ನೆತ್ತರು ವೃದ್ಧಿಸುವ ಬೀಟ್ರೂಟ್ ತುರಿ ಅರೆವೃತ್ತದಲಿ
ಅಲಂಕರಿಸಲು ಪುಟ್ಟ ತಿಳಿಹಸಿರು ಪಂಚ ಗರಿಗಳಲಿ
ಗೋಪುರಾಕಾರದಿ ಉದ್ದನೆಯ ಗರಿಗಳನಿಡುತಲಿ
ನಿಸರ್ಗ ತೆನೆಗಳ ಆಚೀಚೆ ತಾಗಿಸಿ ತುತ್ತ ತುದಿಯಲಿ
ಅಗಲ ಪಚ್ಚೆ ಅರೆ ಎಲೆಗಳನು ಬುಡದಿ ಜೋಡಿಸುತಲಿ
ಬಾಡಿದ್ದ ದಾಸವಾಳಗಳ ಕತ್ತರಿಸಿ ಸುತ್ತ ಸಿಂಗರಿಸುತಲಿ
ಮೂಡಿರುವ ಸುಲಲಿತ ಕಾವ್ಯ ಚಿತ್ತಾರ ನಲ್ಮುಂಜಾವಲಿ
ಬರುತಿದೆ ಕಲಾಭಿಮಾನಿಗಳಲ್ಲಿಗೆ ಶುಭ ಗಳಿಗೆಯಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















