
ದೇಶದೆಲ್ಲೆಡೆಯಂತೆ ಘಟಪ್ರಭಾ ಪುರಸಭೆಯಲ್ಲಿ ಸಹ ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.
ಇದೆ ಸಂದರ್ಭದಲ್ಲಿ ಕಾಯಿಪಲ್ಯ ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರು ನಡೆಸಿದರು.
ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಂ ಎಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರಾದ ಡಿ ಎಂ ದಳವಾಯಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಕರವೇ ರಾಜ್ಯಾಧ್ಯಕ್ಷರಾದ ಡಾ.ಕೆಂಪಣ್ಣ ಚೌಕಶಿ, ಸಲೀಮ್ ಕಬ್ಬೂರ, ರಾಜಶೇಖರ ರಜಪೂತ,ಆನಂದ ಬನನ್ನವರ, ಶಶಿ ಚೌಕಶಿ, ಮಾರುತಿ ಹುಕ್ಕೇರಿ, ಮಲ್ಲಿಕಾರ್ಜುನ ಕೋಳಿ, ಆನಂದ್ ಬಣ್ಣನವರ,ಸುರೇಶ ಪೂಜಾರಿ, ಬಸವರಾಜ್ ಬಾಗೇವಾಡಿ, ಪುರಸಭೆಯ ಶ್ರೀ ದರ ಪಾಟೀಲ, ಪುರಸಭೆ ಸಿಬ್ಬಂದಿ ವರ್ಗದವರು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ವರದಿ ಮಂಜು ಎಂ. ಚಿಕ್ಕಣ್ಣವರ




















