ಅತ್ತ ಹೆತ್ತ ತಂದೆ ತಾಯಿ ಮಕ್ಕಳನ್ನು ಗವಿ ಮಠ ಕ್ಕೆ ಶಿಕ್ಷಣಕ್ಕಾಗಿ ಕಳಿಸಿದರು.
ಇಲ್ಲಿ ಮಾತ್ರ ಈ ಮಕ್ಕಳಿಗೆ ಶ್ರೀ ಗವಿ ಮಠ ಕ್ಷೇತ್ರವೆ ತೊಟ್ಟಿಲು.
ಅತ್ತ ಹೆತ್ತ ತಂದೆ ತಾಯಿ ಮಕ್ಕಳು ಹಸಿದಾಗ ಊಟ ಮಾಡಿಸಿದರು.
ಇಲ್ಲಿ ಮಾತ್ರ ಪೂಜ್ಯರು ಜ್ಞಾನ ಮತ್ತು ಬದುಕಿನ ತುತ್ತನ್ನೆ ಉಣಿಸಿದರು.
ಅಲ್ಲಿ ಮಕ್ಕಳಿಗೆ ಗುರು ಭಕ್ತಿ ತಿಳಿಸಲಿಲ್ಲ ಇಲ್ಲಿ ಮಾತ್ರ ಪೂಜ್ಯರು ಶಿಸ್ತು ಸಂಯಮ ಒಳ್ಳೆ ನಡತೆಯನ್ನು ಒದಗಿಸಿದರು.
ಅತ್ತ ಬಡತನದ ಗೊಂದಲದಲ್ಲಿ ಮಕ್ಕಳು ಹೆತ್ತವರಿಗೆ ಬಾರವಾಗದಿರಲು ಸಾಕು ಇಲ್ಲಿ ಮಾತ್ರ ಪೂಜ್ಯರಿಗೆ ಸಾವಿರ ಸಾವಿರ ಮಕ್ಕಳಿದ್ದರು ಬೇಕು.
ಅತ್ತ ಹೆತ್ತವರಿಗೆ ಬಾಳೆಲ್ಲ ಸಾಕಾಗಿ ಜೀವಿಸುವುದೆ ಶಿಕ್ಷೆ. ಇತ್ತ ಮಕ್ಕಳ ಬಾಳಿಗೆ ಬೆಳಕು ತೋರಿದ ಜೀವ ರಕ್ಷೆ ಅದುವೆ ನಮ್ಮ ಕೊಪ್ಪಳದ ಗವಿ ಶ್ರೀಗಳು.
- ಎಸ್ ಎಲ್ ಈಶಪ್ಪ ಮುಸಲಾಪುರ.




















