ರಾಣೇಬೆನ್ನೂರು:- ಮಾ28. ಸಾರ್ವಜನಿಕ ಶಿಕ್ಷಣ ಇಲಾಖೆಯು ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಚ್
31 ರಿಂದ ಏಪ್ರಿಲ್ 15 ವರೆಗೆ ನಡೆಯಲಿದ್ದು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಮನಸ್ಸು ಕೊಟ್ಟು
ಪರೀಕ್ಷೆ ಬರೆದು ಉತ್ತಮ ಅಂಕಗಳು ಪಡೆದು ಶಾಲೆ ಕಲಿಸಿದ ಗುರುಗಳಿಗೆ ಹಾಗೂ ತಂದೆ ತಾಯಿಗಳಿಗೆ ಮತ್ತು ನಾಡಿಗೆ ಪ್ರೇರಣೆಯಾಗಬೇಕು ಎಂದು ರಾಣೇಬೆನ್ನೂರಿನ ಸಾಹಿತಿ, ಕವಿ ಹಾಗೂ ಶೃಂಗಾರ ಕಾವ್ಯ ಪ್ರಕಾಶನ ಸಂಸ್ಥಾಪಕರಾದ ಬಸವರಾಜ ಬಾಗೇವಾಡಿಮಠರವರು
ಮಕ್ಕಳಿಗೆ ಶುಭ ಹಾರೈಸಿದ್ಧಾರೆ. ಪ್ರತೀ ವರ್ಷದಂತೆ
ಈ ವರ್ಷ ಕರ್ನಾಟಕದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶವನ್ನು ನಮ್ಮ ಇಡೀ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನಕ್ಕೆ ಬರಬೇಕಾದರೆ ನಮ್ಮ ಜಿಲ್ಲೆಯ ಮಕ್ಕಳು ಬದ್ದತೆಯಿಂದ, ಇಚ್ಛಾಶಕ್ತಿಯಿಂದ, ಆತ್ಮವಿಶ್ವಾಸದೊಂದಿಗೆ ಈಗಿನಂದಲೇ ಮಾನಸಿಕ ಸಿದ್ಧರಾಗಿ ಅತ್ಯುನ್ನತ ಫಲಿತಾಂಶಕ್ಕೆ ದೃಢವಾದ ನಿರ್ಧಾರದ ಸಂಕಲ್ಪ ಮಾಡಿಕೊಳ್ಳಿ ಎಂದು ರಾಣೇಬೆನ್ನೂರಿನ ಪ್ರಕಾಶನ ಸಂಸ್ಥೆಯ ಅಧ್ಯಕ್ಷರು ಸರ್ವ ಸದಸ್ಯರು
ಸಲಹೆ ನೀಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ