ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮುತನಾಳ ಗ್ರಾಮದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿದ ಜನಪ್ರಿಯ ಶಾಸಕಿ ಶ್ರೀಮತಿ ಲಕ್ಷ್ಮೀ ಅಕ್ಕಾ ಹೆಬ್ಬಾಳಕರ ಅವರು ತಮ್ಮೆಲ್ಲಾ ಅಭಿಮಾನಿಗಳ ದಂಡನ್ನು ಕರೆದುಕೊಂಡು ತೆರೆದ ವಾಹನದಲ್ಲಿ ಅಪಾರ ಸಂಖ್ಯೆಯ ಜನರೊಂದಿಗೆ ಮುತನಾಳ ಗ್ರಾಮದ ಪ್ರತಿ ಬೀದಿಗಳಲ್ಲಿ ಮೆರವಣಿಗೆ ಮೂಲಕ ಇನ್ನಷ್ಟು ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಹಾಗೂ ಮತ್ತಷ್ಟೂ ಅಭಿವೃದ್ಧಿ ಮಾಡಲು ಈ ಸಲ ಬಾರಿ ಅಂತರದಿಂದ ಗೆಲುವು ನಮ್ಮದಾಗಬೇಕೆಂದು ಮನೆ ಮನೆಗೆ ತೆರಳಿ ಮತದಾರನ ಮನವೊಲಿಸುವಲ್ಲಿ ಯಶಸ್ವಿಯಾದರು ಇದೇ ವೇಳೆ ಸುತ್ತಮುತ್ತಲಿನ ಹಳ್ಳಿಗಳ ಜನರು ಹಾಗೂ ಗ್ರಾಮದ ಯುವಕರು ಮಹಿಳೆಯರು ಹಿರಿಯರು ಸಹಕಾರ ನೀಡಿ ಲಕ್ಷ್ಮೀ ಅಕ್ಕಾ ಗೆಲ್ಲೋದು ಪಕ್ಕಾ ಅಂತಾ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು ಸುಮಾರು ಎರಡು ಗಂಟೆಗಳ ಕಾಲ ಬೀದಿಗಳಲ್ಲಿ ರೋಡ್ ಶೋ ಮಾಡುವುದರ ಮೂಲಕ ಗಮನ ಸೆಳೆದರು ಒಂದು ಲೆಕ್ಕಾಚಾರದ ಪ್ರಕಾರ ಯಾವುದೇ ಕಾರಣಕ್ಕೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಪೈಪೋಟಿ ನೀಡಲು ಕೈ ನಾಯಕಿಗೆ ಯಾರಿಂದಲೂ ಅಸಾಧ್ಯ ಎಂಬಂತಹ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು ಕಾರಣ ನಿರಂತರ ಅಭಿವೃದ್ಧಿ ಕಾಮಗಾರಿಗಳು ಚಾಲನೆಯಲ್ಲಿದ್ದು ಜೊತೆಗೆ ಸಂಘಟನಾ ಕೌಶಲ್ಯ ಅಮೋಘವಾಗಿದ್ದು ಯಾವುದೇ ತಂತ್ರಗಳಿಗೆ ಕೈ ನಾಯಕಿಯನ್ನು ಅಲುಗಾಡಿಸುವುದು ಕಷ್ಟದ ಕೆಲಸ ಎಂಬಂತೆ ಯುವಕರ ಮತ್ತು ಮಹಿಳೆಯರ ದುಂಡು ಮತದಾರನ ಅವಧಾನ ಬೇರೆಡೆಗೆ ವರ್ಗಾವಣೆ ಆಗದಂತೆ ಒಂದಲು ಒಂದು ಕೈ
ಕಾರ್ಯಕ್ರಮದ ಮೂಲಕ ಜನರ ಅಭಿಪ್ರಾಯದ ಸಂವಹನ ಕೌಶಲ್ಯ ಆಳವಾಗಿ ಅವಲಂಬಿತವಾಗುವಂತೆ ಮಾಡಿದ್ದು ಸಹಜವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಜನಜನಿತವಾಗಿರುವ ಉದ್ಘೋಷನೆ ಲಕ್ಷ್ಮೀ ಅಕ್ಕಾ ಗೆಲ್ಲೋದು ಪಕ್ಕಾ ಜೊತೆಗೆ ಅಭಿವೃದ್ಧಿಯ ಮಹಾರಾಣಿ. ಎಂಬ ಬಿರುದು ಹೊತ್ತುಕೊಂಡಿರುವ ಹಾಲಿ ಶಾಸಕರು ಮತ್ತೊಮ್ಮೆ ವಿಜಯದುದುಂಭಿಯನ್ನೂ ಹಾರಿಸುವುದಲ್ಲಿ ಅನುಮಾನವಿಲ್ಲ ಎಂಬಂತಹ ವಿದ್ಯಮಾನಗಳು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಗರಿಗೆದುರುತ್ತಿವೆ ಎಂಬುವುದು ಕ್ಷೇತ್ರದಲ್ಲಿನ ಜನರ ಅಭಿಪ್ರಾಯವಾಗಿದೆ ಮುಂದಿನ ದಿನಗಳಲ್ಲಿ ಇತರೆ ಪಕ್ಷಗಳು ಹೇಗೆ ಪೈಪೋಟಿಯನ್ನೂ ನೀಡುತ್ತವೆ ಎಂಬುದು ಕುತೂಹಲದ ಸಂಗತಿಯಾಗಿದೆ. ಬೃಹತ್ ರೋಡ್ ಶೋನಲ್ಲಿ ಶ್ರೀ ಅಡಿವೆಪ್ಪಗೌಡ ಪಾಟೀಲ ಶ್ರೀ ರುದ್ರಗೌಡ ಹುಬ್ಬಳ್ಳಿ ಶ್ರೀ ಪಾರ್ಶ್ವನಾಥ ಪಾರಿಶ್ವಾಡ ರುದ್ರಪ್ಪಾ ಮಂಗಳಗಟ್ಟಿ ಅನಂತ ಕಕ್ಕಾಳಿ ಸಂಜೀವ ಹುಲಮನಿ ಇತರರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.