ಯಾದಗಿರಿ ಶಹಾಪುರ ತಾಲೂಕಿನ ಮೂಡಬೂಳ ಗ್ರಾಮ ಪಂಚಾಯಿತಿ ಅಧ್ಯಕ್ಷ , ಪಿಡಿಒ, ಹಾಗೂ ಜೆ.ಇ ಮೂವರೂ ಸೇರಿ 2021/22 ನೇ ಸಾಲಿನ 2.44 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಿಲ್ ಪಾವತಿ ಮಾಡಲಾಗಿದೆ ಎಂದು ಮೂಡಬೂಳ ಗ್ರಾಮದ ನಿವಾಸಿ ಎಲ್ಲಪ್ಪ ತಂ/ ಮಾನಪ್ಪ ಹವಾಲ್ದಾರ್ ಆರೋಪ ಮಾಡಿದ್ದರು.
2021/22 ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಮೂಡಬೂಳ ಗ್ರಾಮ ಪಂಚಾಯಿತಿಯ ಕಾಮಗಾರಿ ಯು.ಕೆ.ಪಿ ಕ್ಯಾಂಪ್ ಹತ್ತಿರ ಸಿ.ಸಿ ರೋಡ್ ಮತ್ತು ಚರಂಡಿ ಮುಖ್ಯ ರಸ್ತೆಯಿಂದ ದರ್ಗಾವರೆಗೆ ಸಿ.ಸಿ ರೋಡ್ ನಿರ್ಮಾಣ ಕಾಮಗಾರಿ ಮಾಡಿರುವುದಿಲ್ಲ ಮತ್ತು ಕಂಠೆಪ್ಪ ಅವರ ಮನೆಯಿಂದ ಕೃಷ್ಣಪ್ಪ ಕೂಡಗಿ ಮನೆಯ ವರೆಗೆ
ಸಿ.ಸಿ.ರೋಡ್ ಶಾಸಕರ ಅನುದಾನದಲ್ಲಿ ಪೂರ್ಣಗೊಂಡ ಕಾಮಗಾರಿಗೆ ನರೇಗಾ ಯೋಜನೆ ಅಡಿಯ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಿಲ್ ಪಾಸ್ ಮಾಡಿದ್ದಾರೆ ಹಾಗೂ ರೋಡ್ ಹತ್ತಿರ ಇರುವ ಎಸ್.ಸಿ. ಭಾವಿ ಹೂಳೆತ್ತುವುದು ನಾಗರಬಾವಿ ಕಲ್ಯಾಣ ಹೂಳೆತ್ತುವುದು ಮತ್ತು ರಿಪೇರಿ ಮಾಡುವುದು. ಮಲ್ಲಿಕಾರ್ಜುನ ಮನೆ ಹತ್ತಿರ ಭಾವಿ ಹೂಳೆತ್ತುವುದು. ಈ ಎಲ್ಲಾ ಕಾಮಗಾರಿಗಳು ದಾಖಲೆಯಲ್ಲಿ ಮಾತ್ರ ಪೂರ್ಣಗೊಂಡಿದೆ ಆದರೆ ಸ್ಥಳದಲ್ಲಿ ಪರಿಶೀಲನೆ ಮಾಡಿದಾರೆ ಅಲ್ಲಿ ಯಾವುದೇ ಕಾಮಗಾರಿ ಮಾಡಿರುವುದಿಲ್ಲ ಮೂಡಬೂಳ ಗ್ರಾಮ ಪಂಚಾಯಿತಿ ಅಧಿಕಾರಿಗಳ ಭ್ರಷ್ಟಾಚಾರದಲ್ಲಿ ಮುಳುಗಿರುತ್ತಾರೆ. ಎಂದು ಎಲ್ಲಪ್ಪ ಹವಾಲ್ದಾರ್ ನೇರವಾಗಿ ಆರೋಪ ಮಾಡಿದರು.
ಅರವಿಂದರಡ್ಡಿ ಹೊಲದ ವರೆಗಿನ ರೋಡ್ ಸುಧಾರಣೆ. ಇಟಗಿ ರೋಡ್ ನಿಂದ ಸಲ್ಲಾದಪುರ ವರೆಗಿನ ರೋಡ್ ಮಾಡಿರುವುದಿಲ್ಲ ನಿಷ್ಠೆ ಹೊಲದಿಂದ ಈರಣ್ಣ ದೇಸಾಯಿ ಹೊಲದ ಹತ್ತಿರ ಯಾವುದೇ ರೋಡ್ ಸುಧಾರಣೆ ಆಗಿರುವುದಿಲ್ಲ ಎಂದು ಈರಣ್ಣ ದೇಸಾಯಿಯವರು ಹೇಳಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ನೂರಾರು ಕಾಮಗಾರಿಗಳಿಗೆ ಕೆಲಸ ಮಾಡದೇ ಬಿಲ್ ಮಾಡಿರುತ್ತಾರೆ ಸಂಬಂಧಪಟ್ಟ ಯಾವ ಒಬ್ಬ ಅಧಿಕಾರಿಗಳು ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ