ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತಾವರಗೇರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಪಕ್ಷಿಗಳಿಗೆ ಕುಡಿಯುವ ನೀರಿನ ಅರವಟ್ಟಿಗೆ ಕಾರ್ಯಕ್ರಮ ನೆರವೇರಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಲೇಜು ಪ್ರಾಂಶುಪಾಲರಾದ ಅರುಣಾ ಕುಮಾರಿ ಮೇಡಂ ಪಕ್ಷಿಗಳ ಅರವಟ್ಟಿಗೆಗೆ ನೀರು ಹಾಕಿ ಚಾಲನೆ ನೀಡಿ ಮಾತನಾಡಿದ ಅವರು ವನಸಿರಿ ಫೌಂಡೇಶನ್ ತಂಡ ಅಮರೇಗೌಡ ಮಲ್ಲಾಪೂರ ಅವರ ನೇತೃತ್ವದಲ್ಲಿ ಸುಮಾರು ವರ್ಷಗಳಿಂದ ರಾಜ್ಯಾದ್ಯಂತ ಗಿಡಮರಗಳನ್ನು ನೆಟ್ಟು ಪೋಷಿಸಿ,ಇಡೀ ಕಲ್ಯಾಣ ಕರ್ನಾಟಕವನ್ನು ಹಸಿರುಕರಣ ಮಾಡುವಲ್ಲಿ ಬಹಳ ಶ್ರಮವಹಿಸುತ್ತಿದ ವನಸಿರಿ ತಂಡ ಬೇಸಿಗೆ ಕಾಲದಲ್ಲಿ ಪಕ್ಷಿಗಳ ಉಳಿವಿಗಾಗಿ ವಿನೂತನವಾಗಿ ಪಕ್ಷಿಗಳಿಗೆ ಎಪ್ರಿಲ್ ಕೂಲ್ ಮಾಡಲು ರಾಜ್ಯದ ಪರಿಸರ ಪ್ರೇಮಿಗಳಿಗೆ ಕರೆ ನೀಡಿರುವುದು ನಿಜಕ್ಕೂ ಶ್ಲಾಘನೀಯ ಈ ಕಾರ್ಯಕ್ರಮವನ್ನು ವನಸಿರಿ ತಂಡದ ಸದಸ್ಯರು ನಮ್ಮ ಕಾಲೇಜಿನಲ್ಲಿ ಹಮ್ಮಿಕೊಂಡಿರುವುದು ನಮಗೆ ತುಂಬಾ ಸಂತೋಷವಾಗುತ್ತಿದೆ ಈ ಕಾರ್ಯ ಹೀಗೆ ಮುಂದುವರೆಯಲಿ ಈ ವನಸಿರಿ ತಂಡಕ್ಕೆ ಯಾವಾಗಲೂ ಬೆಂಬಲವಾಗಿ ಇರುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಅರುಣ ಕುಮಾರಿ.ಟಿ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೇವರಾಜ ಕಂಪ್ಯೂಟರ ಆಪರೇಟರ್,
ವನಸಿರಿ ಫೌಂಡೇಶನ್ ಸದಸ್ಯರಾದ ಶ್ರೀಧರ, ಭಾಷಾವಲಿ,ಲೋಹಿತ
ಮಣಿಕಂಠ,ವೀರೇಶ,ಜಮೀರ,ಮಹಮ್ಮದ,ಅಶೋಕ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.