ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಥಮ ಜಯದ ಹಿನ್ನೆಲೆಯಲ್ಲಿ ಇಂದು ( ಮಾರ್ಚ್ 30) ಸಿಎಂ ನಿವಾಸದಲ್ಲಿ ಹೋರಾಟದ ರುವಾರಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳವರಿಗೆ ಸಿಎಂ ಬೊಮ್ಮಾಯಿಯವರು ಸರ್ಕಾರಿ ಆದೇಶ ಪತ್ರ ನೀಡಿ ಗೌರವ ಸನ್ಮಾನ ಮಾಡಿದರು
ಲಿಂಗಾಯತ ಪಂಚಮಸಾಲಿಯೊಂದಿಗೆ ಎಲ್ಲಾ ಲಿಂಗಾಯತರಿಗೂ ಮೀಸಲಾತಿಯಲ್ಲಿ ಅವಕಾಶ ಕಲ್ಪಿಸಿ ಕೊಟ್ಟ ಅದೇಶ ಮಾಡಿದ ಮುಖ್ಯಮಂತ್ರಿಗಳಿಗೆ ಶ್ರೀ ಪೀಠದಿಂದ ಅಭಿನಂದಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಚುನಾವನೆ ನೀತಿ ಸಂಹಿತೆ ಜಾರಿ ಇರುವುದರಿಂದ ಹೋರಾಟಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಚುನಾವಣೆ ನಂತರ ಮೀಸಲಾತಿ ಹೆಚ್ಚಳಗಾಗಿ ಕೆಂದ್ರ ಒಬಿಸಿಗಾಗಿ ಹೋರಾಟ ಮಾಡಲಾಗುವುದು
ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾರ್ಚ್ 25 ರಂದು 71 ನೇ ದಿನದ ಸತ್ಯಾಗ್ರಹ ವೇದಿಕೆಯಲ್ಲಿ ಏರ್ಪಡಿಸಿದ್ದ ರಾಜ್ಯ ಕಾರ್ಯ ಕಾರಿನೀಸಭೆಯಲ್ಲಿ ಶ್ರೀಗಳಿಗೆ ಕೊಟ್ಟ ಮಾತಿನಂತೆ ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಾತ್ನಳ್ ರವರು ಮಾರ್ಚ್ 27 ರಂದು ಹೋರಾಡಿಸಲಾಗಿದ್ದ ಸರ್ಕಾರ ಆದೇಶ ಪತ್ರವನ್ನು ಪಡೆಯುವಲ್ಲಿ ಯಶಸ್ವಿಯಾದರು.
ನಾವು ಎರಡು ವರ್ಷದ ಎರಡು ತಿಂಗಳಿಂದ , ಪಂಚಮಸಾಲಿ ಲಿಂಗಾಯತ ಗೌಡ , ಮಲೆಗೌಡ ದೀಕ್ಷಾ ಲಿಂಗಾಯತ, ಮಕ್ಕಳಿಗಾಗಿ ಶ್ರೀಪೀಠವನ್ನು ಬಿಟ್ಟು ಪಾದಯಾತ್ರೆ , ಸಮಾವೇಶ , ಸತ್ಯಾಗ್ರಹ ಮೂಲಕ ಐತಿಹಾಸಿಕ ಹೋರಾಟ ಮಾಡುತ್ತಾ ಬರುತ್ತಿದ್ದೇವೆ.
ನಾವು ಕೇಳಿದ್ದು ಶೇ 15 ರ 2ಎ ಮೀಸಲಾತಿ. ಅದರೆ ಸರ್ಕಾರ ಶೇ 7 ರ 2d ಎಂಬ ನೂತನ ಮೀಸಲಾತಿ ಸೃಷ್ಟಿ ಮಾಡಿತು
2ಎ ಮೀಸಲಾತಿ ಪಡೆಯಲು ಉಚ್ಚಾ ನ್ಯಾಯಾಲಯದಲ್ಲಿ ತಡೆ ಇರುವುದರಿಂದ 2d ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಿ ಸರ್ಕಾರ ಶೇ 7 ರ ಮೀಸಲಾತಿ ಕೊಟ್ಟಿರುವುದು ನಮ್ಮ ನಿರಂತರ ಹೋರಾಟಕ್ಕೆ ಪ್ರಥಮ ಐತಿಹಾಸಿಕ ಜಯವಾಗಿದೆ.
ನಮ್ಮ ಹೋರಾಟದಿಂದ ಎಲ್ಲಾ ಲಿಂಗಾಯತ ಒಳಪಂಗಡಗಳಿಗೆ ಹಾಗೂ ಇತರೆ ಸಮಾಜಗಳಿಗೆ ಮೀಸಲಾತಿಯನ್ನು ಪಡೆಯಲು ಅವಕಾಶ ಮಾಡಿಕೊಟ್ಟ ಸಮಾಜ ನಮ್ಮದು ಎಂದು ಹೆಮ್ಮೆಯಿಂದ ಹೇಳಬೇಕಾಗುತ್ತದೆ.
ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಮೀಸಲಾತಿ ನೀಡುವಂತೆ ಪ್ರಯತ್ನಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಹಾಗೂ ಆದೇಶ ಪಾಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಕೆಂದ್ರ ಸಚಿವೆ ಶೋಭಾ ಕರಾಂದ್ಲಜೆಯವರಿಗೆ ಅಭಿನಂದನೆಗಳು.
ನಮ್ಮ ಹೋರಾಟ ಸಮಿತಿ ಅಧ್ಯಕ್ಷ ಬಸವನಗೌಡ ಪಾಟೀಲ ಯಾತ್ನಳ್,ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರಿಗೆ ಕಾರ್ಯದರ್ಶಿ ಎಚ್ ಎಸ್ ಶಿವಶಂಕರ,ವಿನಯ ಕುಲಕರ್ಣಿ,ಸಚಿವ ಸಿಸಿ ಪಾಟೀಲ್ ,ಸಚಿವ ಶಂಕರ ಪಾಟೀಲ್ ಮುನೆನಕೊಪ್ಪ, ಎಬಿ ಪಾಟೀಲ್ , ಸಿದ್ದುಸವದಿ , ಅರವಿಂದ ಬೆಲ್ಲದ್ ಸಂಸದರಾದ ಕರಡಿ ಸಂಗಣ್ಣ , ಈರಣ್ಣ ಕಡಾಡಿ, ಲಕ್ಷ್ಮಿ ಹೆಬ್ಬಳಕಾರ್ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಚಿವರುಗಳಿಗೆ ಎಲ್ಲಾ ಪಕ್ಷಗಳ ಹಾಲಿ ಮಾಜಿ ಜನಪ್ರತಿನಿಧಿಗಳಿಗೆ ,ಕಾನೂನು ತಜ್ಞ ದಿನೇಶ್ ಪಾಟೀಲ್ , ಮಲೆಗೌಡ ಲಿಂಗಾಯತ ಗೌಡ ದೀಕ್ಷಾ ಲಿಂಗಾಯತ ಮುಖಂಡರುಗಳಿಗೆ ನಾಡಿನ ಎಲ್ಲಾ ಪದಾಧಿಕಾರಿಗಲಿಗೆ ,ವಿವಿಧ ಘಟಕಗಳ ಪದಾಧಿಕಾರಿಗಲಿಗೆ , ಮಾಧ್ಯಮದವರಿಗೆ ಹಾಗೂ ಸಮಾಜದ ಪ್ರತಿಯೊಬ್ಬನಿಗೂ ಅಭಿನಂದನೆಗಳು.
ಸಹಕರಿಸಿದ ಎಲ್ಲಾ ಸಮಾಜ ಬಾಂಧವರಿಗೆ ವಿಧಾನ ಸಭಾ ಕ್ಷೇತ್ರಗಳಿಗೆ ತೆರಳಿ ಸಮಾಜ ಬಾಂಧವರಿಗೆ ಅಭಿನಂದನೆ ಸಲ್ಲಿಸಿ ಮೀಸಲಾತಿಯ ಅರಿವನ್ನು ಮೂಡಿಸಲಾಗುವುದು.
ಲಿಂಗಾಯತ ಪಂಚಮಸಾಲಿ ಮೀಸಲಾತಿ ಆದೇಶ ಪತ್ರ ದೊರೆತ ಕಾರಣ ಸಮಾಜ ಬಾಂಧವರು ಗ್ರಾಮ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ವಿಜಯೋತ್ಸವ ಮಾಡಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ದ್ರಾಕ್ಷಿ ನಿಗಮದ ಅಧ್ಯಕ್ಷ ಎಂ ಎಸ್ ರುದ್ರಗೌಡ,ಶಾಸಕ ಸಿದ್ದುಸವದಿ,ಮಾಜಿ ಸಚಿವ ಶಶಿಕಾಂತ್ ನಾಯಕ,ಪಂಚಸೇನಾ ಅಧ್ಯಕ್ಷ ಡಾ ಬಿ ಎಸ್ ಪಾಟೀಲ್ ನಾಗರಳ್ ಹುಲಿ ಯುವ ಅಧ್ಯಕ್ಷ ಗುಂಡು ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.