
ಕಂಪ್ಲಿ: “ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು. ಈ ಸಂಘದ ಮೂಲಕ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಿ, ಶಾಲೆಗಳ ಅಭಿವೃದ್ಧಿಗೆ ಕಂಕಣಬದ್ಧವಾಗಿ ನಿಲ್ಲಲಾಗುವುದು,” ಎಂದು ಒಕ್ಕೂಟದ ನೂತನ ಅಧ್ಯಕ್ಷ ಕೆ.ಎಸ್.ಚಾಂದ್ ಬಾಷಾ ಭರವಸೆ ನೀಡಿದರು.
ಪಟ್ಟಣದ ಸಣಾಪುರ ರಸ್ತೆಯ ರೈನ್‌ಬೋ ಗ್ಲೋಬಲ್ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ’ದ ವಾರ್ಷಿಕ ಮಹಾಜನ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಬಳಿಕ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.
“ಕಷ್ಟಪಟ್ಟು ಕಟ್ಟಿರುವ ಈ ಒಕ್ಕೂಟದ ಪ್ರಗತಿಗಾಗಿ ಶ್ರಮಿಸುತ್ತೇನೆ. ಎಲ್ಲಾ ಶಾಲಾ ಆಡಳಿತ ಮಂಡಳಿಗಳು ನನ್ನ ಮೇಲಿಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವುದಾಗಿ” ಅವರು ಇದೇ ವೇಳೆ ಆಶ್ವಾಸನೆ ನೀಡಿದರು. ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.
ನೂತನ ಪದಾಧಿಕಾರಿಗಳ ಆಯ್ಕೆ :
ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ರಾಜಾ ಶ್ರೀನಿವಾಸ (ಗೌರವಾಧ್ಯಕ್ಷ), ಎಂ.ಸುರೇಶಕುಮಾರ (ಪ್ರಧಾನ ಕಾರ್ಯದರ್ಶಿ), ಬಸವರಾಜ (ಖಜಾಂಚಿ), ನರಸಪ್ಪ ಗಾಣದಾಳ್ (ಸಹ ಕಾರ್ಯದರ್ಶಿ), ಸೋಮನಾಥ ಹೆಬ್ಬಡದ (ಕಾನೂನು ಸಲಹೆಗಾರ) ಹಾಗೂ ಸದಸ್ಯರಾಗಿ ಎಂ.ಮಾರುತಿ, ಕೆ.ಹನುಮಂತಪ್ಪ, ಡಿ.ಷಣ್ಮುಕಪ್ಪ, ಪವನಕುಮಾರ ಗಂಗಾವತಿ, ವಿರುಪಾಕ್ಷಪ್ಪ ಮಹಾಂತಿ, ಹೆಚ್.ಶರಣಪ್ಪ, ಗಾಳೆಪ್ಪ, ಸಿ.ವೆಂಕಟೇಶ, ವಿನಾಯಕ, ರವಿ ಗೋನಾಳು, ಮೈಬೂಬ್ ಆಯ್ಕೆಯಾಗಿದ್ದಾರೆ.
ಸಂಸ್ಥಾಪಕ ಅಧ್ಯಕ್ಷ ಎ.ತಾಂಡವ ಕೃಷ್ಣ, ಶಾಲಾ ಆಡಳಿತ ಮಂಡಳಿಯ ಮುಖಂಡರಾದ ಪ್ರಭಾಕರ ಗೋಡೆ, ಎಚ್.ಎಂ.ವಿಶ್ವೇ ಶ್ವರಯ್ಯಸ್ವಾಮಿ, ಮುತ್ತಣ್ಣ ನಂದ್ಯಾಳ್, ಎಂ.ಮೌಲಾಲಿ, ಬಿ.ಜಿಲಾನಸಾಬ್, ಶಿವುಕುಮಾರ ದೇವಸಮುದ್ರ, ರಾಮಮೋಹನ್, ಬಿ.ಎಲ್.ಸರ್ವೇಶ್ ಹಳೆಕೋಟೆ, ವಿರುಪಾಕ್ಷಪ್ಪಗೌಡ ಮಾಲಿ ಪಾಟೀಲ್, ಎನ್.ನಾಗಪ್ಪ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















