ಕೊಳ್ಳೇಗಾಲ: 14 ವರ್ಷದ ವಿದ್ಯಾರ್ಥಿಗಳ ಹೋಬಳಿ ಮಟ್ಟದ ಕ್ರೀಡ
ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕೊಳ್ಳೇಗಾಲ ದೈಹಿಕ ಶಿಕ್ಷಣ ವಿಭಾಗ ಹಾಗೂ ಸರ್ಕಾರಿ ಆದರ್ಶ ಶಾಲೆ, ಕಜ್ಜಿಹುಂಡಿ, ಹೊಸಮಾಲಂಗಿ, ಸಿಲ್ಕಲ್ ಪುರ ಸರ್ಕಾರಿ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ
ಕಸಬಾ ಹೋಬಳಿ ಮಟ್ಟದ 14 ವರ್ಷ ವಯೋಮಾನದ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟವನ್ನು ಗುರುವಾರ ಆಯೋಜಿಸಲಾಗಿತ್ತು .
ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಉದ್ಘಾಟಿಸಿ ನಂತರ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವಂತ ಕ್ರೀಡಾಪಟುಗಳು ಉತ್ತಮವಾದ ಸ್ಪರ್ಧೆಯನ್ನು ಪ್ರದರ್ಶಿಸಬೇಕು ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಕ್ರೀಡೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ
ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಆರೋಗ್ಯ ವೃದ್ಧಿಯಾಗುತ್ತದೆ ಆದ್ದರಿಂದ ಉತ್ತಮ ಸ್ಪರ್ಧೆಯನ್ನು ನೀಡಿ ತಾಲ್ಲೂಕಿನ ಹಿರಿಮೆಯನ್ನು ಎತ್ತಿ ಹಿಡಿಯುಬೇಕೆಂದು ತಿಳಿಸಿದರು.
ಇಂದಿನ ಕ್ರೀಡಾಕೂಟವನ್ನು ಸರ್ಕಾರಿ ಆದರ್ಶ ಶಾಲೆ, ಕಜ್ಜಿಹುಂಡಿ, ಹೊಸಮಾಲಂಗಿ, ಸಿಲ್ಕಲ್ ಪುರ ಸರ್ಕಾರಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಉತ್ತಮವಾಗಿ ಆಯೋಜಿಸಿದ್ದಾರೆ. ಅದೇ ರೀತಿ ಕ್ರೀಡಾಪಟುಗಳು ತಮ್ಮದೆ ಆದ ಕ್ರೀಡಾಸಮವಸ್ತ್ರ ಧರಿಸಿರುವುದು ಸಂತಸ ಎಂದು ಹೇಳಿದರು.
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕಸಬಾ ವ್ಯಾಪ್ತಿಯ 45 ಶಾಲೆಯ ಕ್ರೀಡಾಪಟುಗಳು ಕಬ್ಬಡಿ, ಖೋಖೋ, ವಾಲಿಬಾಲ್, ಥ್ರೋಬಾಲ್ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಪಟುದ ನಿರೂಪಣೆಯನ್ನು ನಿವೃತ್ತ ದೈಹಿಕ ಶಿಕ್ಷಕ ಸುಂದರರಾಜ್ ನಡೆಸಿದರು.
ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರು ಪ್ರಕಾಶ್, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕರು ಸ್ಟೀವನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಸವಿತಾ, ಆದರ್ಶ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಕಾಶ್, ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ, ಚೌಡೇಶ್ವರಿ ಶಾಲೆಯ ಮುಖ್ಯಶಿಕ್ಷಕರು ಮುರುಗೇಶ್, ಹೊಸಮಾಲಂಗಿ ಸರ್ಕಾರಿ ಶಾಲೆಯ ನಿಂಗರಾಜು, ಸಿಲ್ಕಲ್ ಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶಿವಮಾದು, ಕಜ್ಜಿಹುಂಡಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಚಂಪಕಮಾಲಾ ಹಾಗೂ ಇತರರು ಇದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್ , ಶಿವಮೊಗ್ಗ / ಬೆಂಗಳೂರು




















