ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಗಣನೀಯ ಸೇವೆಯನ್ನು ಗಮನಿಸಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕರಾದ ಡಾ. ಶಿವಬಸಪ್ಪ ಚ. ಮಸ್ಕಿ. ಹಾಗೂ ಶ್ರೀ ಮತಿ ನವ್ಯಾ ಡಾ. ಮಹಾಂತೇಶ ನೆಲಾಗಣಿ ದಂಪತಿಗಳಿಗೆ ಬೆಂಗಳೂರಿನ ಸುರ್ವೆ ಕಲ್ಚರಲ್ ಅಕಾಡೆಮಿಯವರು ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಈ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಸುರ್ವೆ ಕಲ್ಚರಲ್ ಅಕಾಡೆಮಿ ವತಿಯಿಂದ ದಿನಾಂಕ :27.09.2026 ರಂದು ರವಿವಾರ ಸಂಜೆ 5 :00 ಗಂಟೆಗೆ ರವೀಂದ್ರ ಕಲಾಕ್ಷೇತ್ರ ಆವರಣ ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಸಮಾರಂಭದಲ್ಲಿ ಡಾ. ಶಿವಬಸಪ್ಪ ಚ. ಮಸ್ಕಿ ಇವರಿಗೆ “ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ” ಮತ್ತು ಇರಕಲ್ ಗಡಾದ ಸ. ಪ. ಪೂ. ಸಮಾಜಶಾಸ್ತ್ರ ವಿಭಾಗದ ಅತಿಥಿ ಉಪನ್ಯಾಸಕರಾದ ಶ್ರೀ ಮತಿ ನವ್ಯಾ ಮತ್ತು ಕೊಪ್ಪಳದ ಸ. ಪ್ರ. ದರ್ಜೆ ಕಾಲೇಜಿನ ಕನ್ನಡ ಅತಿಥಿ ಉಪನ್ಯಾಸಕರಾದ ಡಾ. ಮಹಾಂತೇಶ ನೆಲಾಗಣಿ ದಂಪತಿಗಳಿಗೆ “ಮಯೂರ ಆದರ್ಶ ದಂಪತಿ ರಾಜ್ಯ ಪ್ರಶಸ್ತಿ”ನೀಡಲಾಗುವುದು ಇವರಿಬ್ಬರು ತಮ್ಮ ಪ್ರತಿಭೆ ಮತ್ತು ನಿರಂತರ ಶಿಕ್ಷಣದ ಸೇವೆಗಾಗಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಕಾಲೇಜಿನ ಪ್ರಾOಶುಪಾಲರು, ಸಿಬ್ಬಂದಿವರ್ಗ ಹಾಗೂ ಬಂಧು ಮಿತ್ರರು, ಹಿತೈಷಿಗಳು ಅಭಿನಂದನೆಗಳ ಜೊತೆಗೆ ಶುಭಾಶಯಗಳನ್ನು ಕೋರಿದ್ದಾರೆ.
- ಕರುನಾಡ ಕಂದ ಸುದ್ದಿ




















