ದುಷ್ಟರ ಬುಡ ಮೇಲಾಗಿಸುವ ಈಟಿಯಾಗಿ
ಪ್ರತಿಭೆಗಳ ಬೆಳಗುವ ಹಣತೆಯಾಗಿ
ಸಾಧಕರ ಸನ್ಮಾನದ ವೇದಿಕೆಯಾಗಿ
ಪತ್ರಿಕೆ ನೆಲೆನಿಂತಿದೆ ಜಾಗೃತವಾಗಿ
ಸಾಹಿತ್ಯ ಸಂಸ್ಕೃತಿಗೆ ಪರಂಪರೆಯಾಗಿ
ಅಕ್ಷರ ಚಿಂತನಗಳಿಗೆ ತಾಲೀಮಾಗಿ
ಬೆಳೆವವರ ಬೆಳವಣಿಗೆಗೆ ಆಸರೆಯಾಗಿ
ಪತ್ರಿಕೆ ನೆಲೆನಿಂತಿದೆ ಚಿಲುಮೆಯಾಗಿ
ಓದುಗ ಪ್ರಭುಗಳಿಗೆ ಸ್ನೇಹಿತನಾಗಿ
ಬರೆವವರ ಕರಗಳಿಗೆ ಕೌಶಲ್ಯವಾಗಿ
ಅರಿವಿಲ್ಲದ ಅಡ್ಡ ಹಾದಿಗೆ ಒಡ್ಡಾಗಿ
ಪತ್ರಿಕೆ ನೆಲೆನಿಂತಿದೆ ಕಣ್ಣಾಗಿ
ಆಸಕ್ತರಿಗೆ ಜ್ಞಾನದ ಸೆಲೆಯಾಗಿ
ಕಲಾವಿದರಿಗೆ ರಂಜಿಸುವ ಕುಂಚವಾಗಿ
ದೇಶ ವಿದೇಶಕ ಬಂಧುವಾಗಿ
ಪತ್ರಿಕೆ ನೆಲೆನಿಂತಿದೆ ಸೇವಕನಾಗಿ
ಸುದ್ದಿ ಸಂಭ್ರಮಗಳ ಪ್ರಸಾರಕನಾಗಿ
ನೀತಿ ನಿಯಮಗಳ ರಕ್ಷಕನಾಗಿ
ಓದುಗರ ಕಂಗಳಿಗೆ ಬೆಳಕಾಗಿ
ಪತ್ರಿಕೆ ನೆಲೆನಿಂತಿದೆ ಕಾಳಜಿಗಾಗಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍
( ಕೊಪ್ಪಳ ಜಿಲ್ಲೆ )




















