ಯಾದಗಿರಿ: ರಾಜ್ಯ ವಿಧಾನ ಸಭೆ ಚುನಾವಣೆಗೆ ಬುಧವಾರ ನಡೆದ ಮತದಾನದಲ್ಲಿ ಯಾದಗಿರಿ ಜಿಲ್ಲೆ ನಾಲ್ಕು ಮತಕ್ಷೇತ್ರಗಳಲ್ಲಿ ಸಾಯಂಕಾಲ 6 ಗಂಟೆಗೆ ಶೇ 66.66 ರಷ್ಟು ಮತದಾನ ಆಗಿದೆ.
ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೋಂಡಿತ್ತಾದರೂ ನಗರ ಪಟ್ಟಣ ಪ್ರದೇಶಗಳಲ್ಲಿ ಮೊದಲ ನಾಲ್ಕೈದು ಗಂಟೆಗಳವರೆಗೆ ಮನೆ ಬಿಟ್ಟು ಹೊರಬಾರದ ಮತದಾರರ ಗುಟ್ಟು ಹಾಗೂ ನೀರಸ ಮತದಾನದಿಂದ ಆತಂಕ ಮೂಡಿಸಿತು
ಬೆಳಿಗ್ಗೆ ವಾತಾವರಣ ತಂಪಿತ್ತಾದರೂ ಮದ್ಯಾಹ್ನ ಸುಮಾರಿಗೆ ಅನೇಕರ ಬೆವರಿಳಿಸಿತ್ತು ಸಾಯಂಕಾಲದ ಹೊತ್ತಿಗೆ ಮೊಡ ಕವಿದ ವಾತಾವರಣ ಕಂಡು ಬಂದಿತ್ತು ಆರಂಭದಲ್ಲಿ ಕಂಡು ಬಂದತಹ ನೀರಸ ಪ್ರತಿಕ್ರಿಯೆ ರಾಜಕೀಯ ಪಕ್ಷಗಳಿಗೆ ದುಗುಡಕ್ಕೆ ಕಾರಣವಾಗಿತ್ತು.
ಸಂಜೆ 6 ಗಂಟಗೆ ಮತದಾನ ಮುಕ್ತಾಯವಾದರೂ ವಡಗೇರಾ ತಾಲುಕಿನ ಕೆಲವು ಕಡೆ ಮತದಾನ ಮಾಡಲಾಗದೆ ನಿರಾಸೆಯಿಂದ ಹಲವಾರು ಮತದಾರರು ಮತದಾನ ಮಾಡದೆ ಹಿಂದಿರುಗಿದ ಘಟನೆ ನಡೆಯಿತ್ತಾದರೂ ಶಹಾಪುರ ಮತಕ್ಷೇತ್ರದಲ್ಲಿ ಮತದಾನ ಶೇ 69.26 ಸುರಪುರದಲ್ಲಿ ಶೇ 68 ಯಾದಗಿರಿಯಲ್ಲಿ ಶೇ 64.53 ಗುರ್ಮಿಟ್ಕಲ್ ನೆಲ ಶೇ 64.7 ಮತದಾನವಾಗಿದೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಮತದಾನಕ್ಕೆ ಉತ್ಸುಕತೆ ಕಂಡು ಬಂದಿತ್ತು.
ವರದಿ :ರಾಜಶೇಖರ ಮಾಲಿ ಪಾಟೀಲ್ ಶಹಾಪುರ