ಹಬ್ಬದ ಸಂಭ್ರಮ ಮುಗಿದ ನಂತರದಲಿ
ವಿಲೇವಾರಿ ಮಾಡುವ ಮುನ್ನಾ ದಿನದಲಿ
ಆರೋಗ್ಯಕರ ಸ್ಥಿತಿಯ ಪಕಳೆಗಳ ಹೆಕ್ಕುತಲಿ
ವೈವಿದ್ಯ ವಿನ್ಯಾಸಗಳೊಂದಿಗೆ ಜೋಡಿಸುತಲಿ
ಸೃಜನಶೀಲ ಚಿಂತನಾ ಭಾವ ಲಹರಿಯಲಿ
ಬಾಳೆದಿಂಡಿಗೆ ಗುಲಾಬಿ ದಳಗಳ ಲೇಪಿಸುತಲಿ
ಎಲೆಗಳ ಗರಿಗಳ ಜೊತೆ ಸುರುಳಿ ಸೇರಿಸುತಲಿ
ಅರ್ಧಚಂದ್ರ ಅನಾನಸ್ ಹೋಳು ಇರಿಸುತಲಿ
ನೇರಳೆ ಬಣ್ಣದ ಸೇವಂತಿ ದಳಗಳ ಪೋಣಿಸುತಲಿ
ಅರುಣೋದಯದಿ ಅಭಿಮಾನಿಗಳ ನೆನಪಾಗುತಲಿ
ಓದುಗ ಮನಗಳಿಗೆ ಲಘು ಕಾವ್ಯ ಹೆಣೆಯುತಲಿ
ರವಾನಿಸುರತಿರುವೆ ಮುದದಿ ನಲ್ಮನದಂಗಳಗಳಲಿ
- ಲಲಿತಾ ಕೆ ಆಚಾರ್, ಬೆಂಗಳೂರು




















