ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಡಬಲ್ ಇಂಜಿನ್ ಸರ್ಕಾರದಲ್ಲಿ ಅಭಿವೃದ್ಧಿ ಪರ್ವ:ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ ಅಭಿಮತ


ಚಾಮರಾಜನಗರ: ಒಂದು ಕಾಲದಲ್ಲಿ ಇದೆ ಜಿಲ್ಲೆಗೆ ಬರಲು ಮುಖ್ಯ ಮಂತ್ರಿಗಳಾದಿಯಾಗಿ ಮೂಢ ನಂಬಿಕೆಗೆ ಜೋತು ಬಿದ್ದು ಯಾರು ಬರತ್ತಿರಲಿಲ್ಲ ಅಂತಹ ಸಮಯದಲ್ಲಿ ನಮ್ಮ ಬಿಜೆಪಿಯ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಇಲ್ಲಿಗೆ ಬಂದು ಮೂಢನಂಬಿಕೆಯನ್ನು ತೊಡೆದು ಹಾಕಿದ್ದಾರೆ ಇದರ ಮುಂದುವರಿದ ಭಾಗವಾಗಿ ವಿಜಯ ಸಂಕಲ್ಪಯಾತ್ರೆಯನ್ನು ಇಲ್ಲಿಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾರಂಭ ಮಾಡಲಾಯಿತು ಇದರಿಂದ ರಾಜ್ಯದ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ದೊರೆಯಿತು ಎಂದು ತಮಿಳುನಾಡು ಬಿ ಜೆ ಪಿ ಯ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ತಿಳಿಸಿದರು.
ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದ ಪಕ್ಕದಲ್ಲಿರುವ ಮೈದಾನದಲ್ಲಿ ನಡೆದ ಒ ಬಿ ಸಿ ಜಿಲ್ಲಾಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ ರಾಜ್ಯದಲ್ಲಿ ಎಲ್ಲಾ ಶಾಸಕರು ಬೆಂಬಲ ಪಡೆದ ಮೆಲೆ ನಮ್ಮ ಸರ್ಕಾರ ಉತ್ತಮ ಕೆಲಸ ಕಾರ್ಯ ಮಾಡಲಾಯಿತು ನಮ್ಮದು ಎರಡು ಇಂಜಿನ್ ಸರ್ಕಾರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಮ್ಮ ದೇಶವನ್ನು ಉನ್ನತ ಮಟ್ಟದ ಲ್ಲಿ ಕೊಂಡೊಯ್ಯುತ್ತದೆ ನಿಮ್ಮ ಮನೆಗೆ ನಮ್ಮ ಸರ್ಕಾರ ಬರ್ತಿದೆ ,ಮೋದಿಯವರ ಅಧಿಕಾರದ ಘೋಷಣೆ ಸಮಯದಲ್ಲಿ ಜನರಿಗೆ ಪೈಪ್ ಗಳಲ್ಲಿ ನೀರು ಕುಡಿಯಲು ಬಿಡಲಾಗುವುದು ಎಂದು ಹೆಳಿದರು ಅದು ಜಲಜೀವನ್ ಯೋಜನೆಯ ಮೂಲಕವೇ ತೋರಿಸಿ ಎಲ್ಲಾರಿಗೂ ಉದಾಹರಣೆಯಾಗಿದೆ ಈಗಾಗಲೇ ಪೂರ್ಣ ಬಹುಮತದಲ್ಲಿ ಎಲ್ಲಾ ಕಡೆ ಬಂದಿದೆ ಕರ್ನಾಟಕದಲ್ಲಿಯು ನಮ್ಮ ಸರ್ಕಾರ ಬರಬೆಕು ಎಂದರು ನಮ್ಮ ಪಕ್ಷವು ಹಿಂದುಳಿದ ವರ್ಗದ ಸಮಾವೇಶಗಳನ್ನು ಮಾಡತ್ತಿದ್ದೆವೆ ಇದು ಅಭಿವೃದ್ಧಿಯ ಆರಂಭ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗುತ್ತದೆ ಕಾಂಗ್ರೆಸ್ ನಾಯಕರು ವರಿಷ್ಠರ ಕುಟುಂಬಕ್ಕೆ ಖುಷಿ ಮಾಡುತ್ತಿದ್ದಾರೆ ನಮ್ಮ ಪಕ್ಷದವರು ದೇಶದ ಜನರನ್ನು ಖುಷಿ ಪಡಿಸುತ್ತಿದ್ದಾರೆ ಇಲ್ಲಿಯ ಚಾಮರಾಜನಗರ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲು ಬಿ ಜೆ ಪಿ ಬಹುಮತದೊಂದಿಗೆ ರಾಜ್ಯಕ್ಕೆ ಮಾದರಿಯಾಗಲು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಇದೇ ಕಾರ್ಯಕ್ರಮದಲ್ಲಿ
ಡಾಕ್ಟರ್ ಪ್ರೀತನ್ ಮಾತನಾಡಿ ನಮ್ಮ ಜಿಲ್ಲೆಯನ್ನು ಹಿಂದುಳಿದಿದೆ ಎಂಬ ಹಣೆಬರಹ ತೊಡೆದು ಹಾಕಲು ಬಿ ಜೆ ಪಿ ಯನ್ನು ಬೆಂಬಲಿಸಿ ಹಾಗೆಯೇ ತನ್ನ ಅಧಿಕಾರವದಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಅಣ್ಣಾಮಲೈರಂತ ಅಧಿಕಾರಿಗಳು ದೇಶಕೋಸ್ಕರ ದುಡಿಯುತ್ತಿದ್ದಾರೆ ಇದೆ ಬಿ ಜೆ ಪಿ ಯ ಮೂಲ ಉದ್ದೇಶವಾಗಿದೆ ಎಂದರು.
ಜನದ್ವನಿ ವೆಂಕಟೇಶ್ ಮಾತನಾಡಿ ಇಲ್ಲಿನ ಕಾಡಂಚಿನ ಜನರಿಗೆ ನಾನು ಮಾಡಿರುವ ಅಭಿವೃದ್ಧಿ ಕೆಲಸಕಾರ್ಯಗಳಿಗೆ ಎಲ್ಲಾ ಗ್ರಾಮದಲ್ಲಿ ಜನರ ಸೇವೆ ಯಿಂದ ನಾನು ಅಭಾರಿಯಾಗಿದ್ದೇನೆ ನಾನು ಎಲ್ಲರಿಗೂ ಕೆಲಸ ಕಾರ್ಯ ಮಾಡಿದ್ದೇನೆ ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿ ಜೆ ಪಿ ಗೆಲ್ಲಿಸುವುದೆ ನಮ್ಮ ಗುರಿ ಎಂದರು ಇದೇ ಸಂದರ್ಭದಲ್ಲಿ
ಡಾಕ್ಟರ್ ದತ್ತೇಶ್ ಕುಮಾರ್ ಮಾತನಾಡಿ ಇಲ್ಲಿ ನಡೆದ ಸಮಾವೇಶದಲ್ಲಿ ಹಿಂದುಳಿದ ವರ್ಗಗಳು ಬಿ ಜೆ ಪಿ ಜೊತೆಯಲ್ಲಿದ್ದಾರೆ ಎಂಬುದ್ದನ್ನು ತೋರಿಸಿದ್ದಾರೆ ಟೀ ಮಾರುತ್ತಿದ್ದ ಒಬ್ಬ ಸಾಮನ್ಯರು ಪ್ರಧಾನಿಯಾಗಿದ್ದಾರೆ .ಈಗಾಗಲೇ ಹಲವಾರು ದೇಶದ ಬ್ಯಾಂಕ್ ಗಳು ದೀವಾಳಿಯಾಗಿದೆ ಆದರೆ ನಮ್ಮ ದೇಶಕ್ಕೆ ಪ್ರಜ್ವಲಿಸುವ ಶಕ್ತಿಯಿದೆ.ಅದೆ ರೀತಿಯಲ್ಲಿ ವ್ಯವಸಾಯ ಮಾಡಲು ಹೊರಟ ಅಣ್ಣಾಮಲೈ ರವರನ್ನು ದೇಶಕ್ಕೆ ದುಡಿಯಲು ಪ್ರೇರಪಣೆ ನೀಡಿದವರು ಮೋದಿ ಅಂಬೇಡ್ಕರ್ ರಂತ. ಮಹನಿಯರನ್ನು ನೀಡಿದ ದೇಶ ನಮ್ಮದು ಅವೆಲ್ಲರೂ ಒಬಿಸಿಯವರೆ ಆಗಿದ್ದು ಈ ಭಾಗದಲ್ಲಿ ನಾಲ್ಕು ಸ್ಥಾನವನ್ನು ಗೆಲ್ಲಿಸಬೆಕು ಎಂದು ಮನವಿ ಮಾಡಿದರು. ಇದೇ ಸಮಯದಲ್ಲಿ ಒಬಿಸಿ ಹಿಂದುಳಿದ ಮೋರ್ಚಾ ರಾಜ್ಯಾಧ್ಯಕ್ಷರಾದ ನೆ ಲ ನರೇಂದ್ರ ಬಾಬು ಮಾತನಾಡಿ ನನಗೆ ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಹುಟ್ಟಿದ ಕರ್ಮಭೂಮಿ ನಾನು ಕೊಳ್ಳೆಗಾಲದ ಹುಡುಗ ನಾನು ,ರಾಜಕೀಯ ಪಕ್ಷದ ಶಕ್ತಿಯೆ ನನ್ನ ಕಾರ್ಯಕರ್ತರು ,ಚಾಮರಾಜನಗರ ಜಿಲ್ಲೆಯ ಒಬಿಸಿ ಮೋರ್ಚಾದ ಜಿಲ್ಲಾ ಸಮಾವೇಶವಾಗಿದೆ ತಮಿಳುನಾಡಿನ ಬಿಜೆಪಿ ರಾಜ್ಯ ಅಧ್ಯಕ್ಷ ಅಣ್ಣಾಮಲೈ ಬಂದಿದ್ದಾರೆ ಉತ್ತರ ಪ್ರದೇಶದಲ್ಲಿ ಹೇಗೆ ಸಂಪೂರ್ಣ ಬಹುಮತ ಕೊಟ್ಟಿದಾರೊ ಹಾಗೆ ನಮ್ಮ ದಕ್ಷಿಣದಲ್ಲೂ ಸಹ ಬರಬೇಕು. ಜಮ್ಮು ಕಾಶ್ಮೀರ ಸೆರಿದಂತೆ ಒಂದು ದೇಶ ಒಂದು ಸಂವಿಧಾನ ನಮ್ಮ ಉದ್ಧೇಶ ವಾಗಿದೆ ,ಪರಿಶಿಷ್ಟ ಜಾತಿ ಪಂಗಡಕ್ಕೆ ಹೆಚ್ಚು ಮೀಸಲಾತಿ ನಿಡಲಾಗಿದೆ ,.ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲೂ ನಮ್ಮದೆ ಅಧಿಕಾರ ಇರಬೇಕು ದೇಶಕ್ಕಾಗಿ ದುಡಿವ ಪ್ರಧಾನಿ ಎಂದರೆ ಅವರೆ ಮೋದಿ ಸಿ ಎಮ್ ಕೊಟ್ಟ ಕಾರ್ಯಕ್ರಮ ಬಹಳ ಉತ್ತಮವಾಗಿದೆ ಹಲವಾರು ನಿಯಮಗಳನ್ನು ಸ್ಥಾಪಿಸಿದ ಕೀರ್ತಿ ನಮ್ಮದಾಗಿದೆ ಮತದಾರರು ಆಮೀಷಗಳಿಗೆ ಬಲಿಯಾಗಬಾರದು ,ದೇಶ ವಿದೇಶಗಳಲ್ಲಿ ನಮ್ಮ ದೇಶದ ಹೆಸರು ಪ್ರಜ್ವಲಿಸುತ್ತಿದೆ ಎಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಅಭ್ಯರ್ಥಿಗಳನ್ನು ಗೆಲ್ಲಿಸಲು ತಿಳಿಸಿದರು ಇದೇ ಸಮಯದಲ್ಲಿ ,ನಿಶಾಂತ್ ಶಿವಮೂರ್ತಿ, ಜಿಲ್ಲಾ ಒಬಿಸಿ ಕಾರ್ಯದರ್ಶಿ ಲೊಕೇಶ್ ಜಟ್ಟಿ ,ಜಿಲ್ಲಾ ಯುವ ಮೋರ್ಚ ಪ್ರದಾನ ಕಾರ್ಯದರ್ಶಿ ವೃಷಬೇಂದ್ರ ಸ್ವಾಮಿ , ಬೂದಬಾಳು ವೆಂಕಟಸ್ವಾಮಿ,ಗೋಪಾಲಕೃಷ್ಣ ,ಮೈ. ಪು ರಾಜೇಶ್ .ನಟರಾಜೆಗೌಡ , ,ಹನೂರು ಮಂಡಲದ ಅಧ್ಯಕ್ಷ ಸಿದ್ದಪ್ಪ,ಒಬಿ ಸಿ ಅಧ್ಯಕ್ಷರು. ಸೇರಿದಂತೆ ಹಲವು ಗ್ರಾಮದ ಬಿಜೆಪಿ ಕಾರ್ಯಕರ್ತರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಹಾಜರಿದ್ದರು.

ವರದಿ :ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ