ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಜಯಂತೋತ್ಸವ ಹಾಗೂ ಶ್ರೀ ಹಡಪದ ಅಪ್ಪಣ್ಣನವರ ಪ್ರಾಥಮಿಕ ಶಾಲೆಯ 14 ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಸಿಂದಗಿ ಜನಪ್ರಿಯ ಶಾಸಕರು ಸನ್ಮಾನ್ಯ ಶ್ರೀ ರಮೇಶ ಭೂಸನೂರ ನೆರವೇರಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಡಾ // ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸಿ ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಹುಲಿಯ ಹಾಲು ಕುಡಿದವರು ಘರ್ಜಿಸಲೇಬೇಕು ಎಂದರು.
ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು ಎಂದು ಪಾಲಕ ಪ್ರತಿನಿಧಿಗಳಿಗೆ ವಿನಂತಿಸಿದರು ಹಡಪದ ಸಮಾಜ ಅತಿ ಹಿಂದುಳಿದ ವರ್ಗದ ಸಮಾಜವಾದರೂ ಕೂಡ ಶ್ರೀ ಹಡಪದ ಅಪ್ಪಣ್ಣನವರ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿ ಎಲ್ಲ ವರ್ಗದ ಕಡು ಬಡವರ ಮಕ್ಕಳಿಗಾಗಿ ವಿದ್ಯಾಧಾನ ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯ ಈ ಸಮಾಜ ಎಲ್ಲಾ ವರ್ಗದವರೊಂದಿಗೆ ಒಳ್ಳೆ ಬಾಂದವ್ಯ ಹೊಂದಿದ ಈ ಶಾಲೆ ರಾಜ್ಯ ಮಟ್ಟದಲ್ಲಿ ಬೆಳೆಯಬೇಕು ಈ ಶಾಲೆಯ ಮೂಲಭೂತ ಸೌಲಭ್ಯಕ್ಕಾಗಿ ಮೂರು ಲಕ್ಷ ಅನುದಾನ ನೀಡಿದ್ದು ಮುಂದೆ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು .ಈ
ಕಾರ್ಯಕ್ರಮದಲ್ಲಿ ಶರಣಯ್ಯ ಹಿರೇಮಠ ,ಗುರುಪಾದ ಹಡಪದ ಅಧ್ಯಕ್ಷರು ಶ್ರೀ ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆ ,
ಸಂತೋಷಗೌಡ ಪಾಟೀಲ್ (ಡಂಬಳ) ಉ.ಕ.ಕರವೆ ಅಧ್ಯಕ್ಷರು,ರಾವುತ್ ತಳಕೇರಿ,ಗ್ರಾಮ ಪಂಚಾಯತ್ ಅಧ್ಯಕ್ಷರು ಕವಿತಾ ರಾಠೋಡ್,
ಸಿಂದಗಿ ತಾಲ್ಲೂಕಿನ ಹಡಪದ ಸಮಾಜ ಅಧ್ಯಕ್ಷ ಮಾಂತೇಶ ಮೂಲಿಮನಿ,ಚಂದ್ರಶೇಖರ ಅಮಲಿಹಾಳ ,ಸಂಜೀವ ಶಿವಣಗಿ,ಮಲ್ಲಿಕಾರ್ಜುನ ಸಾವಳಸಂಗ ಬೋರಗಿ,ಹಿರಾಸಿಂಗ್ ಹಜೇರಿ , ಲಕ್ಷ್ಮಣ ನೈಕೋಡಿ , ನಾನಾಗೌಡ ಬಿರಾದಾರ್, ಆಯ್ ಎಮ್ ಬಿರಾದಾರ್, ಭೀಮರಾಯ ಬಿಂಗೋಳ್ಳಿ ಮಲ್ಲಿಕಾರ್ಜುನ ಹಡಪದ ಹಾಗೂ ಶಾಲೆಯ ಶಿಕ್ಷಕರು, ಹಂದಿಗನೂರ ಗ್ರಾಮಸ್ಥರು ಬಸ್ತಿಹಾಳ ಹಾಗೂ ಹಡಗಿನಾಳ ಮತ್ತು ಕಣ್ಣ ಗುಡ್ಡಿಹಾಳ ಗುಬ್ಬೇವಾಡ ಗ್ರಾಮದ ಪಾಲಕರು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು , ದರೀಶ ಏನ್ ಬಾಳಿಗೇರಿ ದೈಹಿಕ ಶಿಕ್ಷಕರು ಮುರಾರ್ಜಿ ಶಾಲೆ ಬೆಳಗಾವಿ ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರು.