ಬಂದೈತಿ ನೋಡು ಈ ವರ್ಷ ಮತದಾನ
ಮಾಡು ಹದಿನೆಂಟರ ಯುವಕ ಮತದಾನ
ಕೇಳಬೇಡ ಜೇಬು ತುಂಬಿಕೊಳ್ಳಬೇಡ ಮಾಡು ಮತದಾನ ಅಜ್ಜ ಅಜ್ಜಿಯರನ್ನು ಕರೆದುಕೊಂಡು ಹೋಗಿ ಮತದಾನ ಮಾಡಿಸು ಒಂದು ಪವಿತ್ರವಾದ ಮತದಾನ//
ಬೇಕು ಬೇಡಗಳು ನೀಡಿದ ವ್ಯಕ್ತಿಯನ್ನು ಬಿಟ್ಟು ಬಿಡು
ನಿನ್ನ ಗ್ರಾಮ ಅಭಿವೃದ್ಧಿಯ ಹರಿಕಾರನಿಗೆ ನಿನ್ನ ಮತನೀಡು
ಕನಸು ನನಸಾಗಿಸುವರನ್ನು ಮತದಾನ ಮಾಡು
ಎಂಥ ಚೆಂದನೋಡು ಐದು ವರ್ಷಕ್ಕೊಮ್ಮೆ
ನಡೆದಾದ ಮತದಾನ//
ಬಣ್ಣದ ಮಾತು ಹೇಳಿ ಮರಳು ಮಾಡುತ್ತಾರೆ,
ಹಳ್ಳಿಯ ಮುಗ್ಧ ಮನಸುಗಳಿಗೆ
ಹೈರಾಣ ಮಾಡ್ತಾರ ನೋಡು
ಹಳ್ಳಿ ಹೈದಾರ ಮುಗ್ಧ ಜನಕ್ಕೆ ಏನು ಗೊತ್ತಾ ಇವರು ಮಾಡುವುದು ಮಾತಿನ ಮರಳು ಅಂತ//
ಜಾತ್ರೆ ಖಾತ್ರಿ ಆದಾಗ ಇರ್ತಾರ ವಿಧಾನಸೌದ್ಧಾಗ
ಹಳ್ಳಿ ಬಗ್ಗೆ ಕ್ಯಾರೆ ಅನ್ನುವುದಿಲ್ಲ
ತಮ್ಮ ಮನೆ ತುಂಬಿಕೊಳ್ಳುತ್ತಾರೆ ಸುಮ್ಮನೆ,
ಇದುವೇ ನೋಡು ಐದು ವರ್ಷಕ್ಕೊಮ್ಮೆ ನಡೆಯುತ್ತದೆ ಮತದಾನ//
ಎಲೆಕ್ಷನ್ ಮುನ್ನ ದಿನ ಹೆಂಡಕಾಗಿ
ನಿನ್ನ ಅಮೂಲ್ಯ ಮತದಾನ ಮಾರಿಕೊಳ್ಳದೆ,
ದೇಶದ ಏಳಿಗೆಗಾಗಿ ಮತದಾನ ಮಾಡು
ಮೇ ಹತ್ತು ತಪ್ಪದೆ ಮತದಾನ ಮಾಡು//
-ಮಾಹಾಂತೇಶ ಖೈನೂರ