿದೆ ಇನ್ನು ಹೆಚ್ಚಿನ ಮಾಹಿತಿ ಕೊರತೆಯಾದರೆ ನಮ್ಮ ಮುಖಂಡರುಗಳನ್ನು ಸಂಪರ್ಕ ಮಾಡುವಂತೆ ಹೇಳಿ ಕೆಲವರು ಅಭಿವೃದ್ಧಿ ಶೂನ್ಯ ಎಂಬುವವರಿಗೆ ತಿರುಗೇಟು ನೀಡಿದರು.
ನಂತರ ಇದೇ ಸಮಯದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಾಮಲಿಂಗಮ್
ಮಾರ್ಟಳ್ಳಿ ವಡಕೆಹಳ್ಳ ಮುಖ್ಯ ರಸ್ತೆ 4.80 ಲಕ್ಷ ಹಾಗೂ ಪಂಚಾಯತಿ ಕಟ್ಟಡದಲ್ಲಿ ಅನುದಾನ 48 ಲಕ್ಷ ಇವೆಲ್ಲವು ಶಾಸಕರ ಅನುದಾನವಾಗಿದೆ ನಮ್ಮ ಭಾಗದಲ್ಲಿ ಐದು ಮುಖ್ಯ ಚರ್ಚ್ ಗಳ ಪಾಧರ್ ಗಳ ಅಭಿಲಾಷೆಯಂತೆ ಇಂದು ಮಾಡಿರುವ ಕಾಮಗಾರಿಯಾಗಿದೆ ಎಲ್ಲಿಂದಲೊ ಬಂದ ಬೆಂಗಳೂರು ನಿವಾಸಿಗಳು ದುಡ್ಡಕೊಟ್ಟು ಗಲಾಟೆ ಮಾಡಿಸಿದರು ನಾವು ಬಗ್ಗಲ್ಲ ,ಜಗ್ಗಲ್ಲ ,ಈ ಬಾಗದಲ್ಲಿ ನಾವುಗಳು ಸಹ ಶಾಸಕರ ಪರವಾಗಿದ್ದೆವಿ ಪ್ರಾಮಾಣಿಕ ವ್ಯಕ್ತಿಗೆ ನಮ್ಮ ಒಲವಿದೆ‌ ಉತ್ತಮ ರೀತಿಯಲ್ಲಿ ಸ್ಪಂದಿಸುವ ನಾಯಕರನ್ನು ನಾವೆಲ್ಲರು ಆರಿಸೋಣ ಎಂದರು, ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರುಗಳಾದ ಬಸವರಾಜು,ಈಶ್ವರ್,ಹನೂರು ಪ.ಪಂಚಾಯತಿ ಉಪಾದ್ಯಕ್ಷರಾದ ಗೀರಿಶ್ ಕುಮಾರ್ , ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿ ,ಶ್ರೀ ನಿವಾಸ್ ,
ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಶಾಂತಿ ,ಪಿ. ಉಪಾಧ್ಯಕ್ಷ ರಾಮಲಿಂಗ,ಡಿ.ಒ ಗಂಗಾಧರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ